ಗಾಂಧಿನಗರ: ಗುಜರಾತ್‍ನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ 300 ಯೂನಿಟ್ ವಿದ್ಯುತ್ ತಿಂಗಳಿಗೆ ಉಚಿತವಾಗಿ ನೀಡುವುದಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಭರವಸೆ ನೀಡಿದ್ದಾರೆ.
Advertisement
ಸೂರತ್‍ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗುಜರಾತ್‍ನಲ್ಲಿ ಜನ ಬದಲಾವಣೆ ಬಯಸಿದ್ದಾರೆ. ಗುಜರಾತ್‍ನಲ್ಲಿ ಎಎಪಿ ಅಧಿಕಾರಕ್ಕೇರಿದರೆ ತಿಂಗಳಿಗೆ 300 ಯೂನಿಟ್ ಉಚಿತ ವಿದ್ಯುತ್ ನೀಡುತ್ತೇವೆ. ಗುಜರಾತ್‍ನ ಜನ ಭಯದ ಜೀವನ ನಡೆಸುತ್ತಿದ್ದಾರೆ. 27 ವರ್ಷಗಳಿಂದ ಒಂದೇ ಪಕ್ಷ ಆಡಳಿತದಿಂದ ಬೇಸತ್ತಿರುವ ಜನರು ಬದಲಾವಣೆ ಬಯಸುತ್ತಿದ್ದಾರೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಇಲ್ಲಿ 24 ಗಂಟೆ ವಿದ್ಯುತ್ ನೀಡಲು ಪ್ರಯತ್ನಿಸುತ್ತೇವೆ. ದೆಹಲಿ, ಪಂಜಾಬ್‍ನಲ್ಲಿ ವಿದ್ಯುತ್ ಉಚಿತ ನೀಡಿದಂತೆ ಗುಜರಾತ್ ಜನತೆಗೂ ಉಚಿತ ವಿದ್ಯುತ್ ನೀಡುತ್ತೇವೆ ಎಂದು ಆಶ್ವಾಸನೆ ನೀಡಿದ್ದಾರೆ. ಇದನ್ನೂ ಓದಿ: ಬಿಲ್‌ಗೇಟ್ಸ್ ಹಿಂದಿಕ್ಕಿ ವಿಶ್ವದ 4ನೇ ಶ್ರೀಮಂತ ವ್ಯಕ್ತಿಯಾದ ಗೌತಮ್ ಅದಾನಿ
Advertisement
Advertisement
ನಮಗೆ ರಾಜಕೀಯ ಮಾಡುವುದು ಗೊತ್ತಿಲ್ಲ, ನಮ್ಮದು ಪ್ರಾಮಾಣಿಕರ ಪಕ್ಷ, ಕೆಲಸ ಮಾಡದಿದ್ದರೆ ಮತ ಹಾಕಬೇಡಿ. ನಮ್ಮ ಸರ್ಕಾರ ಬಂದರೆ ಮೂರು ತಿಂಗಳಲ್ಲಿ 300 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುತ್ತೇವೆ. 24 ಗಂಟೆಗಳ ಕಾಲ ವಿದ್ಯುತ್ ಲಭ್ಯವಿರುತ್ತದೆ, ವಿದ್ಯುತ್ ಕಡಿತ ಇರುವುದಿಲ್ಲ. ನಮಗೆ ಗುಜರಾತ್‍ನಲ್ಲಿ ಅಧಿಕಾರ ನೀಡಿ ಎಂದು ಗುಜರಾತ್ ಜನತೆಯೊಂದಿಗೆ ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ಇಡಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ – ಬ್ಯಾರಿಕೇಡ್ ಮೇಲಿಂದ ಹಾರಿದ ಡಿಕೆಶಿ ವಶ
Advertisement
ಆಡಳಿತ ಪಕ್ಷ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕೇಜ್ರಿವಾಲ್, ಹಲವು ಪಕ್ಷಗಳು ಚುನಾವಣೆಗೆ ಮುನ್ನ ಬಂದು ಜನರಿಗೆ ಸುಳ್ಳು ಭರವಸೆ ನೀಡುವುದನ್ನು ನೋಡಿದ್ದೇವೆ. ಚುನಾವಣೆ ಬಳಿಕ ನೀಡಿದ ಭರವಸೆಯನ್ನು ಮರೆಯುತ್ತಾರೆ. ನಾವು ಚುನಾವಣಾ ಗಿಮಿಕ್‍ಗಳನ್ನು ಹೇಳುವುದಿಲ್ಲ. ನಾವು ಏನು ಹೇಳುತ್ತೇವೆಯೋ ಅದನ್ನು ಮಾಡುತ್ತೇವೆ ಇದು ಖಂಡಿತ ಎಂದಿದ್ದಾರೆ.
गुजरात इस बार भविष्य की तरफ़ देख रहा है। गुजरात की जनता को आम आदमी पार्टी की पहली गारंटी। दिल्ली की तरह गुजरात में भी 24 घंटे मुफ़्त बिजली देंगे | LIVE https://t.co/8A3UxpNXt7
— Arvind Kejriwal (@ArvindKejriwal) July 21, 2022
ಆಮ್ ಆದ್ಮಿ ಪಕ್ಷ ಕಟ್ಟಿ ರಾಷ್ಟ್ರ ರಾಜಧಾನಿಯಲ್ಲಿ ಸತತ ಎರಡನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಿರುವ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ತಮ್ಮ ಪಕ್ಷ ದೆಹಲಿ ಬಳಿಕ ಪಂಜಾಬ್‍ನಲ್ಲಿ ಅಧಿಕಾರಕ್ಕೇರುವಂತೆ ಮಾಡಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯದ ಮೇಲೆ ಕಣ್ಣಿಟ್ಟಿದ್ದು ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುವಂತೆ ಕಾರ್ಯಕರ್ತರಿಗೆ ಸೂಚಿಸಿದ್ದಾರೆ.