ಬೆಂಗಳೂರು: ಬಂಧಿತ ಶಂಕಿತ ಉಗ್ರರ (Suspected Terrorist Arrest in Bengaluru) ಪಾತಕಿ ಕೃತ್ಯಗಳ ಪ್ಲಾನ್‍ಗಳು ಬಗೆದಷ್ಟೂ ಬಯಲಾಗ್ತಿದೆ. ಶಂಕಿತ ಉಗ್ರರ ಟಾರ್ಗೆಟ್ ಬೆಂಗಳೂರು ಮಾತ್ರ ಅಲ್ಲ, ಇಡೀ ಕರ್ನಾಟಕದಲ್ಲೇ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ವಿಚಾರವೊಂದು ಬೆಳಕಿಗೆ ಬಂದಿದೆ. ಕೋಮುಗಲಭೆ ಸೃಷ್ಟಿಸಿ ನರಮೇಧಕ್ಕೆ ಷಡ್ಯಂತ್ರ ರೂಪಿಸಿರುವುದು ಎಂಬಂತಹ ಒಂದೊಂದೇ ಸ್ಫೋಟಕ ಸತ್ಯಗಳು ಕೇಂದ್ರ ಅಪರಾಧ ವಿಭಾಗದ ಪೊಲೀಸರು (CCB Police) ತನಿಖೆ ನಡೆಸಿದ ವೇಳೆ ಹೊರ ಬರುತ್ತಿರುವುದಾಗಿ ಮಾಹಿತಿ ಲಭಿಸಿದೆ.
Advertisement
ಕೋಮುಗಲಭೆ ಸೃಷ್ಟಿಸಿ ರಕ್ತಪಾತಕ್ಕೆ ಸ್ಕೆಚ್: ಶಂಕಿತ ಉಗ್ರರು ರಾಜ್ಯಾದ್ಯಂತ ರಕ್ತಪಾತ, ನರಮೇಧ, ಪೈಶಾಚಿಕ ಕೃತ್ಯಕ್ಕೆ ಪಿತೂರಿ ಹೂಡಿದ್ದರು. ಕರಾವಳಿ, ಮಧ್ಯ ಕರ್ನಾಟಕದ ಮೇಲೂ ಶಂಕಿತ ಉಗ್ರರ ವಕ್ರದೃಷ್ಟಿ ಬಿದ್ದಿದೆ. ಕೋಮುಗಲಭೆ ನಡೆಯೋ ಸ್ಥಳಗಳನ್ನೇ ಶಂಕಿತರು ಹೆಚ್ಚು ಟಾರ್ಗೆಟ್ ಮಾಡಿದ್ದರು. ಬೆಂಗಳೂರು, ಮಂಗಳೂರು, ಶಿವಮೊಗ್ಗ, ಉಡುಪಿ, ಕಲಬುರಗಿ ಹಾಗೂ ಹುಬ್ಬಳಿಯಂತಹ ಕಡೆ ಟಾರ್ಗೆಟ್ ಮಾಡಿದ್ದರು. ಇದಕ್ಕಾಗಿ ಈ ಹಿಂದೆ ಎಲ್ಲೆಲ್ಲಿ ಕೋಮುಗಲಭೆ ನಡೆದಿದೆ ಅನ್ನೋ ಮಾಹಿತಿ ಸಂಗ್ರಹಿಸುತ್ತಿದ್ದರು. ಅಂತಹ ಜಾಗಗಳಲ್ಲಿ ಮತ್ತೆ ಗಲಭೆ ರೀತಿ ಸೀನ್ ರೀಕ್ರಿಯೇಟ್‍ಗೆ ಸಂಚು ರೂಪಿಸಿದ್ದರು. ಈ ಮೂಲಕ ಗಲಭೆ ಮಾಡಿ ಪ್ಲಾನ್ ಎಕ್ಸಿಕ್ಯೂಟ್ ಮಾಡಲು ಚಿಂತನೆ ನಡೆಸಿದ್ದರು. ಈ ರೀತಿ ಮಾಡಿದ್ರೆ ಡೌಟ್ ಬರಲ್ಲ, ದೇಶ ದ್ರೋಹ ಕೇಸ್ ಹಾಕಲ್ಲ ಅನ್ನೋ ಪ್ಲಾನ್ ಶಂಕಿತ ಉಗ್ರರದ್ದಾಗಿತ್ತು ಎಂಬ ಎಕ್ಸ್ ಕ್ಲೂಸೀವ್ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಉನ್ನತ ಮೂಲಗಳಿಂದ ಲಭಿಸಿದೆ.
Advertisement
Advertisement
ಇನ್ನೂ ದೊಡ್ಡದಿದೆ ಉಗ್ರಜಾಲ: ಬೆಂಗಳೂರಲ್ಲಿ ಶಂಕಿತ ಉಗ್ರರ ಬಂಧನದ ಬೆನ್ನಲ್ಲೇ ಸ್ಫೋಟಕ ಅಂಶಗಳು ಒಂದೊಂದಾಗಿಯೇ ಬಯಲಾಗುತ್ತಿದ್ದು, ಉಗ್ರಜಾಲ ಇನ್ನೂ ದೊಡ್ಡದಿರುವ ಅನುಮಾನ ಎದ್ದಿದೆ. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ದಾವಣಗೆರೆ, ಚಿಕ್ಕಮಗಳೂರು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲೂ ಶೋಧಕಾರ್ಯ ನಡೆಸುತ್ತಿದ್ದಾರೆ. ಬೇರೆ ಬೇರೆ ಜಿಲ್ಲೆಯಲ್ಲಿ ಬಂಧಿತ ಶಂಕಿತರ ಸಂಪರ್ಕದಲ್ಲಿರುವ ವ್ಯಕ್ತಿಗಳ ವಿಚಾರಣೆ ನಡೆಸುತ್ತಿದ್ದು, ಈವರೆಗೆ ಸುಮಾರು 50ಕ್ಕೂ ಹೆಚ್ಚು ಜನರನ್ನು ತನಿಖೆಗೆ ಒಳಪಡಿಸಲಾಗಿದೆ.
Advertisement
ಬಂಧಿತರಿಂದ 12 ಮೊಬೈಲ್ ವಶ: ಬಂಧಿತ ಶಂಕಿತರಿಂದ ಸಿಸಿಬಿ ಪೊಲೀಸರು 12 ಮೊಬೈಲ್‍ಗಳನ್ನ ವಶಪಡೆದಿದ್ದಾರೆ. ಮೊಬೈಲ್‍ನಲ್ಲಿ ಯಾರೆಲ್ಲಾ ಸತತ ಕಾಂಟ್ಯಾಕ್ಟ್ ಇದ್ದರು ಅವರ ವಿಚಾರಣೆ ನಡೆಸಲಾಗುತ್ತಿದೆ. ಇನ್ಸ್ ಸ್ಟಾಗ್ರಾಂ, ವಾಟ್ಸಾಪ್ ಮೂಲಕ ಕೂಡ ಶಂಕಿತರು ಹೆಚ್ಚು ಸಂಭಾಷಣೆ ನಡೆಸಿದ್ದು, ಕೆಲವು ಕೋಡ್ ವರ್ಡ್‍ಗಳು ಬಳಸಿ ಮಾತನಾಡಿರೋ ಮಾಹಿತಿ ಸಿಕ್ಕಿದೆ. ಈ ಬಗ್ಗೆಯೂ ಸಿಸಿಬಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
Web Stories