ಕಲಬುರಗಿ: ಜಾನುವಾರುಗಳನ್ನು ಕಳ್ಳತನ ಮಾಡಿ ಜೀವನ ಸಾಗಿಸುತ್ತಿದ್ದ ಖದೀಮರನ್ನು ಕಲಬುರಗಿ (Kalaburagi) ಪೊಲೀಸರು ಬಂಧಿಸಿದ್ದಾರೆ.
ಶಹಾಬಾದ್ ಮತ್ತು ಕಾಳಗಿ (Kalagi) ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಜಿಲಾನಿ ಮುಜಾವರ್, ಶ್ರೀಮಂತು, ನಾಶೇರ್, ಸೈಯದ್ ನಯೂಮ್ ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತರಿಂದ 30 ಸಾವಿರ ರೂ. ಹಣ, ಗೂಡ್ಸ್ ಆಟೋ ಜಪ್ತಿ ಮಾಡಿಕೊಂಡಿದ್ದಾರೆ. ಜಿಲ್ಲೆಯ ವಿವಿಧೆಡೆ ಜಾನುವಾರುಗಳನ್ನು ಕಳ್ಳತನ ಮಾಡಿ ಬಳಿಕ ಸಂತೆಯಲ್ಲಿ ಮಾರಾಟ ಮಾಡುತ್ತಿರುವುದ್ದಾಗಿ ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಬಿಜೆಪಿಗೆ 160-170 ಸೀಟ್ ಖಚಿತ, ಬಹುಮತ ನಿಶ್ಚಿತ – ರಮೇಶ್ ಜಾರಕಿಹೊಳಿ
ಈ ಕುರಿತು ಶಹಬಾದ್ ಹಾಗೂ ಕಾಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಶಿವಳ್ಳಿ ಸ್ಪಂದನ ಸಂಘದ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ವಂಚನೆ: ಕೇಸ್ ದಾಖಲು