– ಸುತ್ತೂರು ಶ್ರೀಗಳನ್ನ ಭೇಟಿ ಮಾಡಿ ಆಶೀರ್ವಾದ ಪಡೆದ ಶಿಲ್ಪಿ
ಮೈಸೂರು: ಇಲ್ಲಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj) ಅವರು ಶುಕ್ರವಾರ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ (Shivratri Desikendra Swamiji) ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ಇದೇ ಸಂದರ್ಭದಲ್ಲಿ ಸುತ್ತೂರು ಶ್ರೀಗಳಿಗೆ ಅಯೋಧ್ಯೆ ಬಾಲಕ ರಾಮನ ಮೂರ್ತಿಯ ಫೋಟೋಗಳನ್ನು ತೋರಿಸಿ ವಿವರಣೆ ನೀಡಿದರು. ಈ ವೇಳೆ ಸುತ್ತೂರು ಶ್ರೀಗಳು ಅರುಣ್ ಯೋಗಿರಾಜ್ ದಂಪತಿಯನ್ನ ಅಭಿನಂದಿಸಿದರು. ಇದನ್ನೂ ಓದಿ: ಶೆಟ್ಟರ್, ಜೋಶಿ ಒಂದು ನಾಣ್ಯದ ಎರಡು ಮುಖದ ರೀತಿ ಕೆಲಸ ಮಾಡಿದ್ದಾರೆ: ವಿ ಸೋಮಣ್ಣ
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅರುಣ್, ಜನರಿಂದ ಈ ರೀತಿ ಸ್ವಾಗತ ಸಿಗುತ್ತೆ ಅಂತ ಅಂದು ಕೊಂಡಿರಲಿಲ್ಲ. ದೇಶದಲ್ಲಿ ಯಾವ ಶಿಲ್ಪ ಕಲಾವಿದನಿಗೂ ಸಿಗದ ಗೌರವ, ಮನ್ನಣೆ ನನಗೆ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಕರ್ತವ್ಯ ಪಥದಲ್ಲಿ ಆಕರ್ಷಕ ಪಥಸಂಚಲನ – ಮೇಳೈಸಿದ ಸಾಂಸ್ಕೃತಿಕ ವೈಭವ, ಸೇನಾ ಶಕ್ತಿಪ್ರದರ್ಶನವೇ ರೋಚಕ!
ಸದ್ಯ ಮುಂದಿನ ಯೋಜನೆಗಳು ನನ್ನ ಮುಂದಿಲ್ಲ. ವೈಯಕ್ತಿಕ ಕಾರಣಗಳಿಂದ ದೆಹಲಿಗೆ ಹೋಗ್ತಿದ್ದೀನಿ ಎಂದ ಅರುಣ್, 2015 ರಲ್ಲಿ ನಾನು ಕೆತ್ತಿದ ಮೈಸೂರಿನ ಜಯಚಾಮರಾಜೇಂದ್ರ ಪ್ರತಿಮೆಯ ಬಾಕಿ ಹಣ ಬರಬೇಕಿದೆ. ಬಾಕಿ ಹಣದ ವಿಚಾರದಲ್ಲಿ ನಾನು ಸರಿಯಾಗಿ ಫೈಲ್ ಫಾಲೋ ಆಫ್ ಮಾಡಲಿಲ್ಲ. ಹೀಗಾಗಿ ವಿಳಂಬವಾಗಿದೆ ಅಷ್ಟೆ. ನನಗೆ ಕಲೆಯ ಪ್ರೀತಿ ಗೊತ್ತು. ಆದರೆ ಹಣಕಾಸಿನ ವಿಷಯದಲ್ಲಿ ನಾನು ಅಷ್ಟೊಂದು ಗಮನಹರಿಸಲೇ ಇಲ್ಲ. ಅದಕ್ಕಾಗಿ ತಡವಾಗಿದೆ ಎಂದು ಹೇಳಿಕೊಂಡಿದ್ದಾರೆ.
ರಾಜಕೀಯದಲ್ಲಿ ಆಸಕ್ತಿ ಇಲ್ಲ ಎಂದಿದ್ದ ಅರುಣ್: ನನಗೆ ರಾಜಕೀಯ ಆಸಕ್ತಿ ಇಲ್ಲ. ಕಲಾ ಸೇವೆಯಲ್ಲಿ ನಂಬಿಕೆಯಿದೆ. ಯುವಕರು ಕುಲಕಸುಬು ನಂಬಿದರೆ ಒಳ್ಳೆಯ ಜೀವನ ರೂಪಿಸಿಕೊಳ್ಳಬಹುದು. ಅದಕ್ಕೆ ನಾನೇ ಉದಾಹರಣೆ. ರಾಜಕೀಯದ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ. ರಾಜಕೀಯಕ್ಕೆ ಬರುವ ಆಸಕ್ತಿಯೂ ನನಗೆ ಇಲ್ಲ. ಕಲಾವಿದನಾಗಿಯೇ ಮುಂದುವರಿಯುತ್ತೇನೆ ಎಂದು ಹೇಳಿದ್ದರು. ಇದನ್ನೂ ಓದಿ: 2030ರ ವೇಳೆಗೆ 30,000 ಭಾರತೀಯ ವಿದ್ಯಾರ್ಥಿಗಳನ್ನು ಫ್ರಾನ್ಸ್ ಸ್ವಾಗತಿಸಲಿದೆ: ಮ್ಯಾಕ್ರನ್