ಭಾನುವಾರ ಶೂಟಿಂಗ್ ಗಾಗಿ ವಿದೇಶಕ್ಕೆ ತೆರಳಿದ್ದ ಖ್ಯಾತ ಕಲಾ ನಿರ್ದೇಶಕ ಮಿಲನ್ ಫರ್ನಾಂಡಿಸ್ (Milan Fernandes) ನಿಧನರಾಗಿದ್ದಾರೆ. ತಮಿಳು ಸಿನಿಮಾ ರಂಗದಲ್ಲಿ ಸಾಕಷ್ಟು ಕೆಲಸ ಮಾಡಿರುವ ಇವರು, ಅಜಿತ್ ಕುಮಾರ್ (Ajith Kumar) ನಟನೆಯ ಹೊಸ ಸಿನಿಮಾಗಾಗಿ ಸದ್ಯ ಕೆಲಸ ಮಾಡುತ್ತಿದ್ದರು. ಈ ಸಿನಿಮಾವನ್ನು ಲೈಕಾ ಪ್ರೊಡಕ್ಷನ್ ಹೌಸ್ ನಿರ್ಮಾಣ ಮಾಡುತ್ತಿದ್ದು, ಭಾನುವಾರ ಬೆಳಗ್ಗೆ ಅವರಿಗೆ ಹೃದಯಾಘಾತವಾಗಿದೆ (Heart Attack) ಎಂದು ತಿಳಿಸಿದೆ.
ಶೂಟಿಂಗ್ ಮುಗಿಸಿಕೊಂಡು ಹೋಟೆಲ್ ಗೆ ಬಂದು ಮಲಗಿದ್ದಾರೆ ಮಿಲನ್, ಬೆಳಗ್ಗೆ ಅವರ ದೇಹ ಕೋಲ್ಡ್ ಆಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ದಾರಿ ಮಧ್ಯೆಯೇ ಅವರು ನಿಧನರಾಗಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಸದ್ಯ ಅಜರ್ಬೈಜಾನ್ ನಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ.
ಈ ವಿಷಯವನ್ನು ಲೈಕಾ ಸಂಸ್ಥೆಯು ಖಚಿತ ಪಡಿಸಿ, ಸಂತಾಪಗಳನ್ನೂ ಹೇಳಿದೆ. ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಅಣ್ಣಾತೆ, ವೇದಾಳಂ ಸೇರಿದಂತೆ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳಿಗೆ ಕಲಾ ನಿರ್ದೇಶನ ಮಾಡಿದ ಹೆಗ್ಗಳಿಕೆ ಇವರದ್ದು.
Web Stories