ಹುಬ್ಬಳ್ಳಿ: ಸಿದ್ದರಾಮಯ್ಯನವರು ತಮ್ಮ ಸರ್ಕಾರ ಇದ್ದ ಸಂದರ್ಭದಲ್ಲಿ ಒಡೆದಾಳುವ ನೀತಿ ಮಾಡಿದ್ದರು ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಸಚಿವ ಅರುಣ್ ಸಿಂಗ್ ಆರೋಪಿಸಿದ್ದಾರೆ.
Advertisement
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಇಬ್ಭಾಗ ಮನೆ ಇದ್ದಂತಿದೆ. ಡಿಕೆಶಿ ಹಾಗೂ ಸಿದ್ದರಾಮಯ್ಯನವರು ಸಿಎಂ ಆಗುತ್ತಾರೆ ಎಂದು ಜಗಳ ನಡೆದಿದೆ. ಕೇಂದ್ರ ಕಾಂಗ್ರೆಸ್ ನಾಯಕರು ಫೇಲ್ ಆಗಿದ್ದಾರೆ. ನಮ್ಮ ನಾಯಕರು ಮಾತನಾಡಿದರೆ ಮತ ಹಾಕುತ್ತಾರೆ. ರಾಹುಲ್ ಗಾಂಧಿ ಮಾತನಾಡಿದರೆ ಯಾರೂ ಮತ ಹಾಕಲ್ಲ. ಸಿದ್ದರಾಮಯ್ಯನವರು ತಮ್ಮ ಸರ್ಕಾರದ ವೇಳೆ ಒಡೆದಾಳುವ ನೀತಿ ಮಾಡಿದ್ದರು. ಕೈ ಪಕ್ಷವು ಧರ್ಮ ಒಡೆಯುವ ಕೆಲಸ ಮಾಡಿತ್ತು ಎಂದು ಕಿಡಿಕಾರಿದರು. ಇದನ್ನೂ ಓದಿ: 15 ರಿಂದ 18 ವರ್ಷದವರು ಜ. 1ರಿಂದ ಕೋವಿನ್‌ನಲ್ಲಿ ಲಸಿಕೆಗೆ ಹೆಸರು ನೋಂದಾಯಿಸಬಹುದು
Advertisement
Advertisement
ಸಿಎಂ ಬದಲಾವಣೆ ಇಲ್ಲಾ. ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಒಳ್ಳೆ ಕೆಲಸ ಮಾಡುತ್ತಿದ್ದು, ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಸ್ವತಃ ಯಡಿಯೂರಪ್ಪರವರೇ ಮೋದಿ ಅವರಿಗೆ ಹೇಳಿ ಸಿಎಂ ಬದಲಾವಣೆ ಮಾಡಿದ್ದರು. ನಮ್ಮ ಸರ್ಕಾರ ಹಾಗೂ ಸಿಎಂ ಮೇಲೆ ಯಾವುದೇ ಅವ್ಯವಹಾರದ ಆರೋಪ ಇಲ್ಲ. ರಾಜ್ಯ ಸರ್ಕಾರದ ಸಿಎಂ ಒಳ್ಳೆಯವರು. ಹೀಗಾಗಿ ಮುಂದಿನ ಚುನಾವಣೆ ಬೊಮ್ಮಾಯಿ ನೇತೃತ್ವದಲ್ಲಿ ನಡೆಯಲಿದೆ ಎಂದು ಹೇಳಿದರು.
Advertisement
ಮುಂಬರುವ ಕರ್ನಾಟಕ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿಯದ್ದೇ ಸರ್ಕಾರ ಬರಲಿದೆ. 150 ಸೀಟು ನಾವು ಗೆಲ್ಲಲಿದ್ದೇವೆ. ಗ್ರಾಮ ಪಂಚಾಯ್ತಿಯಲ್ಲಿ ಹಾಗೂ ಪಾಲಿಕೆಯಲ್ಲಿ ಮತ್ತು ಪರಿಷತ್‍ನಲ್ಲಿ ನಾವು ಹೆಚ್ಚು ಸ್ಥಾನ ಗೆದ್ದಿದ್ದೇವೆ. ಪರಿಷತ್ ಚುನಾವಣೆಯಲ್ಲಿ ನಡೆದ ಕೆಲ ಲೋಪದ ಬಗ್ಗೆ ನಾವು ಚರ್ಚೆ ಮಾಡುತ್ತೇವೆ. ನಾವು ಬೆಳಗಾವಿ ಪರಿಷತ್ ಚುನಾವಣೆ ಗೆಲ್ಲಬೇಕಿತ್ತು. ಆ ಬಗ್ಗೆ ಆಂತರಿಕ ತನಿಖೆ ಮಾಡುತ್ತೇವೆ ಎಂದು ನುಡಿದರು. ಇದನ್ನೂ ಓದಿ: ಕೊರೊನಾ ನಿಯಂತ್ರಣಕ್ಕೆ ಮೈಸೂರು ಪೊಲೀಸರಿಂದ ವಿನೂತನ ಪ್ರಯತ್ನ – ಸ್ವಯಂ ಸೇವಕರಿಗೆ ಗುರುತಿನ ಚೀಟಿ
ಪಕ್ಷ ಸಂಘಟನೆ ಒಳ್ಳೆಯ ಕೆಲಸ ಮಾಡುತ್ತಿದೆ. ರಾಜ್ಯ ಸರ್ಕಾರ ಕೂಡಾ ಒಳ್ಳೆಯ ಕೆಲಸ ಮಾಡುತ್ತಿದೆ. ಜೆಪಿ ನಡ್ಡಾ ನಾಳೆ ಹುಬ್ಬಳ್ಳಿಗೆ ಬಂದು ಮಾತನಾಡಬೇಕಿತ್ತು. ಆದರೆ ಸರ್ಕಾರದ ನಿಯಮದಂತೆ ಕೋವಿಡ್ 19 ಹಿನ್ನೆಲೆ ಅವರ ಕಾರ್ಯಕ್ರಮ ಮುಂದೆ ಹಾಕಲಾಗಿದೆ. ಜೆಪಿ ಅವರು ನಾಳೆ ಬರುತ್ತಿಲ್ಲ. ಮುಂದೆ ಯಾವುದಾದರು ದೊಡ್ಡ ಕಾರ್ಯಕ್ರಮದಲ್ಲಿ ಅವರು ಬರಲಿದ್ದಾರೆ ಎಂದು ಹೇಳಿದರು.
ಎರಡು ದಿನದ ಹಿಂದೆಯೇ ಕೊವಿಡ್-19 ನಿಯಮ ಬಂದಿದ್ದರಿಂದ ಅವರು ಬರುತ್ತಿಲ್ಲ. ಕೋವಿಡ್ ಸಂಕಷ್ಟ ದೂರವಾಗಿಲ್ಲ. ದೇಶದಲ್ಲಿ ಹಾಗೂ ರಾಜ್ಯದಲ್ಲಿ ವ್ಯಾಕ್ಸಿನ್ ಹಾಕುವುದು ಮುಂದುವರಿದಿದೆ. ಕಾಂಗ್ರೆಸ್ ಪಕ್ಷ ಹೇಗೆ ಕಾರ್ಯಕ್ರಮ ಮಾಡುತ್ತಾರೆ ಎಂದು ಹೇಳಿತ್ತು. ಆದರೆ ನಾವು ನಿಯಮದಂತೆ ಕಾರ್ಯಕಾರಿಣಿ ಮಾಡುತ್ತಿದ್ದೇವೆ. ಕಾರ್ಯಕಾರಿಣಿಯಲ್ಲಿ ರಾಜಕೀಯ ಬಗ್ಗೆ ಹಾಗೂ ಪಕ್ಷದ ಮುಂದಿನ ರೂಪು-ರೇಷಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದರು.