ಧಾರವಾಡ: ನಾನು ಸಚಿವ ಸ್ಥಾನದ ಲಾಬಿಗಾಗಿ ಅಮಿತ್ ಶಾ ಅವರನ್ನು ಭೇಟಿ ಮಾಡಿಲ್ಲ, ನಾನು 6 ತಿಂಗಳ ಹಿಂದೆಯೇ ಭೇಟಿಯಾಗಲು ಕೇಳಿದ್ದೆ ಎಂದು ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ್ ಹೇಳಿದರು.
ಧಾರವಾಡದಲ್ಲಿ ಮಾತನಾಡಿದ ಅವರು, ಶಾ ಅವರು ನನ್ನನ್ನು ಕರೆದಿದ್ದರು, ಹೀಗಾಗಿ ಭೇಟಿ ಮಾಡಿ ಬಂದಿದ್ದೇನೆ. ಸಚಿವ ಸ್ಥಾನದ ಲಾಬಿಗಾಗಿ ಭೇಟಿ ಮಾಡಿಲ್ಲ. ರಾಜ್ಯ ಪ್ರವಾಸದ ಮುನ್ನ ಏಕಾಏಕಿ ಬಂದು ಭೇಟಿ ಮಾಡಲು ಹೇಳಿದರು. ದೆಹಲಿಯಲ್ಲಿ ಪ್ರಸಕ್ತ ರಾಜ್ಯದ ಸ್ಥಿತಿ ಗತಿ ಬಗ್ಗೆ ಚರ್ಚೆ ಮಾಡಿದರು ಎಂದರು. ಇದನ್ನೂ ಓದಿ: ಪೊಲೀಸ್ ಕಲ್ಯಾಣ ನಿಧಿಗೆ 5 ಕೋಟಿ ರೂ. ಘೋಷಿಸಿದ ಬಸವರಾಜ ಬೊಮ್ಮಾಯಿ
ಉತ್ತರ ಕರ್ನಾಟಕ ಹಾಗೂ ನನ್ನ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತುಕತೆ ಆಗಿದೆ. ನಾನಂತು ಅವರಿಗೆ ಏನು ಕೇಳುವುದಕ್ಕೆ ಹೋಗಿಲ್ಲ. ಡಿಸಿಎಂ ಸ್ಥಾನದಲ್ಲಿ ನಾನು ರೇಸ್‍ನಲ್ಲಿ ಇರುವುದು ಮಾಧ್ಯಮದವರಿಗೆ ಗೊತ್ತು ಎಂದು ಡಿಸಿಎಂ ಸ್ಥಾನದ ಆಕಾಂಕ್ಷಿ ಪ್ರಶ್ನೆ ಬಗ್ಗೆ ಉತ್ತರಿಸಿದರು. ಇದನ್ನೂ ಓದಿ: ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಪೊಲೀಸರ ಮಸ್ತ್ ಡ್ಯಾನ್ಸ್: ಪರ,ವಿರೋಧ ಚರ್ಚೆ