ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಲ್ಲಿ ಕೈದಿಗಳಿಗೆ ರಾಜಾಥಿತ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಶನಿವಾರ ಪರಪ್ಪನ ಅಗ್ರಹಾರ ಜೈಲಿನ ಸಜಾಬಂಧಿಗಳಿಗೆ ಜೈಲಾಧಿಕಾರಿಗಳು ಬೆದರಿಕೆ ಹಾಕಿದ ಪ್ರಕರಣದ ಬೆನ್ನಲ್ಲೇ ರಾತ್ರೋರಾತ್ರಿ 18 ಕೈದಿಗಳನ್ನ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿದ್ದಾರೆ.
Advertisement
ಜೈಲ್ ಸೂಪರಿಡೆಂಟ್ ಕೃಷ್ಣಕುಮಾರ್ ವಿರುದ್ಧ ಮಾತನಾಡಿದ ಬೆನ್ನಲ್ಲೇ ಕೈದಿಗಳನ್ನ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿದ್ದಾರೆ. ನಿನ್ನೆ ಡಿಐಜಿ ರೂಪಾ ಭೇಟಿ ನೀಡಿದಾಗ ಜೈಲಿನ ಒಳಗೆ ಗಲಾಟೆ ನಡೆದಿತ್ತು. ಡಿಐಜಿ ರೂಪಾಗೆ ಸ್ಥಳಾಂತರಗೊಂಡ ಕೈದಿಗಳೆಲ್ಲಾ ದೂರು ನೀಡಿದ್ರು. ಹೀಗಾಗಿ ರೂಪ ಪರವಾಗಿ ನಿಂತ 18 ಕೈದಿಗಳನ್ನ ಸ್ಥಳಾಂತರ ಮಾಡಿದ್ದಾರೆ ಅಂತ ಗೊತ್ತಾಗಿದೆ.
Advertisement
ಸಿಎಂ ಎಚ್ಚರಿಕೆ: ಅಶಿಸ್ತು ಪ್ರದರ್ಶಿಸುವ ಯಾವುದೇ ಅಧಿಕಾರಿಯನ್ನ ಸಹಿಸುವುದಿಲ್ಲ. ಡಿಐಜಿ ರೂಪಾ ಕೊಟ್ಟ ವರದಿಯಲ್ಲಿ ಯಾರಾದ್ರೂ ತಪ್ಪಿತಸ್ಥರು ಎಂದು ಇದ್ರೆ ಅವರ ಮೇಲೂ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇನೆ ಅಂತ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅಲ್ಲದೆ, ನಿಯಮ ಮೀರುವಂತಹ ಅಧಿಕಾರಿಗಳು, ಅಶಿಸ್ತಿನ ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳುವುದಾಗಿ ಸಿಎಂ ಎಚ್ಚರಿಸಿದ್ದಾರೆ.