ಬೆಂಗಳೂರು: ನಗರದಲ್ಲಿ ಮುಜರಾಯಿ ಇಲಾಖೆಯ ಜಾಗ ಎಷ್ಟು ಪ್ರಮಾಣದಲ್ಲಿ ಖಾಸಗಿ ಬಿಲ್ಡರ್ ಗಳ ಪಾಲಗಿದೆ ಅನ್ನೋ ಲೆಕ್ಕ ನೋಡಿದ್ರೇ ನೀವು ಓ ಮೈ ಗಾಡ್ ಅನ್ನದೇ ಇರಲ್ಲ.
ಹೌದು. ಬೆಂಗಳೂರು ನಗರವೊಂದರಲ್ಲಿ ಬರೋಬ್ಬರಿ ಸುಮಾರು ಎಂಟುನೂರು ಕೋಟಿಯಷ್ಟು ಆಸ್ತಿ ಕಂಡವರ ಪಾಲಾಗಿದೆ ಅಂತಾ ಅಂದಾಜಿಸಲಾಗಿದೆ. 12 ವರ್ಷದ ಹಿಂದೆ ಮುಜರಾಯಿ ಜಮೀನಿನ ರಕ್ಷಣೆಗೆ ಕಾಯ್ದೆ ರೂಪಿಸಬೇಕು ಅಂತಾ ಗೆಜೆಟ್ ನೊಟಿಫಿಕೇಶನ್ ಹೊರಡಿಸಿದ್ರೂ ಇಷ್ಟು ವರ್ಷವಾದ್ರೂ ಈ ಕಾಯ್ದೆ ಜಾರಿಗೆ ತಂದಿಲ್ಲ. ಜೊತೆಗೆ ಮುಜರಾಯಿ ಇಲಾಖೆ ಜಮೀನು ಎಷ್ಟಿದೆ ಅನ್ನೋದು ಖುದ್ದು ರಾಜ್ಯ ಸರ್ಕಾರದ ಗಮನಕ್ಕೆ ಬಂದಿಲ್ಲ ಅನ್ನೋ ಮಾಹಿತಿ ಆರ್‍ಟಿಐನಲ್ಲಿ ಬಹಿರಂಗವಾಗಿದೆ.
Advertisement
Advertisement
ಬೆಂಗಳೂರಿನ ಐತಿಹಾಸಿಕ ಗವಿಗಂಗಾಧರ, ಕಾಡು ಮಲ್ಲೇಶ್ವರ ದೇಗುಲದ ಜಾಗವೂ ಸಾಕಷ್ಟು ಪರರ ಪಾಲಾಗಿದೆ. ಮುಜರಾಯಿ ದೇಗುಲದ ದುಡ್ಡುನ್ನು ಸರ್ಕಾರ ಎಲ್ಲಿ ಬಳಕೆ ಮಾಡುತ್ತೆ ಅನ್ನೋದು ಗೊತ್ತಾಗಲ್ಲ, ಆದ್ರೇ ದೇಗುಲ ರಕ್ಷಣೆ ಮಾಡಲ್ಲ ಅಂತಾ ಹಿಂದೂ ಜನಜಾಗೃತಿ ಸಮಿತಿ ಕಿಡಿ ಕಾರಿದೆ.