– ವೈರಲ್ ಆಯ್ತು ‘ದ್ರೌಪದಿ ವಸ್ತ್ರಾಪಹರಣ’ ಪೋಸ್ಟ್
ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ (Delhi Election Results) ಹೀನಾಯ ಸೋಲನುಭವಿಸಿದ ಎಎಪಿಯನ್ನು ಕೌರವರಿಗೆ ಹೋಲಿಸಿ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ (Swati Maliwal) ಟಾಂಗ್ ಕೊಟ್ಟಿದ್ದಾರೆ.
Advertisement
ರಾಷ್ಟ್ರ ರಾಜಧಾನಿಯಲ್ಲಿ ತನ್ನ ದಶಕದ ಆಳ್ವಿಕೆಯ ಅಂತ್ಯವನ್ನು ಎಎಪಿ ಕಂಡಿದೆ. ಆಪ್ ಸೋಲಿಗೆ ಟಕ್ಕರ್ ಕೊಡಲು ಸ್ವಾತಿ ಮಲಿವಾಲ್ ಹಾಕಿರುವ ‘ದ್ರೌಪದಿ’ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಮುಸ್ಲಿಮ್ ಬಾಹುಳ್ಯ ಇರೋ ಮುಸ್ತಫಾಬಾದ್‌ನಲ್ಲಿ ಬಿಜೆಪಿಗೆ ಭರ್ಜರಿ ಗೆಲುವು
Advertisement
— Swati Maliwal (@SwatiJaiHind) February 8, 2025
Advertisement
ಮಹಾಕಾವ್ಯ ಮಹಾಭಾರತದ ದ್ರೌಪದಿಯ ‘ಚೀರ್‌ಹರನ್’ (ವಸ್ತ್ರಾಪಹರಣ) ಚಿತ್ರಿಸುವ ವರ್ಣಚಿತ್ರವನ್ನು ಒಳಗೊಂಡ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಮಲಿವಾಲ್ ಹಂಚಿಕೊಂಡಿದ್ದಾರೆ.
Advertisement
ಎಎಪಿ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ನವದೆಹಲಿ ಕ್ಷೇತ್ರದಲ್ಲಿ ಬಿಜೆಪಿಯ ಪರ್ವೇಶ್ ವರ್ಮಾ ವಿರುದ್ಧ ಸೋತಿದ್ದಾರೆ. 27 ವರ್ಷಗಳ ನಂತರ ಬಿಜೆಪಿ ದೆಹಲಿಯಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ.
ಒಂದು ಕಾಲದಲ್ಲಿ ಕೇಜ್ರಿವಾಲ್ ಅವರ ನಿಕಟವರ್ತಿಯಾಗಿದ್ದ ಮಲಿವಾಲ್ ಇತ್ತೀಚಿನ ದಿನಗಳಲ್ಲಿ ಅವರ ಅತ್ಯಂತ ಕಟು ಟೀಕಾಕಾರರಲ್ಲಿ ಒಬ್ಬರಾಗಿದ್ದಾರೆ. ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸಿದ್ದ ಅವರು, ಕೇಜ್ರಿವಾಲ್ ಅವರ ನಾಯಕತ್ವ ಮತ್ತು ಅವರ ಪಕ್ಷದ ನಡೆಯನ್ನು ಸಾರ್ವಜನಿಕವಾಗಿ ಟೀಕಿಸಿದ್ದರು. ಇದನ್ನೂ ಓದಿ: ಕಾಂಗ್ರೆಸ್ ಹ್ಯಾಟ್ರಿಕ್ ಸಾಧನೆ ಮಾಡಿದೆ, ಡಿಕೆಶಿ ಗ್ಯಾರಂಟಿ ಠುಸ್ ಪಟಾಕಿ ಆಗಿದೆ: ವಿಜಯೇಂದ್ರ ವ್ಯಂಗ್ಯ
2024ರ ಮೇ ತಿಂಗಳಲ್ಲಿ ಸಿಎಂ ಅಧಿಕೃತ ನಿವಾಸದಲ್ಲಿ ಕೇಜ್ರಿವಾಲ್ ಅವರ ಆಪ್ತ ಸಹಾಯಕ ಬಿಭಾವ್ ಕುಮಾರ್ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ಮಲಿವಾಲ್ ಆರೋಪಿಸಿದ್ದರು. ತುರ್ತು ಸಮಸ್ಯೆಗಳನ್ನು ಚರ್ಚಿಸಲು ಭೇಟಿ ನೀಡಿದ್ದರು. ಆಗ ಕೇಜ್ರಿವಾಲ್ ನಿವಾಸದಲ್ಲಿ ಇರಲಿಲ್ಲ. ಈ ವೇಳೆ ಬಿಭಾವ್ ನನ್ನ ಮೇಲೆ ದೌರ್ಜನ್ಯ ಎಸಗಿದ್ದರೆಂದು ಮಲಿವಾಲ್ ಬೇಸರ ಹೊರಹಾಕಿದ್ದರು. ಈ ಪ್ರಕರಣ ದೇಶಾದ್ಯಂತ ಸದ್ದು ಮಾಡಿತ್ತು.