ನವದೆಹಲಿ: ಪಶ್ಚಿಮ ಬಂಗಾಳದ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಬಂಧನದ ನಂತರ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಮೂರು ಬಾರಿ ಕರೆಗಳನ್ನು ಮಾಡಿದ್ದರು. ಆದರೆ ಮೂರೂ ಬಾರಿಯೂ ಅವರು ಉತ್ತರಿಸಲಿಲ್ಲ ಎಂದು ಅಧಿಕೃತ ದಾಖಲೆ ಬಹಿರಂಗಪಡಿಸಿದೆ.
Advertisement
ಪಾರ್ಥ ಚಟರ್ಜಿ ಅವರನ್ನು ಮಧ್ಯರಾತ್ರಿ 1:55 ರ ಸುಮಾರಿಗೆ ಬಂಧಿಸಿದ ನಂತರ ಬ್ಯಾನರ್ಜಿ ಅವರಿಗೆ ಮೊದಲ ಕರೆಯನ್ನು 2:33ಕ್ಕೆ ಮಾಡಲಾಯಿತು. ಆದರೆ ಬ್ಯಾನರ್ಜಿ ಅವರು ಕರೆಯನ್ನು ಸ್ವೀಕರಿಸಲಿಲ್ಲ. ಮತ್ತೆ ಚಟರ್ಜಿ ಅವರು ಬೆಳಗ್ಗೆ 3:37 ಮತ್ತು 9:.35ಕ್ಕೆ ಮತ್ತೆ ಕರೆ ಮಾಡಿದ್ದಾರೆ. ಆಗಲೂ ಅವರು ಕರೆಯನ್ನು ಸ್ವೀಕರಿಸಲಿಲ್ಲ ಎಂದು ಮೆಮೊ ದಾಖಲಿಸಿದೆ. ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಸುಸಜ್ಜಿತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ: ಸಿಎಂ ಜೊತೆ ಚರ್ಚಿಸುವೆ ಎಂದ ಸುಧಾಕರ್
Advertisement
ಯಾವುದೇ ಆರೋಪಿ ತಮ್ಮ ಬಂಧನದ ಬಗ್ಗೆ ತಿಳಿಸಲು ಸಂಬಂಧಿಕರು ಅಥವಾ ಸ್ನೇಹಿತರಿಗೆ ಕರೆ ಮಾಡಲು ಅವಕಾಶವಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
Advertisement
ತೃಣಮೂಲ ಕಾಂಗ್ರೆಸ್ ಪಕ್ಷದ ಫಿರ್ಹಾದ್ ಹಕೀಮ್ ಅವರು ಈ ಕುರಿತು ಮಾತನಾಡಿದ್ದು, ಚಟರ್ಜಿ ಅವರು ಕರೆ ಮಾಡಿಲ್ಲ. ಬಂಧಿತ ಸಚಿವರ ಫೋನ್ ಜಾರಿ ನಿರ್ದೇಶನಾಲಯದಲ್ಲಿ ಇರುವುದರಿಂದ ಅವರು ಮಮತಾ ಬ್ಯಾನರ್ಜಿ ಅವರಿಗೆ ಕರೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಹಿಳಾ ಸಬಲೀಕರಣ ನನ್ನ ಮೊದಲ ಆದ್ಯತೆ – ಅಧಿಕಾರ ಸ್ವೀಕರಿಸಿದ ದ್ರೌಪದಿ ಮುರ್ಮು
ಬಂಗಾಳದ ಶಿಕ್ಷಣ ಸಚಿವರಾಗಿದ್ದ ಚಟರ್ಜಿ ಅವರನ್ನು ಶನಿವಾರ ಶಾಲಾ ಉದ್ಯೋಗ ಹಗರಣಕ್ಕೆ ಸಂಬಂಧಿಸಿದ ಹಣ-ಲಾಂಡರಿಂಗ್ ಆರೋಪದ ಮೇಲೆ ಬಂಧಿಸಲಾಯಿತು. ಸರ್ಕಾರಿ ಪ್ರಾಯೋಜಿತ ಮತ್ತು ಅನುದಾನಿತ ಶಾಲೆಗಳಲ್ಲಿ ಪಶ್ಚಿಮ ಬಂಗಾಳದ ಪ್ರೌಢ ಶಿಕ್ಷಣ ಮಂಡಳಿಯಿಂದ ಶಾಲಾ ಶಿಕ್ಷಕರು ಮತ್ತು ಬೋಧಕ ಸಿಬ್ಬಂದಿಗಳ ನೇಮಕಾತಿಯಲ್ಲಿ ಚಟರ್ಜಿ ಅವರು ಹಗರಣ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.