ಪಣಜಿ: ಗೋವಾದಲ್ಲಿ ಆಪ್ ಅಧಿಕಾರಕ್ಕೆ ಬಂದರೆ 18 ವರ್ಷ ಮೇಲ್ಪಟ್ಟ ಯುವತಿಯರಿಗೆ ಭರ್ಜರಿ ಆಫರ್ ನೀಡುವುದಾಗಿ ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಭರವಸೆ ನೀಡಿದ್ದಾರೆ.
ಪಕ್ಷವು ಅಧಿಕಾರಕ್ಕೆ ಬಂದಲ್ಲಿ ಅಯೋಧ್ಯೆಯ ರಾಮ ಮಂದಿರ, ಅಜ್ಮೀರ್ ಷರೀಫ್ ಮತ್ತು ರಾಜ್ಯದಲ್ಲಿನ ವೇಲಂಕಣಿಯಲ್ಲಿ ಕ್ರಮವಾಗಿ ಹಿಂದೂಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಿಗೆ ಉಚಿತ ರಾಜ್ಯ ಪ್ರಾಯೋಜಿತ ತೀರ್ಥಯಾತ್ರೆಗಳನ್ನು ಕಲ್ಪಿಸುವುದಾಗಿ ಹೇಳಿದ್ದರು. ಇದೀಗ 2022ರಲ್ಲಿ ವಿಧಾನಸಬೇ ಚುನಾವಣೆ ನಡೆಯಲಿದೆ. ಪಕ್ಷ ಅಧಿಕಾರ ಬಂದರೆ 18 ವರ್ಷ ಮೇಲ್ಪಟ್ಟ ಯುವತಿಯರಿಗೆ ಪ್ರತಿ ತಿಂಗಳು 1,000 ರೂಪಾಯಿ ಹಣ ನೀಡುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ ಕುಟುಂಬದಿಂದ ಗಂಧದಗುಡಿಯ 3ನೇ ಪ್ರಯೋಗ
Advertisement
Advertisement
ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಹಿಳೆಯರಿಗೆ ಹಲವು ಯೋಜನೆಗಳನ್ನು ಜಾರಿಗೊಳಿಸುವ ಭರವಸೆ ನೀಡಿದ್ದು, ಗೃಹ ಆಧಾರ್ ಫಲಾನುಭವಿಗಳಿಗೆ ಪ್ರತಿ ತಿಂಗಳು ನೀಡಲಾಗುತ್ತಿರುವ ಮೊತ್ತವನ್ನು 1,500 ರಿಂದ 2,500 ಕ್ಕೆ ಏರಿಕೆ ಮಾಡಲಾಗುವುದು. 18 ವರ್ಷದ ಮೇಲ್ಪಟ್ಟ ಪ್ರತಿ ಮಹಿಳೆಯರಿಗೂ ಮಾಸಿಕ 1,000 ರೂಪಾಯಿಗಳನ್ನು ನೀಡಲಾಗುತ್ತದೆ ಇದು ವಿಶ್ವದಲ್ಲೇ ಅತಿ ದೊಡ್ಡ ಹಾಗೂ ಅತ್ಯಂತ ಪರಿಣಾಮಕಾರಿಯಾದ ಮಹಿಳಾ ಸಬಲೀಕರಣ ಯೋಜನೆಯಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಕ್ಷ ಅಧಿಕಾರಕ್ಕೆ ಬಂದ್ರೆ ಉಚಿತ ತೀರ್ಥಯಾತ್ರೆ: ಅರವಿಂದ್ ಕೇಜ್ರಿವಾಲ್
Advertisement
CM @ArvindKejriwal announces a Huge Guarantee for the Women of Goa:
➖Griha Aadhar will be increased from Rs 1500 to Rs 2500/month
➖Rs 1000/month to every female over 18 yrs
“This is the BIGGEST & the most effective Women Empowerment program in the World!” #EkChanceKejriwalak pic.twitter.com/SvurFeg3Fl
— AAP (@AamAadmiParty) December 5, 2021
Advertisement
ಈ ಹಿಂದೆ ಕೇಜ್ರಿವಾಲ್ ನಮ್ಮ ಸರ್ಕಾರ ರಚನೆಯಾದರೆ, ನಾವು ಅಯೋಧ್ಯೆಗೆ ಉಚಿತ ತೀರ್ಥಯಾತ್ರೆಗೆ ಅನುಕೂಲ ಮಾಡಿಕೊಡುತ್ತೇವೆ. ಶ್ರೀರಾಮನ ದರ್ಶನಕ್ಕೆ ಸಹಾಯ ಮಾಡುತ್ತೇವೆ. ಕ್ರಿಶ್ಚಿಯನ್ನರಿಗೆ ವೆಲಂಕಣಿಗೆ ಉಚಿತ ತೀರ್ಥಯಾತ್ರೆ, ಮುಸ್ಲಿಮರಿಗೆ ಅಜ್ಮೀರ್ ಷರೀತ್‍ಗೆ ತೀರ್ಥಯಾತ್ರೆ, ಗೋವಾದಲ್ಲಿ ಶಿರಡಿಯನ್ನು ಬಹುವಾಗಿ ನಂಬುವುದರಿಂದ, ನಾವು ಅವರಿಗೆ ಶಿರಡಿ ತೀರ್ಥಯಾತ್ರೆಗೆ ಅವಕಾಶವನ್ನು ನೀಡುತ್ತೇವೆ ಎಂದು ಕೇಜ್ರಿವಾಲ್ ಹೇಳಿದರು, ಕೆಲವು ವರ್ಷಗಳ ಹಿಂದೆ ದೆಹಲಿ ಸರ್ಕಾರವು ಪರಿಚಯಿಸಿದ ನಂತರ 35,000 ಜನರು ಈ ಯೋಜನೆಯಿಂದ ಪ್ರಯೋಜನ ಪಡೆದಿದ್ದಾರೆ ಎಂದು ಹೇಳಿದ್ದರು, ಇದೀಗ 18 ವರ್ಷ ಮೇಲ್ಪಟ್ಟವರಿಗೆ ಆಫರ್ ನೀಡಿದ್ದಾರೆ.