ಭಾರತ ಕೃಷಿ ಪ್ರಧಾನ ದೇಶ. ಇಲ್ಲಿ ಅರ್ಧದಷ್ಟು ಜನ ಜೀವಾನೋಪಾಯಕ್ಕಾಗಿ ಕೃಷಿಯನ್ನೇ ಅವಲಂಬಿಸಿದ್ದಾರೆ. ದೇಶದ ಕೃಷಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ತಂತ್ರಜ್ಞಾನ, ಆಧುನಿಕ ಉಪಕರಣ, ಕೃಷಿ ಪದ್ಧತಿ ಎಲ್ಲವೂ ಬದಲಾಗಿದೆ. ಹಾಗಾಗಿಯೇ ಕೃಷಿ ವಲಯವನ್ನು ಮೇಲೆತ್ತಲು ಹೊಸ ಹೊಸ ಸಂಶೋಧನೆಗಳು ನಡೆಯುತ್ತಿವೆ. ಹಾಗೆಯೇ ತೋಟಗಾರಿಕಾ ಬೆಳೆಗಳಿಗೆ ತಗುಲುವ ರೋಗಗಳು ಹಾಗೂ ಹವಾಮಾನ ಅನಿಶ್ಚಿತತೆಯ ಬಗ್ಗೆ ಮಾಹಿತಿ ನೀಡುವ `ಇಂಟರ್‌ನೆಟ್ ಆಫ್ ಥಿಂಗ್ಸ್ (IOT)’ ಎಂಬ ಕೃತಕ ಬುದ್ಧಿಮತ್ತೆ (AI) ಆಧಾರಿತ ಯಂತ್ರವೊಂದು ರೈತರ ಗಮನ ಸೆಳೆದಿದೆ. ಬೆಂಗಳೂರಿನ ಫಸಲ್ (Fasal) ಸಂಸ್ಥೆಯೇ ತಯಾರಿಸಿರುವ ಈ ಯಂತ್ರವನ್ನು ಇತ್ತೀಚೆಗೆ ನಡೆದ ತೋಟಗಾರಿಕಾ ಮೇಳದಲ್ಲಿಯೂ ಪ್ರದರ್ಶನಕ್ಕಿಡಲಾಗಿತ್ತು.
Advertisement
ಈ ಯಂತ್ರ ಹಣ್ಣಿನ ಬೆಳೆಗಳು (Fruit Crop) ಸೇರಿದಂತೆ ವಿವಿಧ ಬಗೆಯ ಗಿಡಗಳಿಗೆ ಎಷ್ಟು ಪ್ರಮಾಣದಲ್ಲಿ ನೀರು ಕೊಡಬೇಕು. ಗಿಡಕ್ಕೆ ಯಾವ ಹಂತದಲ್ಲಿ ಯಾವ ರೋಗ ಬರುತ್ತದೆ ಎಂಬುದರ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡುತ್ತದೆ. ಜೊತೆಗೆ ರೋಗಕ್ಕೆ ಯಾವ ಔಷಧ ಸಿಂಪಡಿಸುತ್ತಾರೆಂಬ ಮಾಹಿತಿಯ ನೀಡುತ್ತದೆ. ಈ ಯಂತ್ರ ಅಳವಡಿಸಿಕೊಳ್ಳುವವರು, ತಮ್ಮ ಮೊಬೈಲ್‌ನಲ್ಲಿ ಫಸಲ್ ಆಪ್ ಡೌನ್‌ಲೋಡ್ ಮಾಡಿಕೊಂಡು ಇನ್‌ಸ್ಟಾಲ್ ಮಾಡಿಕೊಂಡಿರಬೇಕು. ಈ ಆಪ್ ಮೂಲಕ ಯಂತ್ರ ಪ್ರತಿ ಹಂತದಲ್ಲೂ ಸೂಚನೆ ನೀಡುತ್ತದೆ. ಇದು ಇತ್ತೀಚೆಗೆ ಕೃಷಿ ವಲಯದಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ತರುತ್ತಿದೆ ಎಂದು ಸಂಸ್ಥೆಯ ಸಿಬ್ಬಂದಿ ವರುಣ್ ತಿಳಿಸಿದ್ದಾರೆ.
Advertisement
ಫಸಲ್ ಬಗ್ಗೆ ತಿಳಿಯುವುದು ಹೇಗೆ?
ಮೊದಲು ಪ್ಲೇ ಸ್ಟೋರ್ ಮೂಲಕ ಫಸಲ್ ತಂತ್ರಾಂಶ ಡೌನ್‌ಲೋಡ್ ಮಾಡಿಕೊಂಡು, ಮೊಬೈಲ್‌ನಲ್ಲಿ ಅನುಷ್ಠಾನ ಮಾಡಿಕೊಳ್ಳಬೇಕು. ನಂತರ ಹೆಸರು, ವಿಳಾಸ, ಜಮೀನಿನ ವಿಸ್ತೀರ್ಣದ ಬಗ್ಗೆ ಮಾಹಿತಿಗಳನ್ನು ನಮೂದಿಸಬೇಕು. ನಂತರ ಅಲ್ಲಿ ನಿಮ್ಮ ಜಮೀನಿನಲ್ಲಿ ಯಾವ ಬೆಳೆ ಬೆಳೆದಿದ್ದರೀರಿ ಅನ್ನೋ ಬಗ್ಗೆ ಮಾಹಿತಿ ನೀಡಬೇಕು. ಇದರ ಸಂಪೂರ್ಣ ಮಾಹಿತಿ ಪ್ರಕ್ರಿಯೆಯನ್ನೂ ಫಸಲ್ ಸಂಸ್ಥೆಯವರೇ ಹೇಳಿಕೊಡುತ್ತಾರೆ. ಇದನ್ನೂ ಓದಿ: ಕಲ್ಲೆಸೆತಕ್ಕೆ ಸುದ್ದಿಯಾಗಿದ್ದ ಕಾಶ್ಮೀರದಲ್ಲಿ ಫಸ್ಟ್ ಟೈಂ ಫಾರ್ಮುಲಾ 4 ರೇಸ್ – ಮೋದಿ ಮೆಚ್ಚುಗೆ
Advertisement
Advertisement
ಫಸಲ್ ಕೆಲಸವೇನು?
ಮಳೆ ಯಾವಾಗ, ಎಷ್ಟು ಪ್ರಮಾಣದಲ್ಲಿ ಬರುತ್ತದೆ? ಎಂಬ ಮಾಹಿತಿಯನ್ನು 14 ದಿನಗಳ ಮುಂಚೆಯೇ ತಿಳಿಸುತ್ತದೆ. ಅಲ್ಲದೇ ಬೆಳೆಗಳಿಗೆ ಯಾವ ರೋಗ ತಗುಲುತ್ತದೆ? ಎಷ್ಟು ಪ್ರಮಾಣದಲ್ಲಿ ಔಷಧ ಸಿಂಪಡಣೆ ಮಾಡಬೇಕು? ಎಲೆ ಮತ್ತು ಭೂಮಿಯ ಮೇಲೆ ಎಷ್ಟು ತೇವಾಂಶ ಇದೆ? ಭೂಮಿ ಮತ್ತು ಬೆಳೆಗಳಿಗೆ ಸಿಂಪಡಿಸಿದ ನೀರು ಎಷ್ಟು ಪ್ರಮಾಣದಲ್ಲಿ ಆವಿಯಾಗುತ್ತಿದೆ? ಗಾಳಿ ಯಾವ ಪ್ರಮಾಣದಲ್ಲಿ ಬೀಸುತ್ತಿದೆ? ವಾತಾವರಣ ಹೇಗಿದೆ? ಎಂಬ ಎಲ್ಲಾ ಮಾಹಿತಿಯನ್ನು ಆಪ್ ಮೂಲಕವೇ ಒದಗಿಸುತ್ತದೆ. ಇದನ್ನೂ ಓದಿ: ಆರ್‌ಸಿಬಿ ಮಹಿಳಾ ತಂಡಕ್ಕೆ ಸಿದ್ದರಾಮಯ್ಯ, ಡಿಕೆ ಸುರೇಶ್, ಬಿಜೆಪಿಯಿಂದ ಪ್ರಸಂಶೆಗಳ ಮಹಾಪೂರ
ಖರೀದಿಸುವುದು ಹೇಗೆ?
ಈಗಾಗಲೇ ದೇಶಾದ್ಯಂತ 6 ಸಾವಿರಕ್ಕೂ ಹೆಚ್ಚು ಗ್ರಾಹಕರನ್ನು ಒಳಗೊಂಡಿರುವ ಫಸಲ್ ಥಾಯ್‌ಲ್ಯಾಂಡ್‌ನಲ್ಲೂ ಹೆಚ್ಚಿನ ಗ್ರಾಹಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕೆಲವು ರೈತ ಗ್ರಾಕರು 8 ರಿಂದ 12 ಡಿವೈಸ್‌ಗಳನ್ನೂ (ಇಂಟರ್‌ನೆಟ್ ಆಫ್ ಥಿಂಗ್ಸ್ – ಐಒಟಿ) ಸಹ ಖರೀದಿಸಿದ್ದಾರೆ. ಐಒಟಿ ಎಐ ಡಿವೈಸ್ ಚಂದಾದಾರಿಕೆ ಆಧರಿತವಾದ ಯಂತ್ರವಾಗಿದೆ. ಇದನ್ನು ಒಮ್ಮೆ ಖರೀದಿಸಿದರೆ ನಂತರ ಒಟಿಟಿ ವೇದಿಕೆಯಂತೆ ಚಂದಾದಾರಿಕೆ ಪಡೆಯಬೇಕಾಗುತ್ತದೆ. ಆರಂಭಿಕ ಬೆಲೆ ರಿಯಾಯಿತಿ ದರ ಕಳೆದು ಒಂದು ಡಿವೈಸ್‌ಗೆ 40 ಸಾವಿರ ರೂ. ಇರುತ್ತದೆ. ಮೊದಲ 1 ವರ್ಷ ಯಾವುದೇ ಶುಲ್ಕ ಇರೋದಿಲ್ಲ. ಸಂಪೂರ್ಣ ಉಚಿತವಾಗಿರುತ್ತದೆ. ನಂತರ ವಾರ್ಷಿಕ 9 ಸಾವಿರ ರೂ.ಗಳಿಗೆ ಚಂದಾದಾರಿಕೆ ಪಡೆಯಬೇಕಾಗುತ್ತದೆ.
ಯಾವುದಕ್ಕೆಲ್ಲ ಫಸಲ್ ಉಪಯುಕ್ತ?
ಫಸಲ್ ಸಾಮಾನ್ಯ ಬೆಳೆಗಳಿಗಿಂತಲೂ ದಾಳಿಂಬೆ, ದ್ರಾಕ್ಷಿ, ಸೇಬು, ಬಾಳೆ ಸೇರಿದಂತೆ ವಾಣಿಜ್ಯ ಬೆಳೆಗಳಿಗೆ ಹೆಚ್ಚು ಉಪಯುಕ್ತವಾಗಿದೆ. ಅಲ್ಲದೇ ಒಂದೇ ಗುಣಲಕ್ಷಣದ ಮಣ್ಣನ್ನು ಹೊಂದಿದ್ದರೆ, ಅನುಕೂಲವಾಗುತ್ತದೆ. ಒಂದು ವೇಳೆ ಬೇರೆ ಗುಣಲಕ್ಷಣ ಇರುವ ಮಣ್ಣು ಹೊಂದಿದ್ದರೆ (ಉದಾ: ಕಪ್ಪು, ಕೆಂಪು ಮಣ್ಣು), ಮಣ್ಣಿನ ಲಕ್ಷಣಕ್ಕೆ ತಕ್ಕಂತೆ ಬೇರೆ ಬೇರೆ ಡಿವೈಸ್‌ಗಳನ್ನು ಬಳಸಬೇಕಾಗುತ್ತದೆ. ಇದನ್ನೂ ಓದಿ: ರಾಜಕೀಯ ಪಕ್ಷಕ್ಕಾಗಿ ನೀವೂ ನ್ಯಾಯಾಲಯದಲ್ಲಿಲ್ಲ, ಮಾ.21ರ ಒಳಗಡೆ ಎಲ್ಲ ದಾಖಲೆ ಬಿಡುಗಡೆಗೆ ಸೂಚನೆ – ಎಸ್‌ಬಿಐ ವಿರುದ್ಧ ಸುಪ್ರೀಂ ಕೆಂಡ
ಐಒಟಿ ಡಿವೈಸ್ ಸಾಮರ್ಥ್ಯ ಎಷ್ಟು?
ಐಒಟಿ ಎಐ ಡಿವೈಸ್ ಒಂದು ಡಿವೈಸ್ 5 ಎಕರೆಗಳಷ್ಟು ಭೂಮಿಯನ್ನು ನಿರ್ವಹಣೆ ಮಾಡುವ ಸಾಮರ್ಥ್ಯ ಹೊಂದಿರುತ್ತದೆ. ಆದ್ರೆ ಒಂದು ಯಂತ್ರವನ್ನು ಅರ್ಧ ಎಕರೆಯಿಂದ 5 ಎಕೆರೆಗಳಷ್ಟು ಭೂ ಪ್ರದೇಶಕ್ಕೂ ಬಳಸಬಹುದು. ಇದು ಸೋಲಾರ್‌ನಿಂದಲೇ ಕೆಲಸ ಮಾಡುವುದರಿಂದ ವಿದ್ಯುತ್ ಖರ್ಚು ಸಹ ಉಳಿತಾಯವಾಗುತ್ತದೆ. ಒಂದು ಬಾರಿ 100% ನಷ್ಟು ಚಾರ್ಜ್ ಆದರೆ, ಕನಿಷ್ಠ 30 ದಿನಗಳ ಕಾಲ ಕಾರ್ಯ ನಿರ್ವಹಿಸುತ್ತದೆ ಎನ್ನುತ್ತಾರೆ ವರುಣ್.
– ಮೋಹನ ಬಿ.ಎಂ