ನವದೆಹಲಿ: ಭಾರತೀಯ ಸೇನೆಯ ಯೋಧರಿಗೆ ಹೊಸ ಸಮವಸ್ತ್ರವನ್ನು ವಿನ್ಯಾಸಗೊಳಿಸಲಾಗಿದ್ದು, ಜನವರಿ 15ರ ಆರ್ಮಿ ಡೇ ಪರೇಡ್‍ನಲ್ಲಿ ಯೋಧರು ಹೊಸ ಯೂನಿಫಾರ್ಮ್‍ನಲ್ಲಿ ಕಂಗೊಳಿಸಲಿದ್ದಾರೆ ಎಂದು ವರದಿಯಾಗಿದೆ.
Advertisement
ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಭಾರತೀಯ ಸೇನೆ ಮತ್ತು ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ (NIFT) ಜಂಟಿಯಾಗಿ ಹೊಸ ಸಮವಸ್ತ್ರವನ್ನು ವಿನ್ಯಾಸಗೊಳಿಸಿದೆ. ಯೋಧರ ಕಾರ್ಯವೈಖರಿ, ಹವಾಮಾನಕ್ಕೆ ಅನುಗುಣವಾಗಿ ಹೊಸ ಸಮವಸ್ತ್ರವನ್ನು ವಿನ್ಯಾಸಗೊಳಿಸಲಾಗಿದೆ ಎಂದು ಮೂಲಗಳಿಂದ ವರದಿಯಾಗಿದೆ. ಇದನ್ನೂ ಓದಿ: ಆ್ಯಪ್‍ನಲ್ಲಿ ಮಹಿಳೆಯರ ಮಾರಾಟ – ಬೆಂಗಳೂರಿನ 21 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ವಶಕ್ಕೆ
Advertisement
ಮಾರುಕಟ್ಟೆಯಲ್ಲಿ ಸಿಗಲ್ಲ:
ಯೋಧರ ಹೊಸ ಸಮವಸ್ತ್ರ ಯಾವುದೇ ಮಾರುಕಟ್ಟೆಯಲ್ಲಿ ಸಿಗುವುದಿಲ್ಲ. ಬದಲಾಗಿ ವಿವಿಧ ಸೇನೆಯ ಆಯಾ ಬ್ಯಾಚ್‍ಗೆ ಉನ್ನತ ಅಧಿಕಾರಿಗಳು ಈ ಸಮವಸ್ತ್ರವನ್ನು ಯೋಧರಿಗೆ ವಿತರಿಸಲಿದ್ದಾರೆ. 13 ಲಕ್ಷಕ್ಕೂ ಹೆಚ್ಚಿನ ಯುದ್ಧಕ್ಕೆ ಪೂರಕವಾದ (ಬಿಡಿಎಸ್) ಸಮವಸ್ತ್ರವನ್ನು ತಯಾರಿಕೆಗಾಗಿ ಟೆಂಡರ್ ನೀಡಲಾಗಿದೆ.
Advertisement
Advertisement
ಮಾರುಕಟ್ಟೆಯಲ್ಲಿ ಯಾಕೆ ಸಿಗಲ್ಲ?:
ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವ ಪ್ರಕಾರ, ಭದ್ರತೆಯ ದೃಷ್ಟಿಯಿಂದ ಹೊಸ ಸಮವಸ್ತ್ರ ಮಾರುಕಟ್ಟೆಯಲ್ಲಿ ಸಿಗಲ್ಲ. ಹಾಗಾಗಿ ಒಂದು ಕಂಪೆನಿಗೆ ಟೆಂಡರ್ ಕೊಡಲಾಗಿದೆ. ಅವರು ವಿವಿಧ ಗಾತ್ರದ ಸಮವಸ್ತ್ರವನ್ನು ತಯಾರಿಕೆಯಲ್ಲಿ ತೊಡಗಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ರಾಮನಗರ ವೇದಿಕೆಯಲ್ಲಿ ಗಲಾಟೆ, ಮಾಗಡಿಯಲ್ಲಿ ಹೊಗಳಿಕೆ : ಸುರೇಶ್ Vs ಅಶ್ವಥ್ ನಾರಾಯಣ್
ಭಾರತೀಯ ಗೃಹ ಸಚಿವಾಲಯದ ಪ್ರಕಾರ, ಯೋಧರು ವಿವಿಧ ಪ್ರದೇಶ, ಹವಾಮಾನ ಪರಿಸ್ಥಿತಿಯನ್ನು ಗಮನಿಸಿಕೊಂಡು ಆಯಾ ವಾತಾವರಣಕ್ಕೆ ಅನುಗುಣವಾಗಿ ಸಮವಸ್ತ್ರವನ್ನು ವಿನ್ಯಾಸಗೊಳಿಸಲಾಗುತ್ತಿದೆ. ಈಗಿರುವ ಟೆರ್ರಿಕಾಟ್ ಸಮವಸ್ತ್ರ ಯೋಧರಿಗೆ ಅಷ್ಟು ಆರಾಮದಾಯಕವಾಗಿ ಇಲ್ಲದೆ ಇರುವುದರಿಂದಾಗಿ ಹೊಸ ಸಮವಸ್ತ್ರ ವಿನ್ಯಾಸಗೊಳಿಸಲಾಗಿದೆ.
ಸಮವಸ್ತ್ರದ ಬಣ್ಣ:
ಹಿಂದಿನ ಸಮವಸ್ತ್ರದ ಬಣ್ಣದಲ್ಲೇ ಸ್ವಲ್ಪ ಬದಲಾವಣೆಗೆ ಮಾಡಲಾಗುತ್ತಿದ್ದು ಆಲಿವ್ ಮತ್ತು ಮಣ್ಣಿನ ಬಣ್ಣದೊಂದಿಗೆ ಹೊಸ ಸಮವಸ್ತ್ರ ತಯಾರಾಗುತ್ತಿದೆ. ಹೊಸ ಸಮವಸ್ತ್ರದ ವಿನ್ಯಾಸದಲ್ಲಿ ಕೂಡ ಬದಲಾವಣೆ ಮಾಡಲಾಗಿದ್ದು, ಹೆಚ್ಚು ಜೇಬುಗಳನ್ನು ಅಂಗಿಯಲ್ಲಿ ಇರಿಸಲಾಗಿದೆ. ಉಳಿದಂತೆ ಬೇಲ್ಟ್ ಕೂಡ ಸಮವಸ್ತ್ರಕ್ಕೆ ಸರಿಹೊಂದುವಂತೆ ಮಾರ್ಪಾಡು ಮಾಡಲಾಗುತ್ತಿದೆ.
ಈ ಹಿಂದೆ ಸಮವಸ್ತ್ರದಲ್ಲಿ ಆದ ಬದಲಾವಣೆ:
ಈ ಹಿಂದೆ ಮೂರು ಬಾರಿ ಭಾರತೀಯ ಯೋಧರ ಸಮವಸ್ತ್ರದಲ್ಲಿ ಬದಲಾವಣೆ ಆಗಿತ್ತು. ಮೊದಲ ಬಾರಿಗೆ ಭಾರತ ಹಾಗೂ ಪಾಕಿಸ್ತಾನ ಬೇರೆ, ಬೇರೆ ಆದಾಗ ಸಮವಸ್ತ್ರದಲ್ಲೂ ಬದಲಾವಣೆ ತರಲಾಯಿತು. ಆ ಬಳಿಕ 1980ರಲ್ಲಿ ಬದಲಾವಣೆ ಮಾಡಲಾಯಿತು. ನಂತರ 2005ರಲ್ಲಿ ಸಿಆರ್‍ಪಿಎಫ್ ಮತ್ತು ಬಿಎಸ್‍ಎಫ್ ಸೈನ್ಯದ ಸಮವಸ್ತ್ರದಲ್ಲಿ ಬದಲಾವಣೆ ಆಗಿತ್ತು.