ಬೈಕ್, ಮನೆಗಳ್ಳತನ ಮಾಡುತ್ತಿದ್ದ ಇಬ್ಬರ ಬಂಧನ – 9 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಜಪ್ತಿ

Public TV
1 Min Read
Vijayapura Police Station

ವಿಜಯಪುರ: ಬೈಕ್ ಹಾಗೂ ಮನೆಗಳ್ಳತನ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದು, 9 ಲಕ್ಷಕ್ಕೂ ಅಧಿಕ ರೂ. ಮೌಲ್ಯದ ವಸ್ತುಗಳನ್ನು ವಿಜಯಪುರ ಪೊಲೀಸರು (Vijayapura Police) ವಶಕ್ಕೆ ಪಡೆದಿದ್ದಾರೆ.

ಆರೋಪಿಗಳನ್ನು ಸಮೀರ ಇನಾಮದಾರ ಹಾಗೂ ಮೊಸೀನ ಕಲಾದಗಿ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಕರ್ವಾ ಚೌತ್ ದಿನ ತಡವಾಗಿ ಬಂದ ಪತಿ ಜೊತೆ ಗಲಾಟೆ ಪತ್ನಿ ಆತ್ಮಹತ್ಯೆ

ನಗರದ ಸಿಂದಗಿ ನಾಕಾ ಬಳಿ ಮನೆಗಳ್ಳತನ ಮಾಡಿ, ಓಡಾಡುತ್ತಿದ್ದ ವೇಳೆ ಪರಿಶೀಲನೆ ಮಾಡುತ್ತಿದ್ದ ಪೊಲೀಸರು ಓರ್ವನನ್ನು ಬಂಧಿಸಿದ್ದು, ಮತ್ತೊಂದೆಡೆ ಬೈಕ್ ಕಳ್ಳತನ ಮಾಡುತ್ತಿದ್ದ ವೇಳೆ ಓರ್ವನನ್ನು ಬಂಧಿಸಿದ್ದಾರೆ.

Golgumbaz Police Station

ಮನೆಗಳ್ಳತನ ಮಾಡುತ್ತಿದ್ದ ಆರೋಪಿಯಿಂದ 7,59,600 ಲಕ್ಷ ರೂ. ಮೌಲ್ಯದ 100 ಗ್ರಾಂ ಚಿನ್ನ, 120 ಗ್ರಾಂ ಬೆಳ್ಳಿ ವಶಕ್ಕೆ ಪಡೆಯಲಾಗಿದೆ. ಇನ್ನೂ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯಿಂದ 2,20,000 ಲಕ್ಷ ರೂ. ಮೌಲ್ಯದ 4 ವಿವಿಧ ಕಂಪನಿಯ ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ.ಇದನ್ನೂ ಓದಿ: ಜಾತ್ಯಾತೀತ ರಾಷ್ಟ್ರದಲ್ಲಿ ಜಾತಿ ಗಣತಿ ಯಾಕೆ? – ವಿಶ್ವಪ್ರಸನ್ನ ತೀರ್ಥ ಶ್ರೀ

ಈ ಪ್ರಕರಣ ಸಂಬಂಧ ಗೋಳಗುಮ್ಮಟ ಹಾಗೂ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರ ಕಾರ್ಯಕ್ಕೆ ಎಸ್ಪಿ ಪ್ರಶಂಸೆ ವ್ಯಕಪಡಿಸಿದ್ದಾರೆ.

Share This Article