ನವದೆಹಲಿ: ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ (AAP) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ದೇಶಕ್ಕಾಗಿ ಪ್ರಾರ್ಥನೆಯನ್ನು ಪ್ರಾರಂಭಿಸಿದ್ದಾರೆ. ಪಕ್ಷದ ನಾಯಕರಾದ ಸತ್ಯೇಂದ್ರ ಜೈನ್ (Satyendar Jain) ಮತ್ತು ಮನೀಶ್ ಸಿಸೋಡಿಯಾ (Manish Sisodia) ಬಂಧನವನ್ನು ಖಂಡಿಸಿ ಅವರು ಹೋಳಿಯನ್ನು (Holi) ಆಚರಿಸದೆ ಧ್ಯಾನ ಆರಂಭಿಸಿದ್ದಾರೆ.
ಬೆಳಗ್ಗೆ 10 ಗಂಟೆಯಿಂದ ಸಂಜೆ ಐದು ಗಂಟೆವರೆಗೂ ದೇಶದ ಒಳಿತಿಗಾಗಿ ಧ್ಯಾನ ಮಾಡುವುದಾಗಿ ಅವರು ಮಂಗಳವಾರ ಹೇಳಿದ್ದರು. ಅಂತೆಯೇ ಕೇಜ್ರಿವಾಲ್ ಧ್ಯಾನ ಆರಂಭಿಸಿದ್ದಾರೆ. ಇದಕ್ಕೂ ಮೊದಲು ಅವರು ರಾಜಘಾಟ್‌ಗೆ ತೆರಳಿ ಮಹಾತ್ಮಗಾಂಧಿ ಸ್ಮಾರಕಕ್ಕೆ ನಮನ ಸಲ್ಲಿಸಿದರು.
Advertisement
आज केजरीवाल जी देश के लिए प्रार्थना करेंगे।
10 बजे से शाम 5 बजे तक 7 घंटे लगातार ध्यान करेंगे।
“School-Hospital बनाने वालों को प्रधान मंत्री जेल भेज रहे हैं,
खरबों लूटने वालों को Modi जी गले लगा रहे हैं।
देश की स्थिति को लेकर चिंतित हूँ” – CM @ArvindKejriwal ???????? pic.twitter.com/kI3e7yHicq
— AAP (@AamAadmiParty) March 8, 2023
Advertisement
ಶಾಲೆ ಕಾಲೇಜು, ಆಸ್ಪತ್ರೆಗಳನ್ನು ಕಟ್ಟುವ ನಾಯಕರನ್ನು ಜೈಲಿಗೆ ಕಳುಹಿಸಲಾಗುತ್ತಿದೆ. ದೇಶವನ್ನು ದರೋಡೆ ಮಾಡುವ ಜನರನ್ನು ಪ್ರಧಾನಿ ನರೇಂದ್ರ ಮೋದಿ ಅಪ್ಪಿಕೊಳ್ಳುತ್ತಿದ್ದಾರೆ. ಇದು ಆತಂಕಕಾರಿ ಬೆಳವಣಿಗೆ ಎಂದು ಅವರು ಹೇಳಿದ್ದಾರೆ. ಜೈನ್ ಮತ್ತು ಸಿಸೋಡಿಯಾ ಜೈಲಿನಲ್ಲಿರುವ ಬಗ್ಗೆ ನನಗೆ ಆತಂಕವಿಲ್ಲ. ಅವರು ಧೈರ್ಯಶಾಲಿಗಳು ಮತ್ತು ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಲು ಸಿದ್ಧರಾಗಿದ್ದಾರೆ. ಆದರೆ ದೇಶದ ದುರದೃಷ್ಟಕರ ಸ್ಥಿತಿಯು ನನ್ನನ್ನು ಚಿಂತೆಗೀಡು ಮಾಡಿದೆ. ಇದನ್ನೂ ಓದಿ: ಮೀಸಲು ಅರಣ್ಯದಲ್ಲಿ 60ಕ್ಕೂ ಹೆಚ್ಚು ಫೈರಿಂಗ್ ಕಾಟ್ರೇಜ್ ಪತ್ತೆ, ತನಿಖೆಗೆ ಇಳಿದ ಅರಣ್ಯ ಇಲಾಖೆ
Advertisement
Advertisement
ನಾನು ದೇಶಕ್ಕಾಗಿ ಧ್ಯಾನ ಮಾಡುತ್ತೇನೆ, ಪ್ರಾರ್ಥಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಾಡುತ್ತಿರುವುದು ತಪ್ಪು ಎಂದು ನೀವು ಭಾವಿಸಿದರೆ ಮತ್ತು ನಿಮಗೂ ದೇಶದ ಬಗ್ಗೆ ಚಿಂತೆ ಇದ್ದರೆ ಹೋಳಿ ಆಚರಿಸಿದ ನಂತರ, ದಯವಿಟ್ಟು ಪ್ರಾರ್ಥಿಸಲು ಸಮಯ ಮೀಸಲಿಡಿ ಎಂದು ಸಾರ್ವಜನಿಕರಿಗೆ ಕೇಜ್ರಿವಾಲ್ ಕರೆ ನೀಡಿದ್ದರು. ಇದನ್ನೂ ಓದಿ: ಮಾ.9ರ ಕರ್ನಾಟಕ ಬಂದ್ ವಾಪಸ್ ಪಡೆದ ಕಾಂಗ್ರೆಸ್