Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: 5 ದಶಕಗಳ ಬಳಿಕ ಚಂದ್ರಯಾನ ಕೈಗೊಂಡಿದ್ದ ಆರ್ಟೆಮಿಸ್-2 ತಂಡ ಶನಿವಾರ ಭೂಮಿಗೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | 5 ದಶಕಗಳ ಬಳಿಕ ಚಂದ್ರಯಾನ ಕೈಗೊಂಡಿದ್ದ ಆರ್ಟೆಮಿಸ್-2 ತಂಡ ಶನಿವಾರ ಭೂಮಿಗೆ

Latest

5 ದಶಕಗಳ ಬಳಿಕ ಚಂದ್ರಯಾನ ಕೈಗೊಂಡಿದ್ದ ಆರ್ಟೆಮಿಸ್-2 ತಂಡ ಶನಿವಾರ ಭೂಮಿಗೆ

Public TV
Last updated: April 10, 2026 10:07 pm
Public TV
Share
3 Min Read
Artemis 2 Crew
SHARE

– 2,760 ಡಿಗ್ರಿ ಸೆಲ್ಸಿಯಸ್ – ಅಗ್ನಿ ರೆಕ್ಕೆಯನೇರಿ ಬರುತ್ತಿರುವ ಆರ್ಟೆಮಿಸ್-2

ನವದೆಹಲಿ: ಚಂದ್ರನ ಸುತ್ತಲೂ ಐತಿಹಾಸಿಕ ಪ್ರಯಾಣ ಪೂರ್ಣಗೊಳಿಸಿದ ಬಳಿಕ, ಆರ್ಟೆಮಿಸ್-2 ಯೋಜನೆ ಈಗ ಭೂಮಿಯತ್ತ ಮರಳುತ್ತಿದೆ. ಅದರ ಅಂತಿಮ ಇಳಿಯುವಿಕೆಗಾಗಿ ಸಕಲ ಸಿದ್ಧತೆಗಳೂ ನಡೆಯುತ್ತಿವೆ.

ಹೌದು. 5 ದಶಕಗಳ ಬಳಿಕ ಚಂದ್ರಯಾನ ಕೈಗೊಂಡಿದ್ದ ಆರ್ಟೆಮಿಸ್-2 ತಂಡ ಶನಿವಾರ (ಏ.11) ಭೂಮಿಗೆ ವಾಪಸಾಗಲಿದೆ. ಆರ್ಟೆಮಿಸ್-2 ತಂಡ ಇರುವ ಓರಿಯಾನ್ ಕ್ಯಾಪ್ಸೂಲ್ ಭೂಮಿಯತ್ತ ಬರುತ್ತಿದೆ. ಭಾರತೀಯ ಕಾಲಮಾನದ ಪ್ರಕಾರ ಶನಿವಾರ ಬೆಳಗ್ಗಿನ ಜಾವ 5.37ರ ಸುಮಾರಿಗೆ ಸ್ಯಾನ್ ಡಿಯಾಗೋದ ಕರಾವಳಿ ತೀರದಲ್ಲಿ ಕ್ಯಾಪ್ಸೂಲ್ ಇಳಿಯಲಿದೆ ಎಂದು ನಾಸಾ ಹೇಳಿದೆ.

Artemis II astronauts have traveled 252,756 miles from Earth, flown around the Moon, and observed the lunar surface like never before. Now, they’re coming home. 🌎

Watch the crew splash down on Friday, April 10, around 8:07pm ET (0007 UTC April 11). https://t.co/Ccsk5Z3HFS pic.twitter.com/QoJW2oYVFG

— NASA (@NASA) April 10, 2026

ಆರ್ಟೆಮಿಸ್ 2 ಯೋಜನೆಯ ನಾಲ್ವರು ಗಗನಯಾತ್ರಿಗಳಾದ ರೀಡ್ ವೈಸ್‌ಮ್ಯಾನ್, ವಿಕ್ಟರ್ ಗ್ಲೋವರ್, ಕ್ರಿಸ್ಟಿನಾ ಕೋಚ್, ಮತ್ತು ಜೆರೆಮಿ ಹ್ಯಾನ್ಸೆನ್ ಅವರ ತಂಡ ತಮ್ಮ ಪ್ರಯಾಣವನ್ನು ಇಡಿಟಿ ಕಾಲಮಾನದಲ್ಲಿ ಬೆಳಗ್ಗಿನ 11:35ಕ್ಕೆ (ಭಾರತೀಯ ಕಾಲಮಾನದಲ್ಲಿ ರಾತ್ರಿ 9:05) ಆರಂಭಿಸಲಿದ್ದಾರೆ. ಬಳಿಕ, ಮಧ್ಯಾಹ್ನ 1:50 ಇಡಿಟಿ ಕಾಲಮಾನದಲ್ಲಿ, (ಭಾರತೀಯ ಕಾಲಮಾನ – ರಾತ್ರಿ 11:20) ಅವರು ತಮ್ಮ ಸಣ್ಣ ಕ್ಯಾಪ್ಸೂಲಿನ ಭೂ ವಾತಾವರಣ ಮರುಪ್ರವೇಶಕ್ಕೆ ಸಿದ್ಧತೆ ನಡೆಸಲಿದ್ದಾರೆ. ಇದಕ್ಕಾಗಿ ಎಲ್ಲ ವಸ್ತುಗಳನ್ನು ಜೋಡಿಸಿಕೊಂಡು, ಭೂಮಿಯ ವಾತಾವರಣದ ಮೂಲಕ ಮರಳಲು ಬೇಕಾಗುವ ಎಲ್ಲವೂ ಸಜ್ಜಾಗಿವೆ ಎಂದು ಖಾತ್ರಿಪಡಿಸಿಕೊಳ್ಳಲಿದ್ದಾರೆ.

Wake up—it’s Artemis II’s last day in space!

As the crew prepares to splash down in the Pacific Ocean this evening, they started their day with “Run To The Water” by Live, their wake-up song played by Mission Control. pic.twitter.com/AKGFIcB05m

— NASA (@NASA) April 10, 2026

ನಾಲ್ವರು ವಿಜ್ಞಾನಿಗಳಿಗೂ ರಕ್ತದೊತ್ತಡ, ರಕ್ತಪರಿಚಲನೆ ಕಾಪಾಡಿಕೊಳ್ಳಲು ಸಹಾಯ ಮಾಡುವ ಆರ್ಥೋಸ್ಟಾಟಿಕ್ ಉಡುಪಿನ ಪರೀಕ್ಷೆ ಸೇರಿ ಎಲ್ಲದರ ಪರೀಕ್ಷೆ ಸೇರಿದಂತೆ ಹಲವು ಹಂತಗಳಲ್ಲಿ ತಯಾರಿ ಆಗಿದೆ. ಇಲ್ಲಿಯತನಕ ಗಗನಯಾತ್ರಿಗಳು ವಾಸಿಸುತ್ತಾ, ಕೆಲಸ ಮಾಡುತ್ತಿದ್ದ ಸಣ್ಣದಾದ ಓರಿಯನ್ ಕ್ಯಾಪ್ಸೂಲ್ ಬಾಹ್ಯಾಕಾಶ ನೌಕೆ ಭೂಮಿಯ ವಾತಾವರಣವನ್ನು ಪ್ರವೇಶಿಸುವಾಗ, ಅದು ಪ್ರತಿ ಗಂಟೆಗೆ ಬಹುತೇಕ 38,500 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿರುತ್ತದೆ. ಈ ವೇಗದಲ್ಲಿ, ಗಾಳಿಯ ಜೊತೆಗಿನ ಘರ್ಷಣೆಯ ಪರಿಣಾಮವಾಗಿ ಬಾಹ್ಯಾಕಾಶ ನೌಕೆಯ ಸುತ್ತಲೂ 2,760 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಬೆಂಕಿಗೋಡೆಯೇ ನಿರ್ಮಾಣವಾಗಲಿದೆ. ಅದನ್ನ ಸೀಳಿ ಭೂಮಿಗೆ ವಾಪಸ್ ಆಗ್ತಿರೋದೇ ಅಮೇಜಿಂಗ್.

ಆರ್ಟಿಮೆಸ್‌-2 ಕಾರ್ಯಾಚರಣೆ ಹೇಗಿರಲಿದೆ?
ಭೂ ವಾತಾವರಣಕ್ಕೆ ಮರು ಪ್ರವೇಶಿಸುವ ಮುನ್ನ, ಅಂದ್ರೆ ಸಮುದ್ರದಲ್ಲಿ ಇಳಿಯುವುದಕ್ಕೆ ಅಂದಾಜು 42 ನಿಮಿಷ ಮುಂಚಿತವಾಗಿ ಕ್ಯಾಪ್ಸೂಲ್ ತನ್ನ ದೊಡ್ಡದಾದ ಸರ್ವಿಸ್ ಮಾಡ್ಯುಲ್‌ನಿಂದ ಬೇರ್ಪಡಲಿದೆ. ಬಳಿಕ, ಭಾರತದ ಕಾಲಮಾನ ಬೆಳಗ್ಗೆ 5:07 ಗಂಟೆ ಹೊತ್ತಿಗೆ ಆರಿಯನ್ ಕ್ಯಾಪ್ಸೂಲ್ ತನ್ನ ಇಂಜಿನ್‌ಗಳನ್ನು ಸಣ್ಣ ಸಮಯಕ್ಕೆ ಉರಿಸಿ, ತನ್ನ ಸ್ಥಾನ ಮತ್ತು ಪಥಗಳನ್ನು ಮರುಪ್ರವೇಶ ಮತ್ತು ಲ್ಯಾಂಡಿಂಗಿಗೆ ಸೂಕ್ತವಾಗಿಸಲಿದೆ.

Homeward bound 🌎

Today’s the day our Artemis II astronauts splash down on Earth after their journey around the Moon. Here are ways to watch, starting at 6:30pm ET (2230 UTC): https://t.co/fAg0bGAqEc pic.twitter.com/stTC8XKY7B

— NASA (@NASA) April 10, 2026

ಅದಾದ ನಂತರ, ಇಡಿಟಿ ಸಂಜೆ 7:53ಕ್ಕೆ ಓರಿಯನ್ ಬಾಹ್ಯಾಕಾಶ ನೌಕೆ ಅಂದಾಜು 4,00,000 ಅಡಿಗಳಷ್ಟು ಎತ್ತರದಲ್ಲಿ (ಅಂದಾಜು 122 ಕಿಲೋಮೀಟರ್) ಭೂಮಿಯ ವಾತಾವರಣವನ್ನು ಪ್ರವೇಶಿಸಿ, ತನ್ನ 13 ನಿಮಿಷಗಳ ಇಳಿಯುವಿಕೆಯನ್ನು ಆರಂಭಿಸಲಿದೆ. ಈ ಹಂತದಲ್ಲಿ, ಕ್ಯಾಪ್ಸೂಲ್ ಪ್ರತಿ ಗಂಟೆಗೆ 24,000 ಮೈಲಿ (ಅಂದರೆ, ಗಂಟೆಗೆ 38,000 ಕಿಲೋಮೀಟರ್) ವೇಗದಲ್ಲಿ ಸಾಗುತ್ತಿರುತ್ತದೆ.

ಇಳಿಯುವಿಕೆಯ ಮೊದಲ ಎರಡು ನಿಮಿಷಗಳಲ್ಲಿ, ಬಾಹ್ಯಾಕಾಶ ನೌಕೆ ಅಂದಾಜು 2,00,000 ಅಡಿಗಳಷ್ಟು (ಅಂದಾಜು 61 ಕಿಲೋಮೀಟರ್) ಕೆಳಗೆ ಬರಲಿದೆ. ಇದೇ ಸಂದರ್ಭದಲ್ಲಿ, ಬಾಹ್ಯಾಕಾಶ ನೌಕೆ 5,000 ಡಿಗ್ರಿ ಫ್ಯಾರನ್‌ಹೀಟ್ (2,760 ಡಿಗ್ರಿ ಸೆಲ್ಸಿಯಸ್) ಆಸುಪಾಸಿನ ಅತ್ಯಂತ ತೀವ್ರವಾದ ತಾಪಮಾನವನ್ನು ಎದುರಿಸಲಿದೆ. ಬಾಹ್ಯಾಕಾಶ ನೌಕೆಯ ಅತಿಯಾದ ವೇಗದ ಕಾರಣದಿಂದ, ಅದರ ಮುಂದಿರುವ ಗಾಳಿ ಸಂಕೋಚನಗೊಳ್ಳುವುದರಿಂದ ಇಷ್ಟೊಂದು ತಾಪಮಾನ ಉಂಟಾಗುತ್ತದೆ ಎಂದು ನಾಸಾ ವಿವರಿಸಿದೆ.

TAGGED:Artemis-2Artemis-2 CrewAstronautearthNASAಅಮೆರಿಕಆರ್ಟಿಮೆಸ್‌ 2ಚಂದ್ರಯಾನನಾಸಾಬಾಹ್ಯಾಕಾಶ ನೌಕೆ
Share This Article
Facebook Whatsapp Whatsapp Telegram

Cinema news

high court ranveer singh
ದೈವಕ್ಕೆ ಅಪಮಾನ ಆರೋಪ – ಮತ್ತೊಮ್ಮೆ ಅಫಿಡವಿಟ್ ಸಲ್ಲಿಸಲು ರಣವೀರ್ ಸಿಂಗ್‌ಗೆ ಹೈಕೋರ್ಟ್ ಸೂಚನೆ
Cinema Court Latest Top Stories
Thalapathy Vijay
Kill Piracy | ʻಜನನಾಯಗನ್ʼ ರಿಲೀಸ್‌ಗೂ ಮುನ್ನವೇ HD ವಿಡಿಯೋ ಲೀಕ್‌ – ಹಿಂದಿದ್ಯಾ ದೊಡ್ಡ ಸಂಚು?
Cinema Latest Main Post South cinema
Monalisa
ಕುಂಭಮೇಳದ ಮೊನಾಲಿಸಾ ಮದುವೆಗೆ ಟ್ವಿಸ್ಟ್‌ – ಪತಿ ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ ಕೇಸ್
Cinema Latest Main Post National
rashmika mandanna
ಮದುವೆಯಂದು ರಶ್ಮಿಕಾ ಮಿನಿಮಲ್ ಮೇಕಪ್ ಹಾಕಿದ್ದು ಯಾಕೆ – ಗುಟ್ಟು ಬಿಚ್ಚಿಟ್ಟ ಮೇಕಪ್ ಆರ್ಟಿಸ್ಟ್‌
Cinema Latest Sandalwood South cinema

You Might Also Like

andhra girl death
Latest

ಜಲಪಾತದ ಬಳಿ ರೀಲ್ಸ್ ಮಾಡಲು ಹೋಗಿ ಮೂವರು ಸಾವು – ಕ್ಯಾಮೆರಾ ಮುಂದೆಯೇ ಪ್ರಾಣಬಿಟ್ಟ ಯುವತಿಯರು

Public TV
By Public TV
2 minutes ago
kea
Bengaluru City

CET-2026ರ ಪ್ರವೇಶ ಪತ್ರ ಬಿಡುಗಡೆ: ಕೆಇಎ

Public TV
By Public TV
40 minutes ago
OMR EXAM
Bengaluru City

ಪರೀಕ್ಷೆ ಮುಗಿದ ಒಂದು ಗಂಟೆಯಲ್ಲೇ OMR ಶೀಟ್ ವೆಬ್‌ಸೈಟ್‌ಗೆ ಅಪ್‌ಲೋಡ್: ಕೆಇಎ

Public TV
By Public TV
42 minutes ago
Ramesh Kumar
Districts

63 ಎಕ್ರೆ ಅರಣ್ಯ ಭೂಮಿ ಒತ್ತುವರಿ ಪ್ರಕರಣ – ಮಾಜಿ ಸ್ಪೀಕರ್ ರಮೇಶ್ ಕುಮಾರ್‌ಗೆ ಹಿನ್ನಡೆ

Public TV
By Public TV
59 minutes ago
CRIME
Districts

ಸರ್ಕಾರಿ ಕಚೇರಿಯಲ್ಲಿ ದಲಿತ ಮಹಿಳೆಯ ವಿವಸ್ತ್ರಗೊಳಿಸಿ ವಿಕೃತಿ – 8 ಗಂಟೆ ನಿಲ್ಲಿಸಿದ್ದ ಅಧಿಕಾರಿಗಳ ವಿರುದ್ಧ ದೂರು

Public TV
By Public TV
1 hour ago
ಸಾಂದರ್ಭಿಕ ಚಿತ್ರ
Bagalkot

ಇನ್ಮುಂದೆ ಬುಕ್‌ ಮಾಡಿದ ದಿನವೇ ಗೃಹ ಬಳಕೆ ಸಿಲಿಂಡರ್ ವಿತರಣೆ – ಗ್ಯಾಸ್ ಏಜೆನ್ಸಿಗಳಿಗೆ ಸೂಚನೆ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?