LatestMain PostNational

23,000 ರುದ್ರಾಕ್ಷಿ ಬಳಸಿ ಶಿವನ ಶಿಲ್ಪಕಲೆ – ಕಲಾವಿದನ ಕೈಚಳಕಕ್ಕೆ ಮನಸೋತ ನೆಟ್ಟಿಗರು

Advertisements

ಭುವನೇಶ್ವರ: ದೇಶಾದ್ಯಂತ ಜನರು ಇಂದು ಮಹಾ ಶಿವರಾತ್ರಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ಈ ನಡುವೆ ಕಲಾವಿದರೊಬ್ಬರು ಕಡಲತೀರದ ಮರಳಿನಲ್ಲಿ 23,436 ರುದ್ರಾಕ್ಷಿ ಮಣಿಗಳನ್ನು ಬಳಸಿ ಶಿವನ ಶಿಲ್ಪಕಲೆಯನ್ನು ರಚಿಸಿದ್ದಾರೆ.

ಜನಪ್ರಿಯ ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಒಡಿಶಾದ ಪುರಿ ಕಡಲತೀರದಲ್ಲಿ 23,436 ರುದ್ರಾಕ್ಷಿ ಮಣಿಗಳಿಂದ ಅಲಂಕರಿಸಿ ಶಿವನ ಶಿಲ್ಪಕಲೆಯನ್ನು ರಚಿಸಿದ್ದಾರೆ. ಈ ಶಿಲ್ಪವನ್ನು ಬಿಡಿಸಲು ಸುದರ್ಶನ್ ಪಟ್ನಾಯಕ್ 12 ಟನ್ ಮರಳನ್ನು ಬಳಸಿದ್ದು, ಆರು ಗಂಟೆಗಳ ಸಮಯ ತೆಗೆದುಕೊಂಡಿದ್ದಾರೆ ಮತ್ತು ಮೊದಲ ಬಾರಿಗೆ ತಮ್ಮ ಮರಳಿನ ಕಲೆಯಲ್ಲಿ ರುದ್ರಾಕ್ಷಿಯನ್ನು ಬಳಸಿದ್ದಾರೆ. ಜೊತೆಗೆ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಶಾಂತವಾಗಲಿ ಎಂದು ಪ್ರಾರ್ಥಿಸೋಣ ಎಂದು ಬರೆದಿದ್ದಾರೆ. ಇದನ್ನೂ ಓದಿ: ತೆಲುಗು ಸೂಪರ್ ಸ್ಟಾರ್ ಬಾಲಯ್ಯ ಜತೆ ನಟಿಸಲ್ಲ ಅಂದ ಕನ್ನಡತಿ

ಪ್ರತಿ ಬಾರಿಯೂ ಸುದರ್ಶನ್ ಮರಳಿನ ಮೇಲೆ ಹೊಸ ರೀತಿಯದ್ದೇನಾದರೂ ಮಾಡಲು ಪ್ರಯತ್ನಿಸುತ್ತಾರೆ. ಕಳೆದ ಬಾರಿ ಶಿವರಾತ್ರಿ ಹಬ್ಬದಂದು ತರಕಾರಿ, ಕೆಂಪು ಗುಲಾಬಿ ಇತ್ಯಾದಿಗಳನ್ನು ಬಳಸಿದ್ದ ಅವರು ಈ ಬಾರಿ ಶಿವನ ಶಿಲ್ಪಕ್ಕೆ ರುದ್ರಾಕ್ಷಿಯನ್ನು ಬಳಸಿದ್ದಾರೆ. ಪದ್ಮಶ್ರೀ ಪುರಸ್ಕೃತರಾಗಿರುವ ಸುದರ್ಶನ್ ಜಗತ್ತಿನಾದ್ಯಂತ 60ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಮರಳು ಶಿಲ್ಪಕಲಾ ಸ್ಪರ್ಧೆಗಳು ಮತ್ತು ಉತ್ಸವಗಳಲ್ಲಿ ಭಾಗವಹಿಸಿ ದೇಶಕ್ಕೆ ಹಲವು ಬಹುಮಾನಗಳನ್ನು ಗಳಿಸಿದ್ದಾರೆ. ಕಲೆಯ ಮೂಲಕ ಆಗಾಗ ಜಾಗತಿಕ ಶಾಂತಿ, ಜಾಗತಿಕ ತಾಪಮಾನ, ಭಯೋತ್ಪಾದನೆಯನ್ನು ನಿಲ್ಲಿಸಿ, ಎಚ್‍ಐವಿ/ಏಡ್ಸ್ ಮತ್ತು ಕೋವಿಡ್ -19 ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ಮರಳು ಶಿಲ್ಪಕಲೆಯ ಮೂಲಕ ಸಾಮಾಜಿಕ ಸಂದೇಶಗಳನ್ನು ಸಾರುತ್ತಿರುತ್ತಾರೆ. ಇದನ್ನೂ ಓದಿ: CBI ಎಂದು ಸುಳ್ಳು ಹೇಳಿ ಲಕ್ಷಾಂತರ ರೂ. ಹಣ, ಕೆಜಿಗಟ್ಟಲೆ ಚಿನ್ನದೋಚಿದರು!

Leave a Reply

Your email address will not be published.

Back to top button