ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಸೋಮವಾರ ದೆಹಲಿಯ ಶಾಲೆಯೊಂದಕ್ಕೆ ಭೇಟಿ ನೀಡಿ ಮೈಂಡ್‍ಫುಲ್‍ನೆಸ್ ಕ್ಲಾಸ್‍ಗೆ ಹಾಜರಾಗಿದ್ದರು.
ಸದ್ಯ ಈ ವೀಡಿಯೋವನ್ನು ಆಮ್ ಆದ್ಮಿ ಪಕ್ಷ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ವೀಡಿಯೋದಲ್ಲಿ ಇಬ್ಬರು ಮುಖ್ಯಮಂತ್ರಿಗಳು ತರಗತಿಯನ್ನು ಆನಂದಿಸುತ್ತಿರುವುದನ್ನು ಕಾಣಬಹುದಾಗಿದೆ. ಎರಡು ದಿನಗಳ ಕಾಲ ದೆಹಲಿ ಪ್ರವಾಸದಲ್ಲಿರುವ ಭಗವತ್ ಮಾನ್ ಅವರು, ದೆಹಲಿ ಶಿಕ್ಷಣ ಮಾದರಿಯನ್ನೇ ರಾಜ್ಯದಲ್ಲಿ ಪುನರಾವರ್ತಿಸಲು ರಾಷ್ಟ್ರ ರಾಜಧಾನಿಯ ಆರೋಗ್ಯ ಸಂಸ್ಥೆಗಳು ಮತ್ತು ಶಾಲೆಗಳಿಗೆ ಭೇಟಿ ನೀಡಿದ್ದರು. ದೆಹಲಿಯಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಮಕ್ಕಳು ಕೂಡ ಉತ್ತಮ ಶಿಕ್ಷಣವನ್ನು ಪಡೆಯುತ್ತಾರೆ ಎಂದು ಭಗವಂತ್ ಮಾನ್ ತಿಳಿಸಿದ್ದಾರೆ.
Advertisement
Advertisement
ಅರವಿಂದ್ ಕೇಜ್ರಿವಾಲ್ ಮತ್ತು ಅವರ ಡೆಪ್ಯೂಟಿ ಮನೀಶ್ ಸಿಸೋಡಿಯಾ ಅವರೊಂದಿಗೆ ಭಗವತ್ ಮಾನ್ ಅವರು ಚಿರಾಗ್ ಎನ್‍ಕ್ಲೇವ್‍ನಲ್ಲಿರುವ ದೆಹಲಿ ಸರ್ಕಾರಿ ಶಾಲೆಗೆ ತೆರಳಿದ್ದರು. ಇದನ್ನೂ ಓದಿ: ಶೀಘ್ರದಲ್ಲೇ ಗುಡ್ ನ್ಯೂಸ್ ಕೊಡಲಿರುವ ನಯನತಾರಾ ಮತ್ತು ವಿಘ್ನೇಶ್ ಜೋಡಿ
Advertisement
Look who’s back to school?????
Delhi CM @ArvindKejriwal along with Punjab CM @BhagwantMann attend a ‘Mindfulness Class’ in a Delhi Govt School in Chirag Enclave #KejriwalModel pic.twitter.com/tNB7521Ki1
— AAP (@AamAadmiParty) April 25, 2022
Advertisement
ಇದೇ ವೇಳೆ ಮಧ್ಯಮದವರೊಂದಿಗೆ ಮಾತನಾಡಿದ ಅವರು, ಶಿಕ್ಷಣ ವ್ಯವಸ್ಥೆಯಲ್ಲಿನ ಕ್ರಾಂತಿಯನ್ನು ದೇಶಾದ್ಯಂತ ಚರ್ಚಿಸಲಾಗಿದೆ. ನಾವು ಪಂಜಾಬ್‍ನಲ್ಲಿ ಅದೇ ಮಾದರಿಯನ್ನು ಪುನರಾವರ್ತಿಸುತ್ತೇವೆ, ಅಲ್ಲಿ ಶ್ರೀಮಂತ ಅಥವಾ ಬಡ ಹಿಂದುಳಿದ ವಿದ್ಯಾರ್ಥಿಗಳು ಒಟ್ಟಿಗೆ ಉತ್ತಮ ಶಿಕ್ಷಣವನ್ನು ಪಡೆಯುತ್ತಾರೆ. ಪರಸ್ಪರ ಕಲಿಯುವ ಮೂಲಕ ಈ ರೀತಿಯಲ್ಲಿ ದೇಶ ಪ್ರಗತಿಯತ್ತ ಸಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬುಧವಾರ ಎಲ್ಲ ರಾಜ್ಯಗಳ ಸಿಎಂ ಜೊತೆ ಮೋದಿ ತುರ್ತು ಸಭೆ
ನಂತರ ಮಾತನಾಡಿದ ಕೇಜ್ರಿವಾಲ್ ಅವರು, ದೇಶದ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ಒಟ್ಟಾಗಿ ಕೆಲಸ ಮಾಡೋಣ ಎಂದು ಕೇಜ್ರಿವಾಲ್ ಹೇಳಿದ್ದಾರೆ.