ಮುಂಬೈ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ 17ನೇ ಆವೃತ್ತಿ IPLನ ಕೆಲ ಪಂದ್ಯಗಳು ವಿದೇಶದಲ್ಲಿ ನಡೆಯಲಿವೆ ಎಂಬ ಊಹಾಪೋಹಗಳಿಗೆ ಐಪಿಎಲ್ ಮುಖ್ಯಸ್ಥ ಅರುಣ್ ಧುಮಾಲ್ (Arun Dhumal) ತೆರೆ ಎಳೆದಿದ್ದಾರೆ. ಈ ಬಾರಿ ಐಪಿಎಲ್ ಭಾರತದಲ್ಲೇ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ಈ ಬಾರಿ ಐಪಿಎಲ್ ಭಾರತದಲ್ಲೇ ನಡೆಯಲಿದೆ. ಈ ಬಗ್ಗೆ ಸರ್ಕಾರದ ಜೊತೆ ಮಾತುಕತೆ ನಡೆಸುತ್ತಿದ್ದೇವೆ. ಲೋಕಸಭೆ ಚುನಾವಣೆಗೆ (Lok Sabha Elections) ವೇಳಾಪಟ್ಟಿ ಪ್ರಕಟಗೊಳ್ಳಲು ಕಾಯುತ್ತಿದೇವೆ. ಆ ಬಳಿಕ ಐಪಿಎಲ್ ವೇಳಾಪಟ್ಟಿ ಅಂತಿಮಗೊಳಿಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ 3ನೇ ಟೆಸ್ಟ್ ಪಂದ್ಯಕ್ಕೆ ಜಡ್ಡು ಇನ್ – ಕೆ.ಎಲ್ ರಾಹುಲ್ ಬದಲಿಗೆ ಮತ್ತೊಬ್ಬ ಕನ್ನಡಿಗನಿಗೆ ಚಾನ್ಸ್
ಎಲ್ಲವೂ ಅಂದುಕೊಂಡಂತೆ ನಡೆದರೆ ಮಾರ್ಚ್ ಅಂತ್ಯದ ವೇಳೆಗೆ ಟೂರ್ನಿ ಆರಂಭಗೊಳ್ಳುವ ನಿರೀಕ್ಷೆಯಿದೆ. ಏಪ್ರಿಲ್‌ನಲ್ಲಿ ಚುನಾವಣೆ ನಡೆಯಬಹುದು. ಹೀಗಾಗಿ ಸರ್ಕಾರದ ಜೊತೆ ಸಂಪರ್ಕದಲ್ಲಿದ್ದೇವೆ. ಜೊತೆಗೆ ಎಲ್ಲಾ ಪಂದ್ಯಗಳು ಭಾರತದಲ್ಲಿ ನಡೆಯುವಂತೆ ನೋಡಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 1,078 ತಂಡಗಳು, 16,100 ಆಟಗಾರರು – ಮೋದಿ ತವರಲ್ಲಿ ʻಲೋಕಸಭಾ ಪ್ರೀಮಿಯರ್ ಲೀಗ್ʼಗೆ ಚಾಲನೆ
ಐಪಿಎಲ್ ಯಾವಾಗಿನಿಂದ ಶುರು?
17ನೇ ಆವೃತ್ತಿಯ ಐಪಿಎಲ್ ಮಾರ್ಚ್ 22 ರಿಂದ ಆರಂಭವಾಗಿ ಮೇ 26ರ ವರೆಗೆ ನಡೆಯುವ ಸಾಧ್ಯತೆಗಳಿವೆ. ಚುನಾವಣಾ ವೇಳಾಪಟ್ಟಿ ನಿಗದಿಪಡಿಸಿದ ನಂತರ ಐಪಿಎಲ್ ದಿನಾಂಕ ಘೋಷಣೆ ಮಾಡುವ ಸಾಧ್ಯತೆಗಳಿವೆ. ಐಪಿಎಲ್‌ಗೂ ಮುನ್ನ ಮಹಿಳಾ ಪ್ರೀಮಿಯರ್ ಲೀಗ್ ಸಹ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: 8 ತಿಂಗಳಲ್ಲಿ ಆಸ್ಟ್ರೇಲಿಯಾ ವಿರುದ್ಧವೇ 3 ವಿಶ್ವಕಪ್ ಟ್ರೋಫಿ ಕಳೆದುಕೊಂಡ ಭಾರತ!
ಲೋಕಸಭೆ ಚುನಾವಣೆ ವರ್ಷದಲ್ಲಿ ಭಾರತದ ಐಪಿಎಲ್ ಟೂರ್ನಿ ನಡೆಯುತ್ತಿರುವುದು ಇದು ನಾಲ್ಕನೇ ಬಾರಿ. ಈ ಹಿಂದೆಯೂ 2009, 2014 ಮತ್ತು 2019 ರಲ್ಲಿಯೂ ಲೋಕಸಭಾ ಚುನಾವಣಾ ವರ್ಷದಲ್ಲೇ ಐಪಿಎಲ್ ನಡೆದಿತ್ತು. ಅಲ್ಲದೇ 2009 ಮತ್ತು 2014ರಲ್ಲಿ ದೇಶದ ಹೊರಗೆ ಐಪಿಎಲ್ ಅನ್ನು ಸ್ಥಳಾಂತರಿಸಲಾಗಿತ್ತು. ಆದ್ರೆ 2019ರಲ್ಲಿ ಭಾರತದಲ್ಲಿಯೇ ನಡೆದಿತ್ತು.