ಇಟಾನಗರ: ಅರುಣಾಚಲ ಪ್ರದೇಶದ (Arunachal Pradesh) ಮುಖ್ಯಮಂತ್ರಿ ಪೆಮಾ ಖಂಡು (CM Pema Khandu) ಸೇರಿದಂತೆ ಐವರು ಬಿಜೆಪಿ (BJP) ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
ವಿಧಾನಸಭಾ ಚುನಾವಣೆಯ ನಾಮಪತ್ರ ಸಲ್ಲಿಕೆಯ ಡೆಡ್‌ಲೈನ್ ಇಂದು ಮುಕ್ತಾಯವಾಗಿದ್ದು 5 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳು ಹೊರತು ಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Advertisement
Arunachal Pradesh leads in showing the mood of the nation. On the last day of the nomination filing for the Assembly election, BJP has secured 5 candidates elected unopposed led by CM @PemaKhanduBJP ji from 3-Mukto Assembly Constituency.
15. Sagalee Assembly Constituency: Shri… pic.twitter.com/EMxMGgruqU
— Kiren Rijiju (मोदी का परिवार) (@KirenRijiju) March 27, 2024
Advertisement
ಚುನಾವಣಾ ಆಯೋಗ (Election Commission) ಇನ್ನೂ ಅಧಿಕೃತವಾಗಿ ಐವರು ವಿಜಯಿ ಆಗಿದ್ದಾರೆ ಎಂದು ಘೋಷಣೆ ಮಾಡಿಲ್ಲ. ಹಲವು ಕ್ಷೇತ್ರಗಳಲ್ಲಿ ವಿರೋಧ ಪಕ್ಷಗಳು ದುರ್ಬಲಗೊಂಡಿದ್ದು ಈ ಬಾರಿ ಆಡಳಿತ ಸರ್ಕಾರ ಕ್ಲೀನ್ ಸ್ವೀಪ್ ಮಾಡುವ ಸಾಧ್ಯತೆಯಿದೆ. ಇದನ್ನೂ ಓದಿ: ಅರುಣಾಚಲ ಪ್ರದೇಶದಲ್ಲಿ ಕಿರಿಕ್ ಚೀನಾಗೆ ಠಕ್ಕರ್ – ವಿಶ್ವದ ಅತೀ ಉದ್ದದ ದ್ವಿಪಥ ಸುರಂಗ ಲೋಕಾರ್ಪಣೆಗೊಳಿಸಿದ ಮೋದಿ
Advertisement
The Land of Dawn-lit Mountains is eagerly waiting to see their beloved PM Shri @narendramodi Ji who always puts North East as first priority. This is why the #ModiKaParivar of Arunachal Pradesh wants a historic 3rd term for our Adarniya Pradhan Mantri Ji.
Today, we had a series… pic.twitter.com/MmCyvtHBav
— Ashok Singhal (Modi Ka Parivar) (@TheAshokSinghal) March 27, 2024
Advertisement
ಕೇಂದ್ರ ಸಚಿವ ಕಿರಣ್ ರಿಜಿಜು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ರಾಷ್ಟ್ರದ ಚಿತ್ತವನ್ನು ತೋರಿಸುವಲ್ಲಿ ಅರುಣಾಚಲ ಪ್ರದೇಶ ಮುಂದಿದೆ. ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಕೊನೆಯ ದಿನ ಸಿಎಂ ನೇತೃತ್ವದಲ್ಲಿ ಬಿಜೆಪಿ 5 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರದಿಂದ ರಾಜ್ಯದಲ್ಲಿ ಅಗಾಧ ಅಭಿವೃದ್ಧಿಯಾಗಿದೆ ಎಂದು ಬರೆದುಕೊಂಡಿದ್ದಾರೆ.