ಶ್ರೀನಗರ: ಸೇನಾ ವಾಹನವನ್ನು ಟಾರ್ಗೆಟ್ ಮಾಡಿ IED ಸ್ಫೋಟಕಗಳೊಂದಿಗೆ ಉಗ್ರರು ದಾಳಿ ನಡೆಸಿರುವ ಘಟನೆ ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದಿದೆ.
ಕೇಂದ್ರ ಮೀಸಲು ಪಡೆಯ ಪೊಲೀಸರ ಮೇಲೆ ಕಳೆದ ಬಾರಿ ದಾಳಿ ನಡೆಸಿದ್ದ ಪುಲ್ವಾಮಾ ಪ್ರದೇಶದ ಬಳಿಯೇ ಇಂದು ದಾಳಿ ನಡೆಸಲು ಉಗ್ರರು ಯತ್ನಿಸಿದ್ದಾರೆ. ಈ ವೇಳೆ ಸೇನೆ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ. ಘಟನೆಯಲ್ಲಿ ಮೂವರು ಯೋಧರು ಗಾಯಗೊಂಡಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಸೇನಾ ವಾಹನ ಕ್ಯಾಸ್ಪರ್ ವಾಹನ ಜಖಂ ಗೊಂಡಿದೆ. ಸದ್ಯ ಉಗ್ರರೊಂದಿಗಿನ ಗುಂಡಿನ ಕಾಳಗ ಇಂದಿಗೂ ಮುಂದುವರಿದಿದೆ ಎಂಬ ಮಾಹಿತಿ ಲಭಿಸಿದೆ.
Advertisement
Indian Army: Area cordoned and search operations in progress.
— ANI (@ANI) June 17, 2019
Advertisement
ರಾಷ್ಟ್ರೀಯ ರೈಫಲ್ಸ್ ಗೆ ಸೇರಿದ ವಾಹನ ಮೇಲೆ ಪುಲ್ವಾಮಾದ ಅರಿಹಲ್ ಗ್ರಾಮದ ಬಳಿ ದಾಳಿ ನಡೆದಿದ್ದು, ದಾಳಿಯ ಬೆನ್ನಲ್ಲೇ ವಾಹನದ ಮೇಲೆ ಕಲ್ಲು ತೂರಾಟ ಹಾಗೂ ಗುಂಡಿನ ದಾಳಿ ನಡೆದಿದೆ. ದಕ್ಷಿಣ ಜಮ್ಮು ಕಾಶ್ಮೀರದ ಅನಂತ್‍ನಾಗ್ ಜಿಲ್ಲೆಯಲ್ಲಿ ಎನ್‍ಕೌಂಟರ್ ನಡೆದ ಬೆನ್ನಲ್ಲೇ ಈ ದಾಳಿ ನಡೆದಿದೆ. ಜಿಲ್ಲೆಯ ಅಚ್ಚಲ್‍ಬಾಗ್‍ನ ಬಡೋರ್ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಭಾರತೀಯ ಸೇನೆ ಓರ್ವ ಉಗ್ರನನ್ನು ಹೊಡೆದುರಳಿಸಿದೆ. ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿ ಲಭಿಸಿದೆ.
Advertisement
Indian Army: Terrorists attempted to attack a mobile vehicle patrol of 44 RR with a vehicle based IED while the Army patrol was moving in general area Arihal in Pulwama this evening. The troops are safe, few minor injuries. Reports of attack on Army convoy are unfounded&baseless. https://t.co/seA8QqbX5A
— ANI (@ANI) June 17, 2019
Advertisement
ಯೋಧರು ಮತ್ತು ಉಗ್ರರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಆರ್ಮಿ ಮೇಜರ್ ಹಾಗೂ ಮೂವರು ಯೋಧರು ಹುತಾತ್ಮರಾಗಿದ್ದರು. ಉಗ್ರರು ಅಡಗಿಕೊಂಡು ಕುಳಿತಿರುವ ಮಾಹಿತಿ ಪಡೆದ ಯೋಧರು, ಪೊಲೀಸರೊಂದಿಗೆ ಶೋಧ ಕಾರ್ಯ ನಡೆಸಿದ್ದರು. ಈ ವೇಳೆಯೇ ಉಗ್ರರು ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಮತ್ತೊಬ್ಬ ಆರ್ಮಿ ಮೇಜರ್ ಅವರನ್ನು ಶ್ರೀನಗರ ಆರ್ಮಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಜೂನ್ 12ರಂದು ಭಾರತೀಯ ಯೋಧರ ಗಸ್ತು ಪಡೆಯ ಮೇಲೆ ಉಗ್ರರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದರು.