ಮಡಿಕೇರಿ: ಆರ್ಟ್ ಗ್ಯಾಲರಿಗೆ ವಿದ್ಯುತ್ ನೀಡದೆ ನಗರಸಭೆಯ ಅಧಿಕಾರಿಗಳು ವಂಚಿಸುತ್ತಿದ್ದಾರೆ ಎಂದು ಆರೋಪಿಸಿ ಮಡಿಕೇರಿ ನಗರದ ಚಿತ್ರ ಕಲಾವಿದ ಸಂದೀಪ್ ಉರುಳು ಸೇವೆ ಮಾಡುವ ಮೂಲಕ ಪ್ರತಿಭಟನೆಗೆ ಮುಂದಾಗಿದ್ದಾರೆ.
Advertisement
ಚಿತ್ರ ಕಲಾವಿದರನ್ನು ಪ್ರೋತ್ಸಾಹಿಸಲು ಸರ್ಕಾರದಿಂದ ನಗರದಲ್ಲಿ ಆರ್ಟ್ ಗ್ಯಾಲರಿ ಸ್ಥಾಪಿಸಬೇಕೆಂದು ಸಂದೀಪ್ ಕಳೆದ ಕೆಲವು ವರ್ಷಗಳಿಂದ ಒತ್ತಾಯಿಸುತ್ತಲೇ ಬಂದಿದ್ದಾರೆ. ಆದರೆ ಸೂಕ್ತ ಸ್ಪಂದನೆ ಸಿಗದ ಕಾರಣ ತಾವೇ ಆಸಕ್ತಿ ವಹಿಸಿ ತಮ್ಮ ಮನೆಯ ಸಣ್ಣದೊಂದು ಕೋಣೆಯಲ್ಲಿ ಆರ್ಟ್ ಗ್ಯಾಲರಿಯನ್ನು ಆರಂಭಿಸಿದರು. ಆದರೆ ಈ ಆರ್ಟ್ ಗ್ಯಾಲರಿಗೆ ವಿದ್ಯುತ್ ಸಂಪರ್ಕ ನೀಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಹಾಗಾಗಿ ಇಂದು ಜನರಲ್ ತಿಮ್ಮಯ್ಯ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಉರುಳು ಸೇವೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದರು. ಇದನ್ನೂ ಓದಿ: ರಾಜ್ಯ ಸರ್ಕಾರದ ಒತ್ತಡದಿಂದ ಬಂದಿರುವ ತೀರ್ಪು: ಉಡುಪಿ ವಿದ್ಯಾರ್ಥಿನಿಯರು
Advertisement
Advertisement
ಇಂದು ಜನರಲ್ ತಿಮ್ಮಯ್ಯ ವೃತ್ತದಿಂದ ಉರುಳು ಸೇವೆ ಆರಂಭಿಸುತ್ತಿದ್ದಂತೆ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಮತ್ತು ಸಾರ್ವಜನಿಕರ ಹಿತಾಸಕ್ತಿಯಿಂದ ಮಡಿಕೇರಿ ಪೊಲೀಸರು ಸಂದೀಪ್‍ರನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಹೈಕೋರ್ಟ್ ತೀರ್ಪನ್ನು ಪ್ರಶ್ನಿಸದಿದ್ದರೆ ಎಲ್ಲಾ ಧರ್ಮಗಳ ಆಚರಣೆಗೂ ಕುತ್ತು: ಅಮಿನ್ ಮೊಹಿನ್ಸಿನ್
Advertisement