ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಆಮ್ ಆದ್ಮಿ ಪಕ್ಷದ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಸಿಬಿಐ ದಾಳಿ ನಡೆಸಿದ ಕೆಲವೇ ಗಂಟೆಗಳ ಬಳಿಕ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಶುಕ್ರವಾರ ದೇಶದ 130 ಕೋಟಿ ಜನರಿಗೆ “ಭಾರತವನ್ನು ವಿಶ್ವದ ಬಲಿಷ್ಠ ರಾಷ್ಟ್ರವನ್ನಾಗಿ ಮಾಡಲು” ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ರಾಷ್ಟ್ರವನ್ನು ಪ್ರಗತಿ ಮಾಡಲು ಅವರು ಬಿಡುವುದಿಲ್ಲ” ಎಂದು ಬಿಜೆಪಿಯನ್ನು ಹೆಸರಿಸದೇ ವಾಗ್ದಾಳಿ ನಡೆಸಿದರು. ಕೇಂದ್ರ ಸರ್ಕಾರ ನಮಗೆ ಕೆಲಸ ಮಾಡಲು ಬಿಡುವುದಿಲ್ಲ, ನಮ್ಮ ರಸ್ತೆಗಳಿಗೆ ಅಡ್ಡಲಾಗುತ್ತಿದ್ದಾರೆ. ಇದರ ಭಾಗವಾಗಿ ಈಗ ಡಿಸಿಎಂ ಮನೀಶ್ ಸಿಸೋಡಿಯಾ ಅವರನ್ನು ಟಾರ್ಗೆಟ್ ಮಾಡಲಾಗಿದೆ ಎಂದರು.
Advertisement
Advertisement
ಕಳೆದ 7 ವರ್ಷಗಳಲ್ಲಿ ಅವರು, ನನ್ನ, ಕೈಲಾಶ್ ಗೆಹ್ಲೋಟ್ ಮತ್ತು ಎಎಪಿ ನಾಯಕರ ವಿರುದ್ಧ ಅನೇಕ ದಾಳಿಗಳು ಮತ್ತು ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದಾರೆ. ಆದರೆ ಏನೇ ಅಡ್ಡಿವುಂಟು ಮಾಡಿದರೂ ನಾವು ದೇಶದ ಅಭಿವೃದ್ಧಿಯನ್ನು ಕೈಬಿಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಹತ್ಯೆಗೆ RSS, ಬಿಜೆಪಿ ಸಂಚು ಮಾಡಿದೆ: ಶಿವರಾಮ್ ಗಂಭೀರ ಆರೋಪ
Advertisement
ಬಿಜೆಪಿ ನಡುವಿನ ಉದ್ವಿಗ್ನತೆಯ ನಡುವೆ ಅವರು ಅಮೆರಿಕದ ಅತಿದೊಡ್ಡ ಪತ್ರಿಕೆಯಾದ ನ್ಯೂಯಾರ್ಕ್ ಟೈಮ್ಸ್‌ನಲ್ಲಿ ದೆಹಲಿ ಶಿಕ್ಷಣ ಮಾದರಿಯ ವರದಿಯನ್ನು ಪ್ರಕಟಿಸಿರುವ ಬಗ್ಗೆ ಮಾಹಿತಿ ನೀಡಿದರು. ಈ ವರದಿ ದೆಹಲಿ ಸರ್ಕಾರಿ ಶಾಲೆಗಳಲ್ಲಿ ಕ್ರಾಂತಿಯ ಬಗ್ಗೆ ಮಾತನಾಡಿದೆ. ಇದು ಪ್ರತಿಯೊಬ್ಬ ಭಾರತೀಯನಿಗೆ ಹೆಮ್ಮೆ ತರುವ ವಿಷಯವಾಗಿದೆ. ನಾನು ಎಲ್ಲರಿಗೂ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ ಎಂದರು.
Advertisement
ವಿಶ್ವದ ಎಲ್ಲಾ ನಾಯಕರು ವರದಿ ಮಾಡಲು ಬಯಸುವ ಪತ್ರಿಕೆಯಲ್ಲಿ ಮನೀಷ್ ಸಿಸೋಡಿಯಾ ಅವರ ಫೋಟೋದೊಂದಿಗೆ ವರದಿ ಪ್ರಕಟವಾಗಿದೆ. ಇದರರ್ಥ ಸಿಸೋಡಿಯಾ ಒಂದು ರೀತಿಯಲ್ಲಿ ಅತ್ಯುತ್ತಮ ಶಿಕ್ಷಣ ಸಚಿವ ಎಂದು ಗುರುತಿಸಲ್ಪಟ್ಟಿದ್ದಾರೆ. ಆದರೆ ಅವರ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿದೆ ಎಂದು ಕಿಡಿ ಕಾರಿದರು. ಇದನ್ನೂ ಓದಿ: ದೆಹಲಿ ಡಿಸಿಎಂ ಸಿಸೋಡಿಯಾ ಮನೆ ಮೇಲೆ ಸಿಬಿಐ ದಾಳಿ – 20 ಕಡೆಗಳಲ್ಲಿ ಶೋಧ
ನಾವು ಅವರಿಗೆ ದೇಶವನ್ನು ಬಿಟ್ಟರೆ, ಅವರು ದೇಶವನ್ನು ಎಂದಿಗೂ ಪ್ರಗತಿಯಾಗಲು ಬಿಡುವುದಿಲ್ಲ. ನಾವೆಲ್ಲರೂ ಒಟ್ಟಾಗಿ ಸೇರಬೇಕು. ನಾನು ಮಿಸ್ಡ್‌ಕಾಲ್‌ಗಾಗಿ ನಂಬರ್ ನೀಡುತ್ತಿದ್ದೇನೆ. 95100100 ಯಾರು ಬೇಕಾದರೂ ಮಿಸ್ಡ್‌ಕಾಲ್ ಮಾಡಬಹುದು. ಭಾರತ ಬಲಿಷ್ಠ ರಾಷ್ಟ್ರ ಮಿಷನ್‌ಗೆ ಸೇರಿಕೊಳ್ಳಬಹುದು, ನಾವೇಲ್ಲರು ಸೇರಿ ಭಾರತವನ್ನು ವಿಶ್ವದ ಬಲಿಷ್ಠ ರಾಷ್ಟ್ರವನ್ನಾಗಿ ಮಾಡಬೇಕು ಎಂದು ಕೇಜ್ರಿವಾಲ್ ಹೇಳಿದ್ದಾರೆ.