– ಕೇಸ್‍ಗಳಿಗೆ ಸ್ವಾಗತ, ಕಾಂಗ್ರೆಸ್‍ಗೆ ಧನ್ಯವಾದ ಅಂದ್ರು ಅನಂತ್ ಕುಮಾರ್ ಹೆಗ್ಡೆ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಕೇಂದ್ರ ಕೌಶಲ್ಯಾಭಿರುದ್ಧಿ ಸಚಿವ ಅನಂತಕುಮಾರ್ ಹೆಗ್ಡೆ ಅವರ ವಿರುದ್ಧ ಮಂಕಿ ಠಾಣೆ ಪೊಲೀಸರು ಅರೆಸ್ಟ್ ವಾರೆಂಟ್ ಜಾರಿ ಮಾಡಿದ್ದಾರೆ.
ಈ ವಿಚಾರವಾಗಿ ಶಿರಸಿ ತಾಲೂಕಿನ ಮಾರುಕಟ್ಟೆ ಪೊಲೀಸ್ ಠಾಣೆಗೆ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಹಾಜರಾಗಿದ್ದರು. ಈ ವೇಳೆ ಕಾರವಾರದ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದು ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಗೆ ಹಾಜರುಪಡಿಸಿದರು. 2018ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಚೋದನಾಕಾರಿ ಭಾಷಣ ಹಿನ್ನಲೆಯಲ್ಲಿ ಅನಂತ್ ಕುಮಾರ್ ಹೆಗ್ಡೆ ವಿರುದ್ದ ಅಂದಿನ ಚುನಾವಣಾಧಿಕಾರಿಯಾಗಿದ್ದ ಭಟ್ಕಳದ ಉಪವಿಭಾಗಾಧಿಕಾರಿ ದೂರನ್ನ ದಾಖಲಿಸಿದ್ದರು.
Advertisement
Advertisement
ಈ ಪ್ರಕರಣ ಕುರಿತು ಮಾತನಾಡಿದ ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ, ಭಾಷಣವನ್ನು ಮುಂದಿಟ್ಟು ನನ್ನ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ, ಎಂದೋ ಮಾಡಿದ ಭಾಷಣಕ್ಕೆ ಇನ್ಯಾವಾಗಲೋ ಕೇಸ್ ಹಾಕುವ ಸರ್ಕಾರ ಪೂರ್ವಾಗ್ರಹ ಪೀಡಿತವಾದದ್ದು. ಇಂದಿನ ಸರ್ಕಾರ ಮತ್ತೊಮ್ಮೆ ನನ್ನ ಗುರಿ ಮಾಡಿ ಷಡ್ಯಂತ್ರ ರೂಪಿಸುತ್ತಿದೆ. ನಮ್ಮ ಚುನಾವಣೆಯನ್ನೂ ಬಹುಶಃ ಕಾಂಗ್ರೆಸ್ ಸರ್ಕಾರವೇ ಮಾಡಿ ಮುಗಿಸುವ ಸ್ಥಿತಿಯನ್ನು ಅವರೇ ತಂದುಕೊಟ್ಟಿದ್ದಾರೆ. ನನ್ನ ಮೇಲೆ ದಾಖಲಾಗುವ ಕೇಸ್‍ಗಳಿಗೆ ಸ್ವಾಗತ ಮತ್ತು ಕಾಂಗ್ರೆಸ್‍ಗೆ ಧನ್ಯವಾದ ಎಂದು ವ್ಯಂಗ್ಯವಾಡಿದ್ದಾರೆ.
Advertisement
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv