– ಸಂತಾನಹರಣ ಚಿಕಿತ್ಸೆ ಪಡೆದವರಿಂದ ರೇಪ್ ಮಾಡಲು ಸಾಧ್ಯವಿಲ್ಲ – ಆರೋಪಿ ಪರ ವಕೀಲರ ವಾದ
ನವದೆಹಲಿ: ಅಪ್ರಾಪ್ತ ಬಾಲಕಿ ಮೇಲೆ ತಿಂಗಳುಗಟ್ಟಲೇ ಅತ್ಯಾಚಾರ ಎಸಗಿ ಆಕೆಯನ್ನ ಗರ್ಭಧರಿಸುವಂತೆ ಮಾಡಿದ ಆರೋಪದ ಮೇಲೆ ಅಮಾನತುಗೊಂಡಿರುವ ದೆಹಲಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರೇಮೋದಯ್ ಖಾಖಾ (Premoday Khakha) ನನ್ನ ಮಂಗಳವಾರ (ಇಂದು) ಪುರುಷತ್ವ ಸಾಮರ್ಥ್ಯ ಪರೀಕ್ಷೆಗೆ ಒಳಪಡಿಸಲಾಗಿದೆ.
ಆರೋಪಿಯು (Accused) ಲೈಂಗಿಕ ಕ್ರಿಯೆಗಳಲ್ಲಿ ತೊಡಗಿಸಿಕೊಳ್ಳಲು ಸಮರ್ಥನಾಗಿದ್ದಾನೆಯೇ? ಇಲ್ಲವೇ? ಎಂಬುದನ್ನ ತಿಳಿಯಲು ಪ್ರಮಾಣೀಕೃತ ಮೂತ್ರಶಾಸ್ತ್ರಜ್ಞರಿಂದ ಲೈಂಗಿಕ ದೌರ್ಜನ್ಯ ಅಥವಾ ಅತ್ಯಾಚಾರದ ಅಪರಾಧ ಪ್ರಕರಣದಲ್ಲಿ ಸಾಮರ್ಥ್ಯ ಪರೀಕ್ಷೆಯನ್ನು ನಡೆಸಲು ಪೊಲೀಸರು ಮುಂದಾಗಿದ್ದಾರೆ. ಇದನ್ನೂ ಓದಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಯಿಂದ್ಲೇ 14ರ ಬಾಲಕಿ ಮೇಲೆ ರೇಪ್ – ಪತಿ, ಪತ್ನಿ ಅರೆಸ್ಟ್
ಆರೋಪಿಗಳಾದ ಪ್ರಮೋದ್ ಖಾಖಾ ಮತ್ತು ಅವನ ಪತ್ನಿ ಸೀಮಾ ರಾಣಿ ಇಬ್ಬರನ್ನೂ ದೆಹಲಿ ನ್ಯಾಯಾಲಯಕ್ಕೆ (Delhi court) ಹಾಜರುಪಡಿಸಲಾಗಿತ್ತು. ವಾದ-ಪ್ರತಿವಾದಗಳನ್ನು ಆಲಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಆರೋಪಿಗಳ ಪರ ವಕೀಲರು ಖಾಖಾ ವಿರುದ್ಧ ಹೊರಿಸಿರುವ ಆರೋಪಗಳು ನಿರಾಧಾರ ಎಂದು ಹೇಳಿದ್ದಾರೆ. ಅಲ್ಲದೇ ಪ್ರಮೋದ್ ಕಳೆದ 20 ವರ್ಷಗಳ ಹಿಂದೆಯೇ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಅವರಿಂದ ಅತ್ಯಾಚಾರ ಮಾಡಲು ಹೇಗೆ ಸಾಧ್ಯ? ಆದ್ದರಿಂದ ಅಪ್ರಾಪ್ತ ಬಾಲಕಿ ಗರ್ಭಿಣಿಯಾಗುವ ಸಾಧ್ಯತೆಗಳಿಲ್ಲ ಎಂದು ವಾದಿಸಿದ್ದರು.
ಈ ಮಧ್ಯೆ ಆರೋಪಿ ಚರ್ಚ್ನಲ್ಲಿಯೂ ತನಗೆ ಕಿರುಕುಳ ನೀಡುತ್ತಿದ್ದ ಬಗ್ಗೆ ಪೊಲೀಸರಿಗೆ ದೂರು ಬಂದಿತ್ತು. ಆರೋಪಿ ಅಧಿಕಾರಿ ಚರ್ಚ್ನಲ್ಲಿಯೂ ಉಪಕಾರ್ಯದರ್ಶಿ ಹುದ್ದೆ ಹೊಂದಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಕಾಫಿ ಶಾಪ್‌ನಲ್ಲಿ ಶುರುವಾದ ಪ್ರೀತಿ – ಭಾರತದ ಪ್ರೇಮಿಗಾಗಿ ದಕ್ಷಿಣ ಕೊರಿಯಾದಿಂದ ಹಾರಿ ಬಂದ ಮಹಿಳೆ!
ಏನಿದು ಪ್ರಕರಣ?
ಅಮಾನತಿನಲ್ಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಪ್ರೇಮೋದಯ್ ಖಾಖಾ ಎಂಬಾತ ತನ್ನ ಸ್ನೇಹಿತನ ಅಪ್ರಾಪ್ತ ಮಗಳ ಮೇಲೆ (ಆಗ 14 ವರ್ಷ, ಈಗ 17 ವರ್ಷ) ತಿಂಗಳುಗಟ್ಟಲೇ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪದ ಮೇಲೆ ಬಂಧಿಸಲಾಗಿದೆ. ಅಲ್ಲದೇ ಅಧಿಕಾರಿಯ ಪತ್ನಿ ಸೀಮಾ ರಾಣಿ ಬಾಲಕಿಗೆ ಗರ್ಭಪಾತದ ಮಾತ್ರೆಗಳನ್ನು ನೀಡಿದ ಆರೋಪದ ಮೇಲೆ ಅರೆಸ್ಟ್ ಆಗಿದ್ದಾಳೆ. ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಆದೇಶದ ಮೇರೆಗೆ ಸೋಮವಾರ ಅಧಿಕಾರಿಯನ್ನ ಹುದ್ದೆಯಿಂದ ಅಮಾನತುಗೊಳಿಸಲಾಗಿತ್ತು.
ಆರೋಪಿ ವಿರುದ್ಧ ಪೋಕ್ಸೋ ಹಾಗೂ ಭಾರತೀಯ ದಂಡ ಸಂಹಿತೆ ಸೆಕ್ಷನ್ 376(2)(F), ಸೆಕ್ಷನ್ 509, 506, 323, 313, 120 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ತನಿಖೆ ಮುಂದುವರಿದಿದೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]