ಬೆಂಗಳೂರು: ನಿಮಗೆ ತಾಕತ್ತಿದ್ದರೆ ನನ್ನನ್ನು ಅರೆಸ್ಟ್ ಮಾಡಿ ನೋಡಿ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಸಿಎಂ ಸಿದ್ದರಾಮಯ್ಯರಿಗೆ ಬಹಿರಂಗ ಸವಾಲು ಹಾಕಿದ್ದಾರೆ.
ಹೊನ್ನಾವರದಲ್ಲಿ ನಡೆದ ಘಟನೆ ಸಂಬಂಧ ಶೋಭಾ ಕರಂದ್ಲಾಜೆ ವಿವಾದಾತ್ಮಕ ಟ್ವೀಟ್ ಮಾಡಿದ್ದಾರೆ ಎಂದು ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಈ ಸಂಬಂಧ ಮಾತನಾಡಿ ಶೋಭಾ ಕರಂದ್ಲಾಜೆ ಸಿಎಂ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
Advertisement
Advertisement
ನನ್ನನ್ನು ಒಬ್ಬ ಹಿಂದಿನಿಂದ ಬಂದು ಹಿಡಿದುಕೊಂಡು ಸ್ವಲ್ಪ ದೂರ ನನ್ನನ್ನು ಎಳೆದುಕೊಂಡು ಹೋದ, ಆ ವೇಳೆ ನಾನು ಕಿರುಚಾಡಿದೇ ಅಷ್ಟೊತ್ತಿಗೆ ಇನ್ನೊಬ್ಬ ಬಂದು ಚಾಕು ತೋರಿಸಿದ ಆತನಿಂದ ಚಾಕುವನ್ನು ಹಿಡಿದುಕೊಳ್ಳುವಷ್ಟರಲ್ಲಿ ಕೈಗೆ ಗಾಯವಾಯಿತು ಎಂದು ಹೊನ್ನಾವರದ ಆಸ್ಪತ್ರೆಯಲ್ಲಿ ಕಾವ್ಯಾ ನಾಯ್ಕ್ ಅತ್ಯಂತ ಸ್ಪಷ್ಟವಾಗಿ ಹೇಳಿದ್ದಾಳೆ. ಆಕೆಯ ಹೇಳಿಕೆಯನ್ನು ನಾನು ಮಾಧ್ಯಮಗಳ ಮೂಲಕ ನೋಡಿದ್ದೇನೆ. ಈ ಎಲ್ಲ ಬೆಳವಣಿಗೆಯ ನಂತರವೇ ನಾನು ಟ್ವೀಟ್ ಮಾಡಿದ್ದೇನೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
Advertisement
144 ಸೆಕ್ಷನ್ ಮತ್ತು ಹೊನ್ನಾವರದ ಗಲಭೆಯನ್ನು ಅಲ್ಲಿಯ ಜಿಹಾದಿಗಳು ದುರುಪಯೋಗ ಮಾಡಿಕೊಂಡು ಬಾಲಕಿಯನ್ನು ಅತ್ಯಾಚಾರ ಎಸೆಗಿ ಕೊಲೆ ಮಾಡುವ ಕೃತ್ಯಕ್ಕೆ ಕೈ ಹಾಕಿದ್ದರು. ಅವರು ಕೇವಲ ಅತ್ಯಾಚಾರ ಮಾಡಲು ಬಂದಿದ್ದರೆ ಚಾಕು ತರುವ ಅಗತ್ಯವಿರಲಿಲ್ಲ. ಈ ಸಂದರ್ಭದಲ್ಲಿ ನಾನು ಸರ್ಕಾರಕ್ಕೆ ಕೇಳ್ತಿನಿ ಆತನ ಕೈಯಲ್ಲಿ ಚಾಕು ಯಾಕಿತ್ತು? ಕರ್ನಾಟಕ ಸರ್ಕಾರ ಯಾವ ಕೆಳಮಟ್ಟಕ್ಕೆ ಇಳಿದಿದೆ ಎಂದರೆ ಪ್ರತಿಯೊಂದು ಪ್ರಕರಣವನ್ನು ದಾರಿ ತಪ್ಪಿಸುವ ಪ್ರಯತ್ನ ಮತ್ತು ಮುಚ್ಚಿ ಹಾಕುವ ವ್ಯವಸ್ಥಿತವಾದ ಷಡ್ಯಂತ್ರ ಮಾಡುತ್ತಿದೆ ಎಂದು ಶೋಭಾ ಕರಂದ್ಲಾಜೆ ಆರೋಪಿಸಿದರು.