ಬೆಂಗಳೂರು: ರಾಜ್ಯದಲ್ಲಿ ಧರ್ಮ ದಂಗಲ್ ಮಧ್ಯೆ ಇಂದು ಹುಸಿ ಬಾಂಬ್ ಇ-ಮೇಲ್ ಸದ್ದು ಮಾಡಿದೆ. ಬೆಂಗಳೂರಿನ 15 ಪ್ರತಿಷ್ಠಿತ ಶಾಲೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಇ-ಮೇಲ್ ಬಂದಿದ್ದ ಹಿನ್ನೆಲೆಯಲ್ಲಿ ಆತಂಕ ಮನೆ ಮಾಡಿತ್ತು.
Advertisement
ಕೂಡಲೇ ಅಲರ್ಟ್ ಆದ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ, ಶ್ವಾನ ಪಡೆಯೊಂದಿಗೆ ಆ ಶಾಲೆಗಳಿಗೆ ತೆರಳಿ, ತೀವ್ರ ಪರಿಶೀಲನೆ ನಡೆಸಿದ್ರು. ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಿ ಇಂಚಿಂಚೂ ಬಿಡದೇ ಶೋಧ ನಡೆಸಿದ್ರು. ಆದ್ರೆ ಎಲ್ಲಿಯೂ ಅನುಮಾನಾಸ್ಪದವಾದ ಒಂದೇ ಒಂದು ವಸ್ತುವೂ ಸಿಕ್ಕಿಲ್ಲ. ಹೀಗಾಗಿ ಇದೊಂದು ಹುಸಿ ಇ-ಮೇಲ್ ಇರಬಹುದೆಂದು ಪೊಲೀಸರು ಅಂದಾಜಿಸಿದ್ರು. ಇ-ಮೇಲ್ ಯಾವ ಐಪಿ ಅಡ್ರೆಸ್‍ನಿಂದ ಕಳುಹಿಸಲಾಗಿದೆ ಎಂಬುದನ್ನು ಪತ್ತೆ ಹಚ್ಚಲು ಪೊಲೀಸ್ ತಂತ್ರಜ್ಞರು ಪ್ರಯತ್ನ ಮಾಡುತ್ತಿದ್ದು, ಪ್ರಾಥಮಿಕ ಮೂಲಗಳ ಪ್ರಕಾರ, ಇದು ಅಮೆರಿಕ ಐಪಿ ಅಡ್ರೆಸ್ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇದನ್ನೂ ಓದಿ: ಮುಸ್ಲಿಮ್ ಮೆಕ್ಯಾನಿಕ್ ರಿಪೇರಿ ಮಾಡದಿದ್ರೆ ಗಾಡಿ ಓಡ್ತವಾ?: ಶಾಸಕ ಪುಟ್ಟರಂಗಶೆಟ್ಟಿ
Advertisement
Advertisement
ಮೊದಲು ಇದು ವಿದ್ಯಾರ್ಥಿಯೊಬ್ಬನ ಸಹೋದರನ ಕಿಡಿಗೇಡಿ ಕೃತ್ಯ ಆಗಿರಬಹುದು ಎಂಬ ಅನುಮಾನದ ಮೇರೆಗೆ ತನಿಖೆ ನಡೆಸಲಾಗಿತ್ತು. ಈ ಬೆಳವಣಿಗೆಯಿಂದ ಪೋಷಕರು ಕಂಗಾಲಾಗಿದ್ದಾರೆ. ಬೆಂಗಳೂರು ನಗರದ 10 ಶಾಲೆಗಳಿಗೆ ಮತ್ತು ಬೆಂಗಳೂರು ಗ್ರಾಮಾಂತರದ 5 ಶಾಲೆಗಳು ಸೇರಿ ಒಟ್ಟು 15 ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ. ಮಹದೇವಪುರ- ಗೋಪಾಲನ್ ಇಂಟರ್ ನ್ಯಾಷನಲ್ ಸ್ಕೂಲ್, ವರ್ತೂರು – ಡೆಲ್ಲಿ ಪಬ್ಲಿಕ್ ಸ್ಕೂಲ್, ಮಾರತಹಳ್ಳಿ- ನ್ಯೂ ಆಕಾಡೆಮಿ ಸ್ಕೂಲ್, ಹೆಣ್ಣೂರು – ವಿನ್ಸೆಂಟ್ ಪಾಲ್‍ಸ್ಕೂಲ್, ಗೋವಿಂದಪುರ – ದಿ ಇಂಡಿಯನ್ ಪಬ್ಲಿಕ್ ಸ್ಕೂಲ್, ಹೈಗ್ರೌಂಡ್ಸ್ – ಸೋಫಿಯಾ ಸ್ಕೂಲ್, ಚಿಕ್ಕಜಾಲ- ಸ್ಟೋನಿ ಹಿಲ್ ಸ್ಕೂಲ್, ಕೊಡಿಗೇಹಳ್ಳಿ – ಟ್ರಿಯೊ ಸ್ಕೂಲ್, ವಿದ್ಯಾರಣ್ಯಪುರ – ವ್ಯಾಸ ಸ್ಕೂಲ್, ಸರ್ಜಾಪುರ – ಕುನ್ಸ್ ಕ್ಯಾಪ್ಸ್ ಕೋಲಂ ಇಂಟರ್ ನ್ಯಾಷನಲ್ ಸ್ಕೂಲ್, ಹೆಬ್ಬಗೋಡಿ – ಎಬೆನೆಜರ್ ಇಂಟರ್ ನ್ಯಾಷನಲ್ ಸ್ಕೂಲ್, ಬನ್ನೇರುಘಟಟ್ಟ – ಕ್ಯಾಂಡರ್ ಇಂಟರ್ ನ್ಯಾಷನಲ್ ಸ್ಕೂಲ್, ಬನ್ನೇರುಘಟ್ಟ – ರೆಡ್ ಬ್ರಿಡ್ಜ್ ಸ್ಕೂಲ್, ಇನ್ವೆಂಚರ್ ಅಕಾಡೆಮಿ – ಸರ್ಜಾಪುರ ಶಾಲೆಗೆ ಈ ಮೇಲ್ ಬಂದಿತ್ತು. ಬಳಿಕ ಎಲ್ಲಾ ಕಡೆ ಆಯಾ ಠಾಣಾ ವ್ಯಾಪ್ತಿಯಲ್ಲಿ ಎಫ್‍ಐಆರ್ ದಾಖಲಾಗಿದೆ. ಇದನ್ನೂ ಓದಿ: ಕರ್ನಾಟಕದಲ್ಲಿ ಎಲೆಕ್ಷನ್ ʼಉಪಯೋಗಿʼ ಕ್ಯಾಬಿನೆಟ್ ಪುನಾರಚನೆಗೆ ಬಿಜೆಪಿ ಕಸರತ್ತು
Advertisement