– 18 ತಾಸು ಭಾರತದ ಮಹಿಳೆಗೆ ಚೀನಾ ಕಿರುಕುಳ
ನವದೆಹಲಿ/ಬೀಜಿಂಗ್: ಚೀನಾ (China) ಮತ್ತೆ ತನ್ನ ಕುತಂತ್ರ ಬುದ್ಧಿ ತೋರಿಸಿದ್ದು, ಭಾರತದ ಸಾರ್ವಭೌಮತೆಗೆ ಧಕ್ಕೆ ತರುವ ದುಸ್ಸಾಹಸಕ್ಕೆ ಕೈ ಹಾಕಿದೆ. ಈ ಪ್ರಶ್ನೆಗಳು ಇದೀಗ ಜಾಗತಿಕ ಮಟ್ಟದಲ್ಲಿ ಪ್ರತಿಧ್ವನಿಸುತ್ತಿವೆ. ಇದಕ್ಕೆ ಕಾರಣ, ಶಾಂಘೈ ವಿಮಾನ ನಿಲ್ದಾಣದಲ್ಲಿ ನಮ್ಮದೇ ದೇಶದ, ಅರುಣಾಚಲ ಪ್ರದೇಶದ (Arunachal Pradesh) ಮಹಿಳೆಯೊಬ್ಬರಿಗೆ ಚೀನೀ ಅಧಿಕಾರಿಗಳು ನೀಡಿದ ನರಕಯಾತನೆ.
ಹೌದು. ಭಾರತದ ಪಾಸ್‌ಪೋರ್ಟ್ (Passport) ಹೊಂದಿದ್ದ ಅರುಣಾಚಲ ಪ್ರದೇಶದ ಮಹಿಳೆಯೊಬ್ಬರನ್ನು 18 ಗಂಟೆಗಳ ಕಾಲ ಬಂಧಿಸಿ, ಕಿರುಕುಳ ನೀಡಿ, ಅಮಾನವೀಯವಾಗಿ ನಡೆಸಿಕೊಂಡಿದೆ ಚೀನಾದ ಸರ್ಕಾರ. ಅಲ್ಲದೇ ʻಝಾಂಗ್‌ನಾನ್ʼ (ಅರುಣಾಚಲ ಪ್ರದೇಶಕ್ಕೆ ಚೀನಾ ಇಟ್ಟ ಹೆಸರು) ಭಾರತದ ಭಾಗ ಅಂತ ನಾವು ಎಂದಿಗೂ ಒಪ್ಪಿಕೊಂಡಿಲ್ಲ, ಅದು ನಮ್ಮ ಪ್ರದೇಶ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಅಲ್ಲದೇ ಮಹಿಳೆ ಪ್ರಜೆ ಪೆಮಾ ವಾಂಗ್‌ಜೋಮ್ ಥೋಂಗ್‌ಡಾಕ್ ಅವರ ಪಾಸ್‌ಪೋರ್ಟ್ ಅನ್ನು ಅಸಿಂಧು ಅಂತ ಘೋಷಿಸಿದೆ. ಇದಕ್ಕೆ ಭಾರತ ಖಡಕ್ ಉತ್ತರ ನೀಡಿದೆ. ಇದನ್ನೂ ಓದಿ: ಟ್ರಂಪ್ ಸುಂಕಾಸ್ತ್ರದ ನಡುವೆಯೂ ಭಾರತದ ಕೃಷಿ ಉತ್ಪನ್ನ ರಫ್ತಲ್ಲಿ ಸಾಧನೆ – ಸಾಧ್ಯವಾಗಿದ್ದು ಹೇಗೆ?

ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ
ಚೀನಾ ಹೇಳಿಕೆಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ (Randhir Jaiswal), ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ, ಎಂದಿಗೂ ಬೇರ್ಪಡಿಸಲಾಗದ ಭಾಗವಾಗಿದೆ. ಇದು ಸ್ವಯಂ-ಸ್ಪಷ್ಟ ಹಾಗೂ ಸತ್ಯ. ಚೀನಾದ ಕಡೆಯಿಂದ ಎಷ್ಟೇ ನಿರಾಕರಣೆ ಬಂದರೂ ಈ ನಿರ್ವಿವಾದದ ವಾಸ್ತವವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ.
ಅಲ್ಲದೇ ಚೀನಾದ ಅಧಿಕಾರಿಗಳ ವಿರುದ್ಧ ನವದೆಹಲಿಯಲ್ಲಿರುವ ಕಚೇರಿಗೆ ಬಲವಾದ ಪ್ರತಿಭಟನೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಕಾನೂನುಬದ್ಧವಾಗಿ ಮಾನ್ಯ ಭಾರತೀಯ ಪಾಸ್‌ಪೋರ್ಟ್‌ನಲ್ಲಿ ಸಾಗುತ್ತಿದ್ದ ಪ್ರಯಾಣಿಕರ ನಡವಳಿಕೆ ಸಮರ್ಥಿಸಲು ಚೀನಾ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಸೂಚಿಸಿದರು. ಇದನ್ನೂ ಓದಿ: ಈ ಸರೋವರದ ನೀರು ತಾಕಿದ್ರೆ ಕಲ್ಲಾಗ್ತಾರೆ – ವಿಜ್ಞಾನಕ್ಕೆ ಸವಾಲಾಗಿದೆ ನೇಟ್ರಾನ್ ಸರೋವರ
ಅಂತಾರಾಷ್ಟ್ರೀಯ ನಿಯಮ ಉಲ್ಲಂಘನೆ
ಅಲ್ಲದೇ, ಚೀನಾದ ಕ್ರಮಗಳು ಸಮರ್ಥನೀಯವಲ್ಲ. ಅಂತಾರಾಷ್ಟ್ರೀಯ ವಿಮಾನಯಾನ ಶಿಷ್ಟಾಚಾರವನ್ನ ನೇರವಾಗಿ ಉಲ್ಲಂಘಿಸಿದೆ. ಈ ಬಗ್ಗೆ ಇನ್ನೂ ವಿವರಣೆ ಕೊಡಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.
ಸಾಮಾನ್ಯವಾಗಿ ಎಲ್ಲಾ ದೇಶಗಳ ನಾಗರಿಕರಿಗೆ 24 ಗಂಟೆಗಳವರೆಗೆ ವೀಸಾ-ಮುಕ್ತ ಸಾರಿಗೆಯನ್ನ ಅನುಮತಿಸುತ್ತದೆ. ಆದಾಗ್ಯೂ, ಈ ಪ್ರಕರಣದಲ್ಲಿ, ಅಧಿಕಾರಿಗಳು ವಿವರಿಸಲಾಗದಂತೆ ಪ್ರಯಾಣಿಕರ ಜನ್ಮಸ್ಥಳವಾದ ಅರುಣಾಚಲ ಪ್ರದೇಶವನ್ನ ಗುರಿಯಾಗಿಸಿಕೊಂಡು, ಅದು ಚೀನಾಕ್ಕೆ ಸೇರಿದ್ದು ಎಂದು ಹೇಳಿಕೊಂಡು, ಅವರ ಭಾರತೀಯ ಪಾಸ್‌ಪೋರ್ಟ್ ಅನ್ನು ʻಅಮಾನ್ಯʼ ಎಂದು ಘೋಷಿಸಿದ್ದಾರೆ. ಇದರೊಂದಿಗೆ ಚೀನಾ ತನ್ನದೇ ಆದ ನಿಯಮಗಳನ್ನು ಉಲ್ಲಂಘಿಸಿದೆ ಓತ್ತಿ ಹೇಳಿದ್ದಾರೆ.

ಏನಾಗಿತ್ತು?
ಶಾಂಗ್ಸ್ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ತಮ್ಮ ಪಾಸ್‌ಪೋರ್ಟ್ ಅನ್ನು ಪರಿಗಣಿಸಲು ನಿರಾಕರಿಸಿ 18 ತಾಸು ವಶಕ್ಕೆ ಪಡೆದಿದ್ದರು ಎಂದು ಬ್ರಿಟನ್‌ನಲ್ಲಿ ನೆಲಸಿರುವ ಅರುಣಾಚಲ ಪ್ರದೇಶದ ಪೆಮಾ ವಾಂಗ್‌ಮ್ ತೊಂಗ್‌ಡಾಕ್ ಎಂಬವರು ಸೋಮವಾರ ಆರೋಪಿಸಿದ್ದರು. ಜನ್ಮಸ್ಥಳವನ್ನು ಅರುಣಾಚಲ ಪ್ರದೇಶ ಎಂದು ದಾಖಲಿಸಲಾಗಿದೆ. ಹೀಗಾಗಿ ಪಾಸ್‌ಪೋರ್ಟ್ ಪರಿಗಣಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದರು. ಅರುಣಾಚಲ ಪ್ರದೇಶ ಚೀನಾದ ಭಾಗ ಎಂದು ಹೇಳಿದ ಅಧಿಕಾರಿಗಳು. ಅದನ್ನೇ ಒಪ್ಪಿಕೊಳ್ಳುವಂತೆ ಒತ್ತಾಯಿಸಿದರು. ಯಾವುದೇ ವಿವರಣೆ ನೀಡದೆ 18 ತಾಸು ವಶಕ್ಕೆ ಪಡೆದಿದ್ದರು ಎಂದು ‘ಎಕ್ಸ್’ನಲ್ಲಿ ಹೇಳಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾವೂ ನಿಂಗ್, ಮಹಿಳೆ ಆರೋಪಿಸಿದಂತೆ ಯಾವುದೇ ಬಲವಂತದ ಕ್ರಮ, ಬಂಧನ ಅಥವಾ ಶೋಷಣೆ ನಡೆದಿಲ್ಲ. ಚೀನಾದ ವಲಸೆ ಅಧಿಕಾರಿಗಳು ಕಾನೂನು ಮತ್ತು ನಿಯಮಗಳ ಪ್ರಕಾರವೇ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಆ ಮಹಿಳೆಯ ಕಾನೂನುಬದ್ಧ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನ ರಕ್ಷಿಸಿದ್ದಾರೆ ಎಂಬುದಾಗಿ ನಾವು ತಿಳಿದುಕೊಂಡಿದ್ದೇವೆ. ವಿಮಾನಯಾನ ಸಂಸ್ಥೆಯು ಸಂಬಂಧಪಟ್ಟ ವ್ಯಕ್ತಿಗೆ ವಿಶ್ರಾಂತಿ ಪಡೆಯಲು ಸ್ಥಳ, ಪಾನೀಯ ಮತ್ತು ಆಹಾರ ಒದಗಿಸಿದೆ ಎಂದು ತಿಳಿಸಿದ್ದರು.
ಝಾಂಗ್‌ನಾನ್ ಮೇಲೆ ಚೀನಾ ಹೊಂದಿರುವ ಹಕ್ಕುಗಳನ್ನು ಅವರು ಪುನರುಚ್ಚರಿಸಿದರು. ʻಝಾಂಗ್‌ನಾನ್ ಚೀನಾಕ್ಕೆ ಸೇರಿದ ಪ್ರದೇಶ ಭಾರತವು ಆಕ್ರಮವಾಗಿ ವಶಪಡಿಸಿಕೊಂಡಿರುವ ಅರುಣಾಚಲ ಪ್ರದೇಶಕ್ಕೆ ಚೀನಾ ಯಾವುದೇ ಮಾನ್ಯತೆ ನೀಡುವುದಿಲ್ಲʼ ಎಂದರು. ಇದನ್ನೂ ಓದಿ: ಇಥಿಯೋಪಿಯಾದಲ್ಲಿ ಜ್ವಾಲಾಮುಖಿ ಸ್ಫೋಟ – ಭಾರತದಲ್ಲಿ ವಿಮಾನ ಸಂಚಾರ ವ್ಯತ್ಯಯ
ಪ್ರತಿಭಟನೆ ಸಲ್ಲಿಸಿದ ಭಾರತ
ಈ ಘಟನೆಗೆ ಸಂಬಂಧಿಸಿದಂತೆ ಭಾರತವು ಚೀನಾಕ್ಕೆ ಈಗಾಗಲೇ ತನ್ನ ಪ್ರತಿಭಟನೆ ಸಲ್ಲಿಸಿದ ಎಂದು ದೆಹಲಿಯ ಮೂಲಗಳು ತಿಳಿಸಿವೆ. ಶಾಂಘೈನಲ್ಲಿರುವ ಭಾರತದ ಕಾನ್ಸುಲೇಟ್, ಮಹಿಳೆಗೆ ಅಗತ್ಯ ನೆರವು ಒದಗಿಸಿದೆ ಎಂದಿದೆ.

