– ಜಮ್ಮು-ಕಾಶ್ಮೀರದಲ್ಲಿ ಏಮ್ಸ್, ಐಐಟಿ ಸ್ಥಾಪನೆ
– ರೈಲ್ವೇ ಸಂಪರ್ಕ, ವಿಮಾನ ನಿಲ್ದಾಣ ಅಭಿವೃದ್ಧಿ
ನವದೆಹಲಿ: ಕಾಶ್ಮೀರವನ್ನು ವಿಶ್ವವೇ ನೋಡುವಂತೆ ಅಭಿವೃದ್ಧಿಪಡಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸುವ ವಿಚಾರದಲ್ಲಿ ಮೋದಿಯವರು ಸಂಸತ್ ಕಲಾಪದಲ್ಲಿ ಹಾಜರಾಗಿದ್ದರೂ ಯಾವುದೇ ಮಾತನಾಡಿರಲಿಲ್ಲ. ಆದರೆ ಇಂದು ರಾತ್ರಿ 8 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನಾಡಿ ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿದ್ದು ಯಾಕೆ? ಯಾವ ರೀತಿ ಅಭಿವೃದ್ಧಿ ಪಡಿಸುತ್ತೇವೆ ಎನ್ನುವುದನ್ನು ತಿಳಿಸುವ ಮೂಲಕ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.
Advertisement
ಮೋದಿ ಹೇಳಿದ್ದು ಏನು?
ನಾವು ಐತಿಹಾಸಿಕ ನಿರ್ಣಯವನ್ನು ಕೈಗೊಂಡಿದ್ದೇವೆ. ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಜನತೆ ಅನೇಕ ಅಧಿಕಾರಗಳಿಂದ ವಂಚಿತರಾಗಿದ್ದರು. ಸರ್ದಾರ್ ವಲ್ಲಭಭಾಯಿ ಪಟೇಲ್, ಡಾ.ಬಿ.ಆರ್.ಅಂಬೇಡ್ಕರ್, ಶ್ಯಾಮ್ ಪ್ರಸಾದ್ ಮುಖರ್ಜಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಸೇರಿದಂತೆ ಕೋಟ್ಯಂತರ ಜನರು ಭಾರತದ ಏಕೀಕರಣದ ಕನಸನ್ನು ಕಂಡಿದ್ದರು. ಆ ಕನಸು ಈಗ ಪೂರ್ಣಗೊಂಡಿದೆ.
Advertisement
#WATCH PM Narendra Modi: I want to make it clear, your representative will be elected by you, your representative will come from amongst you… I have complete faith, under this new system we all will be able to free Jammu and Kashmir of terrorism and separatism. pic.twitter.com/HWRmJdcxmt
— ANI (@ANI) August 8, 2019
Advertisement
ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಜನತೆಗೆ ಹೃದಯಪೂರ್ವಕ ಧನ್ಯವಾದ ತಿಳಿಸುತ್ತೇನೆ. 370 ಹಾಗೂ 35 (ಎ) ವಿಧಿ ರದ್ದಗೊಳಿಸಿದ್ದರಿಂದ ಜಮ್ಮು-ಕಾಶ್ಮೀರ ಹಾಗೂ ಲಡಾಖ್‍ದಲ್ಲಿ ಹೊಸ ಯುಗ ಆರಂಭವಾಗಿದೆ. ಇನ್ನುಮುಂದೆ ದೇಶದ ಎಲ್ಲಾ ಜನರಿಗೂ ಸಮಾನ ಹಕ್ಕು, ಕಾನೂನು ಅನ್ವಯವಾಗಲಿದೆ. ಜಮ್ಮು-ಕಾಶ್ಮೀರದ ಜನ ಜನತೆ ಇನ್ನುಮುಂದೆ ಯಾವುದೇ ಆತಂಕ, ಭಯೋತ್ಪಾದನೆ, ಭ್ರಷ್ಟಾಚಾರಕ್ಕೆ ಹೆದರುವ ಅವಶ್ಯಕತೆ ಇರುವುದಿಲ್ಲ.
Advertisement
370 ಹಾಗೂ 35 (ಎ) ವಿಧಿಯಿಂದ 42 ಸಾವಿರ ಮಂದಿ ಅಮಾಯಕರು ಜೀವ ಕಳೆದುಕೊಂಡಿದ್ದರು. ಅಷ್ಟೇ ಅಲ್ಲದೆ ಪಾಕಿಸ್ತಾನವು ಈ ವಿಧಿಗಳನ್ನು ಅಸ್ತ್ರವಾಗಿ ಬಳಕೆ ಮಾಡಿಕೊಂಡಿತ್ತು. ಈ ವಿಧಿಗಳನ್ನು ಯಾವುದೇ ಮಹಾಮೈತ್ರಿ ಸರ್ಕಾರ ಬಂದರೂ ರದ್ದುಗೊಳಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಮೊದಲು ಇದ್ದ ಸರ್ಕಾರ ಕಾನೂನು ಮಾಡಲು ಭಾರೀ ಕಷ್ಟಪಡುತಿತ್ತು. ಭಾರತದ ಪ್ರತಿಯೊಂದು ರಾಜ್ಯದ ಮಗುವು ಶಿಕ್ಷಣ ಪಡೆಯಬೇಕು ಎಂದು ಅನೇಕ ಯೋಜನೆ ರೂಪಿಸಿದ್ದೇವೆ. ಆದರೆ ಜಮ್ಮು-ಕಾಶ್ಮೀರದ ಮಕ್ಕಳು ಇಂತಹ ಯೋಜನೆಯಿಂದ ವಂಚಿತವಾಗುತ್ತಿದ್ದರು. ಅಷ್ಟೇ ಅಲ್ಲದೆ ದೇಶದ ಹೆಣ್ಣು ಮಕ್ಕಳಿಗೆ ಸಿಗುವ ಹಕ್ಕು, ಸವಲತ್ತುಗಳು ಜಮ್ಮು-ಕಾಶ್ಮೀತರ ಹೆಣ್ಣು ಮಕ್ಕಳಿಗೆ ಸಿಗುತ್ತಿರಲಿಲ್ಲ. ಅತ್ಯಾಚಾರಿಗಳಿಗೆ ಸೂಕ್ತ ಶಿಕ್ಷೆ ಆಗುತ್ತಿರಲಿಲ್ಲ. 370 ವಿಧಿ ಇದ್ದ ಕಾರಣ ಚುನಾವಣೆಯಲ್ಲಿ ದಲಿತರಿಗೆ, ಎಸ್‍ಟಿ, ಎಸ್‍ಸಿ ಸಮುದಾಯದವರಿಗೆ ಮೀಸಲಾತಿ ಸಿಗುತ್ತಿರಲಿಲ್ಲ.
ಜಮ್ಮು ಕಾಶ್ಮೀರವನ್ನು ಮೂರು ಕುಟುಂಬಗಳು ಮಾತ್ರ ಆಡಳಿತ ನಡೆಸುತಿತ್ತು. ಆದರೆ ನಾವು ಜನ ಆಡಳಿತ ನಡೆಸುವಂತೆ ಮಾಡುತ್ತೇವೆ. ಕೇಂದ್ರಾಡಳಿತವನ್ನಾಗಿ ಘೋಷಿಸಿದ್ದು ತಾತ್ಕಾಲಿಕ ಅಷ್ಟೇ. ಎಲ್ಲವೂ ಸರಿಯಾದರೆ ಮತ್ತೆ ರಾಜ್ಯವನ್ನಾಗಿಸುತ್ತೇವೆ. ಆದರೆ ಲಡಾಖ್ ಜನರ ಆಸೆಯಂತೆ ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಇರಿಸುತ್ತೇವೆ ಎಂದು ತಿಳಿಸಿದರು.
ಜಮ್ಮು-ಕಾಶ್ಮೀರದ ಜನತೆ, ಪೊಲೀಸರು, ಅಧಿಕಾರಿಗಳು ಹಾಗೂ ಕಾರ್ಮಿಕರಿಗೆ ಕೇಂದ್ರ ಸರ್ಕಾರದ ಅನೇಕ ಯೋಜನೆಗಳು ಸಿಗಲಿವೆ. ಜೊತೆಗೆ ಕೇಂದ್ರ ಸರ್ಕಾರವು ಜನರ ಜೀವನಮಟ್ಟ ಸುಧಾರಿಸಲು ಕೈಗಾರಿಕೆ, ಉದ್ಯೋಗ ಸೃಷ್ಟಿಗೆ ಶ್ರಮಿಸಲಿದೆ. ಸೈನಿಕರಾಗಲು ಮುಂದಾಗುವ ಯುವಜನತೆ ಉದ್ಯೋಗ ನೀಡಿ ಸೇನೆಯನ್ನು ಭರ್ತಿ ಮಾಡುತ್ತೇವೆ. ಪ್ರಧಾನ ಮಂತ್ರಿ ವಿದ್ಯಾರ್ಥಿ ವೇತನವನ್ನು ಕೂಡ ನೀಡಲಾಗುತ್ತದೆ.
ಜಮ್ಮು-ಕಾಶ್ಮೀರದಲ್ಲಿ ಕೆಲವು ಯೋಜನೆಗಳು ಕಾಗದಲ್ಲಿ ಮಾತ್ರ ಇದ್ದವು. ಇನ್ನು ಮುಂದೆ ಕೇಂದ್ರ ಸರ್ಕಾರ ಇವುಗಳನ್ನು ಅನುಷ್ಠಾನಕ್ಕೆ ತರಲಿದೆ. ಐಐಟಿ, ಏಮ್ಸ್, ರೈಲ್ವೇ ಸಂಪರ್ಕ, ಭ್ರಷ್ಟಾಚಾರ ನಿಗ್ರಹ ದಳ, ವಿಮಾನ ನಿಲ್ದಾಣ ಅಭಿವೃದ್ಧಿ ಹಂತ ಹಂತವಾಗಿ ಕಾರ್ಯಗತಗೊಳ್ಳಲಿದೆ. ನಿಮ್ಮ ಜನಪ್ರತಿನಿಧಿಯನ್ನು ನೀವೇ ಆಯ್ಕೆ ಮಾಡಬೇಕು. ನಿಮ್ಮಿಂದಲೇ ಅವರು ಅಧಿಕಾರಕ್ಕೆ ಬರಬೇಕು. ನಾವು ನೀವು ಸೇರಿ ಭಯೋತ್ಪಾದನೆ ಹಾಗೂ ಉಗ್ರವಾದವನ್ನು ಹಿಮ್ಮೆಟ್ಟಬೇಕಿದೆ. ಈ ಮೂಲಕ ದೇಶದ ಅಭಿವೃದ್ಧಿಗೆ ಮುಂದಾಗೋಣ
ಕಾಶ್ಮೀರದ ಸೊಬಗನ್ನು ಜನತ್ತಿಗೆ ತೋರಿಸಲು ಪ್ರತಿಯೊಬ್ಬರು ಮುಂದಾಗಬೇಕಿದೆ. ಪ್ರತ್ಯೇಕವಾದಿಗಳು ಹಾಗೂ ಉಗ್ರವಾದಿಗಳಿಗೆ ಕಾಶ್ಮೀರಿಗಳೇ ತಕ್ಕ ಶಾಸ್ತಿ ಮಾಡಲಿದ್ದಾರೆ. ಹಿಂದೆ ಕಾಶ್ಮೀರದಲ್ಲಿ ಸಿನಿಮಾ ಶೂಟಿಂಗ್ ನಡೆಯುತಿತ್ತು. ಆದರೆ ಈಗ ಶೂಟಿಂಗ್ ನಡೆಯುತ್ತಿಲ್ಲ. ಇನ್ನು ಮುಂದೆ ಪ್ರವಾಸೋದ್ಯಮ ಅಭಿವೃದ್ಧಿ ಮಾಡುತ್ತೇವೆ. ಈ ಮೂಲಕ ಉದ್ಯೋಗ ಸೃಷ್ಟಿಯಾಗಲಿದೆ. ಜಮ್ಮು ಕಾಶ್ಮೀರ ಯುವಜನತೆಯಲ್ಲಿ ಎಲ್ಲ ಶಕ್ತಿ ಇದೆ. ಕಾಶ್ಮೀರದಲ್ಲಿ ಉತ್ತಮ ಕ್ರೀಡಾಪಟುಗಳು ತಯಾರಾಗಬೇಕು. ಇದಕ್ಕಾಗಿ ಉತ್ತಮ ಕ್ರೀಡಾಂಗಣವನ್ನು ತಯಾರು ಮಾಡುತ್ತೇವೆ.