ಧಾರವಾಡದಲ್ಲಿ ಕೃತಕ ಆನೆ ಬಳಸಿ ದಸರಾ ಮೆರವಣಿಗೆ

Public TV
1 Min Read
Dasara Dharwada 2

ಧಾರವಾಡ: ದಸರಾ ಜಂಬೂ ಸವಾರಿಯ ಮೆರವಣಿಗೆಯನ್ನ ಧಾರವಾಡದಲ್ಲಿ ಕೃತಕ ಆನೆ ಬಳಸಿ ವಿಶೇಷವಾಗಿ ಮಾಡಲಾಯಿತು.

Dasara Dharwada 1

ದಸರಾ ಜಂಬೂ ಸವಾರಿ ಸಮಿತಿಯಿಂದ ಈ ಕಾರ್ಯಕ್ರಮ ಆಯೋಜಿಸಿದ್ದು, ನಗರದ ಗವಳಿಗಲ್ಲಿಯಿಂದ ಜಂಬೂ ಸವಾರಿ ಆರಂಭಿಸಿ, ಹಲವು ಬಡಾವಣೆಗಳಲ್ಲಿ ಮೆರವಣಿಗೆಯನ್ನ ನಡೆಸಲಾಯಿತು. ಸರ್ಕಾರದಿಂದ ಜೀವಂತ ಆನೆಯ ಬಳಕೆಗೆ ಅನುಮತಿ ಸಿಗದ ಹಿನ್ನೆಲೆ, ಬೈಕ್ ಮೇಲೆ ಕೃತಕ ಆನೆಯ ರೂಪಕದ ಮೇಲೆ ಅಂಬಾರಿ ಇಟ್ಟು ಮೆರವಣಿಗೆ ಮಾಡಲಾಯಿತು. ಇದನ್ನೂ ಓದಿ: ರಂಗಕರ್ಮಿ ಜಿ.ಕೆ.ಗೋವಿಂದ ರಾವ್ ಇನ್ನಿಲ್ಲ

Dasara Dharwada

ಪ್ರತಿ ವರ್ಷ ಧಾರವಾಡದಲ್ಲಿ ಎರಡು ದಿನಗಳ ಕಾಲ, ಮೂಲ ದಸರಾ ಸಮಿತಿಯವರು ಹಾಗೂ ದಸರಾ ಉತ್ಸವ ಸಮಿತಿಯವರು ಬೇರೆ ಬೇರೆಯಾಗಿ ದಸರಾ ಮಾಡುತ್ತಿದ್ದರು. ಆದರೆ ಈ ಬಾರಿ ಈ ಎರಡೂ ಸಮಿತಿಯವರು ಸೇರಿ ಹಬ್ಬ ಮಾಡಿದ್ದು, ವಿಶೇಷವಾಗಿತ್ತು. ಕಲಾವಿದ ಮಂಜುನಾಥ ಹಿರೇಮಠ ಅವರು ತನ್ನದೇ ಬೈಕ್ ಮೇಲೆ ಈ ಕೃತಕ ಆನೆಯ ರೂಪಕ ತಯಾರಿಸಿದ್ದರು. ಇದನ್ನೂ ಓದಿ: ಅಮೇರಿಕಾದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು

Share This Article
Leave a Comment

Leave a Reply

Your email address will not be published. Required fields are marked *