ಅಂತರರಾಜ್ಯ ಮನೆಗಳ್ಳರ ಬಂಧನ – ಅರ್ಧ ಕೆಜಿ ಚಿನ್ನ, 2 ಕೆಜಿ ಬೆಳ್ಳಿ ಸೀಜ್‌

Public TV
1 Min Read
Chikkaballapur Police 2

ಚಿಕ್ಕಬಳ್ಳಾಪುರ: ಅಂತರರಾಜ್ಯ ಖತರ್ನಾಕ್ ಮನೆಗಳ್ಳರನ್ನ ಬಂಧಿಸಿರುವ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸರು (Chikkaballapur District Police), ಬಂಧಿತರಿಂದ ಬರೋಬ್ಬರಿ ಅರ್ಧ ಕೆಜಿಗೂ ಅಧಿಕ ಚಿನ್ನಾಭರಣ ಹಾಗೂ 2 ಕೆಜಿಗೂ ಅಧಿಕ ಬೆಳ್ಳಿ ಅಭರಣಗಳನ್ನ (Jewellery) ವಶಪಡಿಸಿಕೊಂಡಿದ್ದಾರೆ.

Chikkaballapur Police 4

ಅಂದಹಾಗೆ ಆಂಧ್ರಪ್ರದೇಶದ ಹಿಂದೂಪುರದ ಮಹೇಶ್, ಬೆಂಗಳೂರು (Bengaluru) ಮೂಲದ ಮುದಾಸೀರ್, ಚಿಂತಾಮಣಿ ನಗರದ ಸುಲ್ತಾನ್ ಭಾಷಾ ಬಂಧಿತರು. ಇದನ್ನೂ ಓದಿ: ಬೈಕ್‌ಗೆ ಬೊಲೆರೋ ಕಾರು ಡಿಕ್ಕಿ – ಭೀಕರ ಅಪಘಾತದಲ್ಲಿ ಮಹಿಳೆ ಸಾವು

Chikkaballapur Police

ಈ ಮೂವರು ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನಾಯನಹಳ್ಳಿ ಗ್ರಾಮದ ಕೃಷ್ಣಾರೆಡ್ಡಿ ಎಂಬುವವರ ಮನೆಯ ಬೀಗ ಒಡೆದು ಸರಿಸುಮಾರು ಏಳೂವರೆ ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳು, ಹಾಗೂ ಕಾಗತಿ ಗ್ರಾಮದ ಲಕ್ಷಣ್ ಎಂಬುವವರ ಮನೆಯ ಬೀಗ ಒಡೆದು 98,000 ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ರು.

Chikkaballapur Police 3

ಈ ಎರಡೂ ಪ್ರಕರಣಗಳ ಬೆನ್ನತ್ತಿದ ಪೊಲೀಸರು ಮೂವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬಂಧಿತರು ಈ ಎರಡು ಪ್ರಕರಣ ಅಷ್ಟೇ ಅಲ್ಲದೇ ಬೆಂಗಳೂರಿನ ಕೆ.ಆರ್ ಪುರಂ, ಬೈಯಪ್ಪನಹಳ್ಳಿ, ರಾಯಲ್ಪಾಡು ಹಾಗೂ ಅಂಕೋಲಾ, ಮುರಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮನೆಗಳ್ಳತನ ಮಾಡಿರೋದನ್ನ ಬಾಯ್ಬಿಟ್ಟಿದ್ದಾರೆ.

ಬಂಧಿತರು ಕಳವು ಮಾಡಿದ್ದ 512 ಗ್ರಾಂ ಚಿನ್ನಾಭರಣಗಳು, 2 ಕೆಜಿ 353 ಗ್ರಾಂ ಬೆಳ್ಳಿ ಅಭರಣಗಳು, ಕೃತ್ಯಕ್ಕೆ ಬಳಿಸಿದ ಕಾರು ಸೇರಿ ಬರೋಬ್ಬರಿ 50 ಲಕ್ಷ ರೂ. ಮೌಲ್ಯದ ವಸ್ತುಗಳನ್ನ ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ ಕ್ಷೇತ್ರದ ವಿದ್ಯಾರ್ಥಿಗಳಿಗೆ ವೈಯಕ್ತಿಕ ಸ್ಕಾಲರ್ಶಿಪ್ ಸ್ಕೀಂ ಘೋಷಿಸಿದ ಶಾಸಕ ಪ್ರದೀಪ್ ಈಶ್ವರ್ 

Share This Article