ಹುಬ್ಬಳ್ಳಿ: ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ಬೇಕು ಎಂದು ಕೇಳಿಲ್ಲ ಎಂದು ಶಾಸಕ ಅರವಿಂದ್ ಬೆಲ್ಲದ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಶಾಸಕರಿಗೂ ಸಚಿವರಾಗಬೇಕು ಅಂತಾ, ಸಚಿವರಿಗೆ ಸಿಎಂ ಆಗಬೇಕು ಅಂತಾ ಆಸೆ ಇರುತ್ತದೆ. ಆದರೆ ನಾನು ವರಿಷ್ಠರ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದರು.
Advertisement
Advertisement
ಮಾಧ್ಯಮಗಳಲ್ಲಿ ಸಂಪುಟ ವಿಸ್ತರಣೆ ಇದೆ ಎಂದು ಬಂದಿರುವುದನ್ನು ನೋಡಿದ್ದೇನೆ. ಆದರೆ ಸಂಪುಟ ವಿಸ್ತರಣೆ ವಿಷಯದ ಬಗ್ಗೆ ನನಗೆ ಗೊತ್ತಿಲ್ಲ. ನಮ್ಮ ಹೈಕಮಾಂಡ್ ತಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ. ಸಚಿವ ಸ್ಥಾನವನ್ನು ಕೇಳುವ ಅವಶ್ಯಕತೆ ಇಲ್ಲ. ಪಕ್ಷದ ನಾಯಕರಿಗೆ ಯಾವಾಗ ಯಾರಿಗೆ ಯಾವ ಜವಾಬ್ದಾರಿಯನ್ನು ನೀಡಬೇಕು ಎನ್ನುವುದು ಗೊತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಖ್ಯಾತ ಫೋಟೋಗ್ರಾಫರ್ ತೆಗೆದಿರುವ ಸೂರ್ಯನ ಒಂದು ಫೋಟೋಗೆ 3766ರೂ.!
Advertisement
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪ್ರಬುದ್ಧ ರಾಜಕಾರಣಿ. ಅವರು ಹೆಚ್ಚು ಅಭಿವೃದ್ಧಿಯ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರ ತೀರ್ಮಾನಕ್ಕೆ ನಾನು ಬದ್ಧನಾಗಿರುವೆ ಎಂದು ತಿಳಿಸಿದರು. ಹಿರಿಯರನ್ನು ಕೈಬಿಟ್ಟು ಕಿರಿಯರಿಗೆ ಸ್ಥಾನ ನೀಡಬೇಕು ಎನ್ನುವ ರೇಣುಕಾಚಾರ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಇದನ್ನೂ ಓದಿ: ಬಿಜೆಪಿ ಸರ್ಕಾರಕ್ಕೆ ರೆಡ್ ಅಲರ್ಟ್: ಅಖಿಲೇಶ್ ಯಾದವ್