ವಾಷಿಂಗ್ಟನ್: ಆರ್ಟೆಮಿಸ್-1 ಮೂನ್ ಮಿಷನ್ ನಲ್ಲಿ ಇಂಧನ ಸೋರಿಕೆ ಸಮಸ್ಯೆಯನ್ನು ಇಂಜಿನಿಯರ್‌ಗಳ ತಂಡವು ಸ್ಥಿತಿಗೊಳಿಸುವಲ್ಲಿ ವಿಫಲವಾಗಿದ್ದು ನಾಸಾ ಮತ್ತೆ ರಾಕೆಟ್ ಉಡಾವಣೆಯನ್ನು ಮುಂದೂಡಿದೆ.
The #Artemis I mission to the Moon has been postponed. Teams attempted to fix an issue related to a leak in the hardware transferring fuel into the rocket, but were unsuccessful. Join NASA leaders later today for a news conference. Check for updates: https://t.co/6LVDrA1toy pic.twitter.com/LgXnjCy40u
— NASA (@NASA) September 3, 2022
Advertisement
322 ಅಡಿ ಎತ್ತರದ ರಾಕೆಟ್ ಅನ್ನು ನಾಸಾ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾಯಿಸಲು ಯೋಜಿಸಿತ್ತು. ಭಾರೀ ನಿರೀಕ್ಷೆಯೊಂದಿಗೆ ಉಡಾವಣೆಯಾಗಬೇಕಿದ್ದ ಆರ್ಟಿಮಿಸ್-1 ಮೂನ್ ಮಿಷನ್ ಸದ್ಯಕ್ಕೆ ಸ್ಥಗಿತಗೊಂಡಿದ್ದು, 2ನೇ ಬಾರಿಗೆ ಮುಂದೂಡಲ್ಪಟ್ಟಿದೆ.
Advertisement
During tanking of the #Artemis I mission, a leak developed in the supply side of the 8-inch quick disconnect while attempting to transfer fuel to the rocket. Attempts to fix it so far have been unsuccessful. Stand by for updates. https://t.co/6LVDrA1toy
— NASA (@NASA) September 3, 2022
Advertisement
ಇಂಜಿನ್ ಬ್ಲೀಡ್ ಸಮಸ್ಯೆಯಿಂದಾಗಿ ಆರ್ಟೆಮಿಸ್-1ನ ಉಡಾವಣೆಯು ನಡೆಯುತ್ತಿಲ್ಲ. ಆಗಸ್ಟ್ 29 ರಂದೇ ರಾಕೆಟ್ ಉಡಾವಣೆಯಾಗಬೇಕಿತ್ತು. ಆದರೆ ಆರ್‌ಎಸ್-25 ಇಂಜಿನ್-3ರಲ್ಲಿ ಸಮಸ್ಯೆ ಕಾಣಿಸಿಕೊಂಡು, ಇಂಧನ ಸೋರಿಕೆಯಾಗಿದ್ದರಿಂದಾಗಿ ಸೆಪ್ಟಂಬರ್ 3ಕ್ಕೆ ಮುಂದೂಡಲಾಗಿತ್ತು. ಆದರೆ ರಾಕೆಟ್‌ಗೆ ಇಂಧನ ವರ್ಗಾಯಿಸುವ ಯಂತ್ರಾಂಶದಲ್ಲಿನ ಸೋರಿಕೆಗೆ ಸಂಬಂಧಿಸಿದ ಸಮಸ್ಯೆಯನ್ನು ಸರಿಪಡಿಸಲು ಇಂಜಿನಿಯರ್ ತಂಡವು ವಿಫಲವಾಗಿದ್ದರಿಂದಾಗಿ ಮತ್ತೆ ರಾಕೆಟ್ ಉಡಾವಣೆ ಮುಂದೂಡಲಾಗಿದೆ ಎಂದು ನಾಸಾ ಟ್ವೀಟ್ ಮೂಲಕ ತಿಳಿಸಿದೆ. ಅಲ್ಲದೇ ಮುಂದಿನ ಉಡಾವಣಾ ಸಮಯವನ್ನು ಶೀಘ್ರವೇ ತಿಳಿಸುವುದಾಗಿ ಹೇಳಿದೆ.
Advertisement
ನಾಸಾವು 2024ರಲ್ಲಿ 4 ಗಗನ ಯಾತ್ರಿಗಳನ್ನು ಚಂದ್ರನ ಸುತ್ತ ಕಳುಹಿಸಲು ಹಾಗೂ 2025ರ ಹೊತ್ತಿಗೆ ಚಂದ್ರಲೋಕದಲ್ಲಿ ಮಾನವರನ್ನು ಕಳುಹಿಸುವ ಉದ್ದೇಶ ಹೊಂದಿದೆ.
ಲಾಂಚ್ ಕಂಟ್ರೋಲರ್‌ಗಳು ಇಂಜಿನ್‌ಗಳಿಗೆ ಕೆಲವು ಕ್ರಯೋಜನಿಕ್ ಪ್ರೊಪೆಲ್ಲಂಟ್‌ಗಳನ್ನು ಸೋರಿಕೆ ಮಾಡಲು ಕೋರ್ ಸ್ಟೇಜ್ ಟ್ಯಾಂಕ್‌ಗಳ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ. ಆ ಮೂಲಕ ಅವುಗಳನ್ನು ಪ್ರಾರಂಭಿಸಲು ಸರಿಯಾದ ತಾಪಮಾನ ಶ್ರೇಣಿಗೆ ಪಡೆಯಲು ಇಂಜಿನ್‌ಗಳನ್ನು ಸ್ಥಿತಿಗೊಳಿಸುತ್ತವೆ. ಸದ್ಯ ಈ ಹಂತದಲ್ಲಿ ಸಮಸ್ಯೆಗಳು ಎದುರಾಗಿದ್ದು, ಪರಿಹರಿಸುವ ಕೆಲಸಗಳನ್ನು ಇಂಜಿನಿಯರ್‌ಗಳು ಮಾಡುತ್ತಿದ್ದಾರೆ ಎಂದು ನಾಸಾ ಹೇಳಿದೆ.