ಗಾಂಧಿನಗರ: ಹಿಂದೂ ಪೌರಾಣಿಕಗಳನ್ನು ಸರಿಯಾಗಿ ತಿಳಿದುಕೊಂಡರೆ ಸರಿಯಾಗಿ ತಿಳಿಯುತ್ತದೆ. ಬಿಜೆಪಿಯವರು (BJP) ದೇವರನ್ನು ಅವಮಾನಿಸುತ್ತಿದ್ದಾರೆ. ನಾನು ಮಾತ್ರ ನಿಷ್ಠಾವಂತ ಭಕ್ತ “ಜೈ ಶ್ರೀ ರಾಮ್”, (Jai Shri Ram) “ಜೈ ಶ್ರೀಕೃಷ್ಣ” ಎಂದು ಘೋಷಣೆಗಳನ್ನು ಕೂಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ರಾಮ ಜಪ ಮಾಡಿದ್ದಾರೆ.
Advertisement
ಗುಜರಾತ್‍ನ ವಡೋದರಾದಲ್ಲಿ ಆಮ್ ಆದ್ಮಿ ಪಕ್ಷದ (AAP) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ಮತ್ತು ನಮ್ಮ ಪಕ್ಷದ ಮುಖಂಡರ ಬಗ್ಗೆ ಬಿಜೆಪಿಯವರು ಸುಳ್ಳು ಸುದ್ದಿಗಳನ್ನು ಹರಿದಾಡುತ್ತಿದ್ದಾರೆ. ನಾನು ಹೆದರುವುದಿಲ್ಲ. ನನ್ನನ್ನು ದ್ವೇಷ ಭಾವನೆಯಿಂದ ನೋಡುತ್ತಿದ್ದಾರೆ. ದ್ವೇಷದಲ್ಲಿ ಅವರು ಕುರುಡರಾಗಿದ್ದಾರೆ. ಬಿಜೆಪಿಗರು ದೇವರನ್ನು ಸಹ ಅವಮಾನಿಸುತ್ತಿದ್ದಾರೆ. ನಾನು ಮಾತ್ರ ನಿಷ್ಠಾವಂತ ಭಕ್ತ ಜೈ ಶ್ರೀ ರಾಮ್, ಜೈ ಶ್ರೀ ಕೃಷ್ಣ ಎಂದು ಕೂಗಿದ್ದಾರೆ. ಇದನ್ನೂ ಓದಿ: ನಿಮ್ಮ ಅಪ್ಪು ಸಿನಿಮಾ ಗಂಧದ ಗುಡಿ ನೋಡಿ ಪ್ರೋತ್ಸಾಹಿಸಿ: ಅಶ್ವಿನಿ ಪುನೀತ್ ರಾಜ್‍ಕುಮಾರ್ ಮನವಿ
Advertisement
Advertisement
ಬಿಜೆಪಿ ನನ್ನನ್ನು ಹಿಂದೂ ವಿರೋಧಿ ಎಂದು ಬಿಂಬಿಸುತ್ತಿದೆ. ಆದರೆ ಅವರು ಹಿಂದೂ ವಿರೋಧಿಗಳಾಗುತ್ತಿದ್ದಾರೆ. ಮುಂದಿನ ವರ್ಷ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಸಿದ್ಧವಾಗಲಿದೆ. ಎಲ್ಲರೂ ದೇವಸ್ಥಾನಕ್ಕೆ ಭೇಟಿ ನೀಡಲು ಬಯಸುತ್ತೀರಿ. ರಾಮ ಮಂದಿರ ಪ್ರವಾಸಿಗರಿಗೆ ಮುಕ್ತವಾದ ಬಳಿಕ ಪ್ರವಾಸ, ವಾಸ್ತವ್ಯ, ಊಟ ಮತ್ತು ವಸತಿ ತುಂಬಾ ದುಬಾರಿಯಾಗಲಿದೆ. ನೀವು ನಿಮ್ಮ ಇಡೀ ಕುಟುಂಬವನ್ನು ಕರೆದುಕೊಂಡು ಹೋದರೆ ಖರ್ಚು ವೆಚ್ಚ ಹೆಚ್ಚಾಗಲಿದೆ. ಗುಜರಾತ್‍ನಲ್ಲಿ ನಾವು ಸರ್ಕಾರ ರಚಿಸಿದರೆ, ನಾವು ನಿಮ್ಮನ್ನು ಉಚಿತವಾಗಿ ಅಯೋಧ್ಯೆ ದರ್ಶನಕ್ಕೆ ಕರೆದೊಯ್ಯುತ್ತೇವೆ ಎಂದು ಆಶ್ವಾಸನೆ ನೀಡಿದ್ದಾರೆ. ಇದನ್ನೂ ಓದಿ: ಕಾಂಡೋಮ್‍ಗಳನ್ನು ಹೆಚ್ಚಾಗಿ ಬಳಸ್ತಿರೋದು ನಾವು – ಭಾಗವತ್‍ಗೆ ಓವೈಸಿ ತಿರುಗೇಟು
Advertisement
अब ये लोग भगवान को भी बदनाम करने लगे हैं। ये सारी असुरी शक्तियाँ एक हो गईं हैं।
मैं एक बेहद धार्मिक आदमी हूँ। मेरा जन्म श्री कृष्ण जन्माष्टमी के दिन हुआ था। भगवान श्री कृष्ण ने मुझे एक काम देकर भेजा है – इन कंस की औलादों का सफ़ाया करना, जनता को इनसे मुक्ति दिलाना। pic.twitter.com/lBhQqNQWKx
— Arvind Kejriwal (@ArvindKejriwal) October 8, 2022
ಈ ಮೊದಲು ಕೇಜ್ರಿವಾಲ್ ರ್‍ಯಾಲಿಗೂ ಮುನ್ನ ಎಎಪಿ ಕಾರ್ಯಕರ್ತರು ಎಎಪಿ ವಿರೋಧಿ ಪೋಸ್ಟರ್‌ಗಳನ್ನು ತೆಗೆದುಹಾಕಿದ್ದರು. ಪಕ್ಷದ ಮುಖ್ಯಸ್ಥರು ರ್ಯಾಲಿ ಸ್ಥಳಕ್ಕೆ ತೆರಳುವ ಮಾರ್ಗದಲ್ಲಿ ಹಾಕಲಾಗಿದ್ದ ಎಎಪಿ ವಿರೋಧಿ ಪೋಸ್ಟರ್‌ಗಳನ್ನು ಮತ್ತು ಬ್ಯಾನರ್‌ಗಳನ್ನು ಕಾರ್ಯಕರ್ತರು ತೆಗೆದು ಹಾಕಿದರು. ಕೆಲದಿನಗಳ ಹಿಂದೆ ಧಾರ್ಮಿಕ ಮತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದೆಹಲಿ ಸಚಿವ ರಾಜೇಂದ್ರ ಪಾಲ್ ಗೌತಮ್ ಹಿಂದೂ ದೇವತೆಗಳನ್ನು ನಿಂದಿಸಿದ್ದಾರೆ ಎಂದು ಹೇಳಲಾದ ವೀಡಿಯೋ ಒಂದು ವೈರಲ್ ಆಗಿತ್ತು. ಘಟನೆಯ ಬಳಿಕ ಬಿಜೆಪಿ, ಕೇಜ್ರಿವಾಲ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿತ್ತು.