ತುಮಕೂರು: ರಾಜ್ಯದಲ್ಲಿ ಹುಲಿ ಉಗುರಿನ ಪೆಂಡೆಂಟ್ (Tiger Claw Pendent) ಪ್ರಕರಣ ಸದ್ದು ಮಾಡುತ್ತಿರುವ ಬೆನ್ನಲ್ಲೇ, ರಾಷ್ಟ್ರಪಕ್ಷಿ ನವಿಲು (Peacock) ಮಾಂಸ ಭಕ್ಷಣೆಗೆ ಮುಂದಾಗಿದ್ದ ಮೂವರನ್ನು ಬಂಧಿಸಿದ ಘಟನೆ ತುಮಕೂರಿನ (Tumakuru) ಮಾರನಾಯಕನಪಾಳ್ಯದಲ್ಲಿ (Maranayakanapalya) ನಡೆದಿದೆ.
ಒಡಿಶಾ (Odisha) ಮೂಲದ ಬಿಟ್ಟಿಂಗ್ ನಾಯಕ್, ಬೈಷಾಕ್ ದಾವು, ದುಬಾ ಕಾಪತ್ ಬಂಧಿತ ಆರೋಪಿಗಳು. ಬಂಧಿತರು ಮಾರನಾಯಕನಪಾಳ್ಯದ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಹಲವು ದಿನಗಳಿಂದ ಆರೋಪಿಗಳು ನವಿಲುಗಳನ್ನ ಕೊಂದು ಭಕ್ಷಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ- ಕೊಲೆ ಶಂಕೆ
Advertisement
Advertisement
ದಾಳಿಯ ವೇಳೆ 1.5 ಕೆ.ಜಿ ನವಿಲಿನ ಹಸಿ ಮಾಂಸ, ನವಿಲಿನ ಎರಡು ಕಾಲುಗಳು, ಬೇಯಿಸಿದ ಮಾಂಸ, ನವಿಲು ಹಿಡಿಯಲು ಬಳಸಿದ್ದ ಬಲೆಗಳು, ಉರುಳುಗಳು ಮತ್ತು ಮಾಂಸ ಬೇಯಿಸಿದ್ದ ಪಾತ್ರೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದ ಮಾಂಸವನ್ನು ಅಧಿಕಾರಿಗಳು ಎಫ್‌ಎಸ್‌ಎಲ್‌ಗೆ (FSL) ಕಳುಹಿಸಿದ್ದಾರೆ. ಬಂಧಿತರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಹುಲಿ ಉಗುರಿನ ಡಾಲರ್ ಹಾಕಿಕೊಂಡಿದ್ದ ಇಬ್ಬರು ಅರ್ಚಕರ ಬಂಧನ
Advertisement
Web Stories