ಮುಂಬೈ: ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಅವರು ಇಂದು ತಮ್ಮ 54ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ತಮ್ಮ ಹುಟ್ಟುಹಬ್ಬದಂದೇ ಸಲ್ಮಾನ್ ಸಹೋದರಿ ಅರ್ಪಿತಾ ಖಾನ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಅರ್ಪಿತಾ ಇಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಗುರುವಾರ ರಾತ್ರಿ ಅರ್ಪಿತಾ ಮುಂಬೈನ ಹಿಂದುಜಾ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಸಲ್ಮಾನ್ ಖಾನ್ ಅವರ ಹುಟ್ಟುಹಬ್ಬದಂದೇ ಅರ್ಪಿತಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಹಾಗಾಗಿ ಡಿಸೆಂಬರ್ 27ರಂದು ಖಾನ್ ಕುಟುಂಬಕ್ಕೆ ಸಂಭ್ರಮಾಚರಣೆ ದುಪ್ಪಟ್ಟಾಗಿದೆ.
Advertisement
Advertisement
ಈ ಬಗ್ಗೆ ಅರ್ಪಿತಾ ಅವರ ಪತಿ, ನಟ ಆಯೂಷ್, “ಹೆಣ್ಣು ಮಗು ಜನಿಸಿದೆ ಎಂದು ಹೇಳಲು ತುಂಬಾ ಖುಷಿಯಾಗುತ್ತಿದೆ. ಈ ವಿಶೇಷ ದಿನದಂದು ನಾನು ನನ್ನ ಕುಟುಂಬಸ್ಥರಿಗೆ, ಸ್ನೇಹಿತರಿಗೆ ಹಾಗೂ ಎಲ್ಲರಿಗೂ ಧನ್ಯವಾದ ತಿಳಿಸಲು ಇಷ್ಟಪಡುತ್ತೇನೆ. ಇಷ್ಟು ಪ್ರೀತಿ ತೋರಿದ ಮಾಧ್ಯಮಕ್ಕೆ ಹಾಗೂ ಅಭಿಮಾನಿಗಳಿಗೆ ಧನ್ಯವಾದ ತಿಳಿಸಲು ಇಷ್ಟಪಡುತ್ತೇನೆ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.
Advertisement
View this post on Instagram
Advertisement
ಆಯೂಷ್ ಹಾಗೂ ಅರ್ಪಿತಾ 2014 ನವೆಂಬರ್ 18ರಂದು ಹೈದರಾಬಾದ್‍ನ ತಾಜ್ ಫಾಲಕ್‍ನೂಮಾ ಅರಮನೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2016 ಮಾರ್ಚ್ 30ರಂದು ಅರ್ಪಿತಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಬಳಿಕ ಆ ಮಗುವಿಗೆ ಅಹಿಲ್ ಎಂದು ನಾಮಕರಣ ಮಾಡಿದ್ದರು. 2018ರಲ್ಲಿ `ಲವ್ ಯಾತ್ರಿ’ ಚಿತ್ರದ ಮೂಲಕ ಆಯೂಷ್ ಶರ್ಮಾ ಬಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದರು.