ದಾವಣಗೆರೆ: ಇಷ್ಟು ದಿನ ರೈತರಿಗೆ ಬಂಧನದ ವಾರೆಂಟ್ ಜಾರಿ ಆಗುತ್ತಿತ್ತು. ಇದೀಗ ದಾವಣಗೆರೆ ಮಹಿಳೆಯರಿಗೆ ಅರೆಸ್ಟ್ ವಾರೆಂಟ್ ಜಾರಿಯಾಗಿದ್ದು, ಬಂಧನದ ಭೀತಿಯಿಂದ ಕೆಲ ಮಹಿಳೆಯರು ಗ್ರಾಮವನ್ನೇ ತೊರೆದಿದ್ದಾರೆ.
ಜಿಲ್ಲೆಯ ಚನ್ನಗಿರಿ ತಾಲೂಕಿನ ತೋಪೇನಹಳ್ಳಿಯ ಗ್ರಾಮದ ಮಹಿಳೆಯರಿಗೆ ಎಲ್& ಟಿ ಫೈನಾನ್ಸ್ ಕಂಪನಿಯಿಂದ ಸ್ವಸಹಾಯ ಸಂಘಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. 2017-18 ಸಾಲಿನಲ್ಲಿ ಗ್ರಾಮದ ಕೆಲ ಮಹಿಳೆಯರು ತಲಾ 50 ಸಾವಿರ ರೂ. ಪಡೆದುಕೊಂಡಿದ್ದಾರೆ. ಮಹಿಳೆಯರು ಕಂತು ಮೂಲಕ ಸಾಲ ಮರುಪಾವತಿ ಮಾಡುತ್ತಿದ್ದರು. ಆದ್ರೆ ಕಳೆದ ನಾಲ್ಕೈದು ತಿಂಗಳಿನಿಂದ ಕಂತು ಕಟ್ಟಿರಲಿಲ್ಲ. ಹಾಗಾಗಿ ಕೋಲ್ಕತ್ತಾ ಕೋರ್ಟ್ ನಿಂದ ಫೈನಾನ್ಸ್ ಕಂಪನಿ ನೋಟಿಸ್ ಕಳುಹಿಸಿದೆ.
Advertisement
Advertisement
ಸ್ಥಳೀಯ ಪೊಲೀಸರು ಗ್ರಾಮದ ಮಹಿಳೆಯರಿಗೆ ಸಂದೇಶ ರವಾನಿಸಿದ್ದು, ಹಣ ಕಟ್ಟದಿದ್ದಲ್ಲಿ ನಿಮ್ಮನ್ನು ಬಂಧಿಸಬೇಕಾಗುತ್ತದೆ ಅಂತ ಎಚ್ಚರಿಕೆ ನೀಡಿದ್ದಾರೆ. ನವೆಂಬರ್ 30ರವರೆಗೆ ಮಾತ್ರ ಮಹಿಳೆಯರಿಗೆ ಬಾಕಿ ಹಣ ಪಾವತಿಸುವ ಅಂತಿಮ ದಿನವಾಗಿದ್ದು, ಬಂಧನದ ಭೀತಿಯಲ್ಲಿ ಮಹಿಳೆಯರು ಇದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv