ಮುಸ್ಲಿಮರಿಗಷ್ಟೇ ಗಂಡಸ್ತನ ಮೀಸೆ ಇರೋದಲ್ಲ, ಹಿಂದೂ ಹುಡುಗರಿಗೂ ಇದೆ: ಸ್ವಾಮೀಜಿಯಿಂದ ವಿವಾದಾತ್ಮಕ ಹೇಳಿಕೆ

Public TV
1 Min Read
Aruda Bharathi Swamiji 1

ಬೆಂಗಳೂರು: ಮುಸ್ಲಿಮರಿಗಷ್ಟೆ (Muslim) ಗಂಡಸ್ತನ, ಹೆಚ್ಚಾಗಿ ಮೀಸೆ ಇರೋದಲ್ಲ, ಹಿಂದೂ (Hindu) ಹುಡುಗರಿಗೂ ಗಂಡಸ್ತನ ಮೀಸೆ ಇದೆ. ಹಿಂದೂ ಹುಡುಗರು ಕೂಡ ಮುಸ್ಲಿಂ ಹುಡುಗಿಯರನ್ನು ಲವ್ ಮಾಡಿ ಮತಾಂತರ ಮಾಡಬೇಕಾಗುತ್ತೆ ಎಂದು ಸಿದ್ದರೂಢ ಇಂಟನ್ರ್ಯಾಷನಲ್ ಗುರುಕುಲಮ್‍ನ ಆರೂಢ ಭಾರತೀ ಸ್ವಾಮೀಜಿಗಳು (Aruda Bharathi Swamiji) ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

ಮಲ್ಲೇಶ್ವರಂನಲ್ಲಿ (Malleshwara) ಮತಾಂತರ ಹಾಗೂ ಗೋಹತ್ಯೆ ನಿಷೇಧ ಕಾಯ್ದೆಗಳ ವಾಪಸ್ ವಿಚಾರವಾಗಿ ನಡೆಯುತ್ತಿದ್ದ ಸಂತರ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಈ ವೇಳೆ ಲವ್ ಜಿಹಾದ್ ವಿಚಾರವಾಗಿ ಹೇಳಿಕೆ ನೀಡಿದ್ದಾರೆ. ಅಲ್ಲದೇ ಮುಸ್ಲಿಮರು ಈ ವಿಚಾರವಾಗಿ ಹುಷಾರಾಗಿ ಇರಬೇಕು ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: 14ರ ಬಾಲಕಿ ಪಕ್ಕದಲ್ಲಿ ಕುಳಿತು ಹಸ್ತಮೈಥುನ – ಭಾರತೀಯ ಅಮೆರಿಕನ್ ಡಾಕ್ಟರ್‌ ಅರೆಸ್ಟ್‌!

ಭಾರತದ ಸ್ವಾತಂತ್ರ್ಯ ನಂತರ ಹಿಂದೂ, ಜೈನ, ಸಿಖ್, ಬೌದ್ಧರ ಜನಸಂಖ್ಯೆ ಇಳಿಕೆ ಆಗುತ್ತಿದೆ. ಮುಸ್ಲಿಂ ಹಾಗೂ ಕ್ರೈಸ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಬಲವಂತದ ಮತಾಂತರದ ಪರಿಣಾಮವನ್ನು ಸೂಚಿಸುತ್ತದೆ. ಇವರ ಸಂಖ್ಯೆ ಹೆಚ್ಚಾಗಿದ್ದೆ ಹಿಂದೂಗಳಿಂದ. ಲವ್ ಜಿಹಾದ್ ಹಾಗೂ ಮತಾಂತರದ ಮೂಲಕ ಜನಸಂಖ್ಯೆ ಹೆಚ್ಚು ಮಾಡಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

ಸ್ವಪ್ರೇರಣೆಯಿಂದ ಮತಾಂತರ ಆಗುವುದರಲ್ಲಿ ತಪ್ಪಿಲ್ಲ. ಬಲವಂತವಾಗಿ ಮತಾಂತರ ಮಾಡುವುದು ಅಪರಾಧ. ಹಿಂದೂಗಳು ಸಂಕುಚಿತರಲ್ಲ, ನಾನು ಸಹ ಬೈಬಲ್ ಹಾಗೂ ಕುರಾನ್ ಓದಿದ್ದೇನೆ. ಹಿಂದೂಗಳ ದೇವಸ್ಥಾನ ಹಾಗೂ ಮಂದಿರಗಳನ್ನು ಒಡೆದು ಹಾಕಿ ಆ ಧರ್ಮದ ಅನುಯಾಯಿಗಳು ನೆಲೆನಿಲ್ಲದಂತೆ ನಾಶ ಮಾಡಬೇಕು ಎಂದು ಸ್ಪಷ್ಟವಾಗಿ ಬೈಬಲ್‍ನಲ್ಲಿ ಹೇಳಿದ್ದಾರೆ. ಇದಕ್ಕೆ ಮುಸ್ಲಿಮರು ಹೊರತಾಗಿಲ್ಲ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಅಹಮದಾಬಾದ್‌ನಲ್ಲಿ ‘ತಿರಂಗಾ ಯಾತ್ರೆಗೆ’ ಚಾಲನೆ ನೀಡಿದ ಅಮಿತ್ ಶಾ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article