ಬೆಂಗಳೂರು: ಮಹಮ್ಮದ್ ಘಜ್ನಿಯಿಂದ (Mohammad Ghazni) ಧ್ವಂಸಗೊಂಡ ಜ್ಯೋತಿರ್ಲಿಂಗ (Jyotirlinga) ಮರುಸ್ಥಾಪನೆ ಆಗಲಿದೆ. 1000 ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಅಪರೂಪದ ಶಿಲೆಯ ಶಿವಲಿಂಗದ (Shivalinga) ಮರು ದರ್ಶನ ಆಗಿದೆ.
ಘಜ್ನಿಯಿಂದ ಧ್ವಂಸವಾಗಿದ್ದ ಸೋಮನಾಥ ಶಿವಲಿಂಗದ (Somnath Jyotirlinga) ಒಂದು ಭಾಗ ಈಗ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್‌ನಲ್ಲಿದೆ. ನೆಲಕ್ಕೆ ಸ್ಫರ್ಶಿಸದೇ ಗಾಳಿಯಲ್ಲಿ ತೇಲುವ ರೀತಿಯಲ್ಲಿದ್ದ ಅದ್ಭುತ ಮೊದಲ ಜ್ಯೋತಿರ್ಲಿಂಗ ದಾಳಿಯಲ್ಲಿ ಧ್ವಂಸ ಆಗಿತ್ತು. ಆದರೆ ದಾಳಿಯಲ್ಲಿ ಚೂರಾಗಿದ್ದ ಶಿವಲಿಂಗವನ್ನು ಅಗ್ನಿಹೋತ್ರಿ ಬ್ರಾಹ್ಮಣರು ರಕ್ಷಿಸಿದ್ರು. ಸದ್ಯ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್‌ನ (Art of Living) ಶ್ರೀ ಶ್ರೀ ರವಿಶಂಕರ ಗುರೂಜಿಯ (Sri Sri Ravi Shankar) ಬಳಿ ಈ ಶಿವಲಿಂಗ ಇದೆ. ಇದನ್ನೂ ಓದಿ: ಘಜ್ನಿಯಿಂದ ಧ್ವಂಸ – ಈಗ ಮತ್ತೆ ಸೋಮನಾಥದಲ್ಲಿ ಪುನರ್ ಪ್ರತಿಷ್ಠೆಯಾಗಲಿದೆ ಜ್ಯೋತಿರ್ಲಿಂಗ!
Advertisement
ಈಗ ಕಂಚಿ ಶಂಕರಾಚಾರ್ಯರ ಆಜ್ಞೆಯಂತೆ ಸೋಮನಾಥ ಜ್ಯೋತಿರ್ಲಿಂಗದ ಪುನರ್ ಪ್ರತಿಷ್ಟಾಪನೆಗೆ ರವಿಶಂಕರ್ ಗುರೂಜಿ ಸಂಕಲ್ಪ ತೊಟ್ಟಿದ್ದಾರೆ. ಮೈಸೂರು ಸೇರಿ ರಾಜ್ಯದೆಲ್ಲೆಡೆ ಈ ಮೂಲ ಶಿವಲಿಂಗದ ತುಣುಕುಗಳನ್ನು ಪ್ರದರ್ಶನಕ್ಕೆ ಇಡುತ್ತೇವೆ. ಸಾರ್ವಜನಿಕರಿಗೆ ದರ್ಶನ ಭಾಗ್ಯ ಕಲ್ಪಿಸುತ್ತೇವೆ. ರಾಮನಾಥದಿಂದ ಸೋಮನಾಥದವರೆಗೆ ಶಿವಲಿಂಗ ಕೊಂಡೊಯ್ಯಲು ತಯಾರಿ ನಡೆಸಿದ್ದೇವೆ ಎಂದು ಶ್ರೀ ಶ್ರೀ ರವಿಶಂಕರ್ ತಿಳಿಸಿದ್ದಾರೆ.