ರಾಯಚೂರು: ಜಿಲ್ಲೆಯಲ್ಲಿ ನಡೆಯುತ್ತಿರುವ ವಿವಿಧ ಸೈನಿಕ ಹುದ್ದೆಗಳ ನೇಮಕಾತಿ ರ‍್ಯಾಲಿಯಲ್ಲಿ ಬಂದಿರುವ ಸಾವಿರಾರು ಯುವಕರು ರಾತ್ರಿ ಮಲಗಲು ಜಾಗವಿಲ್ಲದೆ ರಸ್ತೆ ಬದಿಯಲ್ಲಿ ಚಳಿಯಲ್ಲೇ ಸೂರಿಲ್ಲದೆ ಮಲಗುತ್ತಿದ್ದಾರೆ.
ಇಲ್ಲಿನ ಕೃಷಿ ವಿವಿಯಲ್ಲಿ ನಡೆಯುತ್ತಿರುವ ಭಾರತೀಯ ಸೇನೆಯ ನೇಮಕಾತಿ ರ‍್ಯಾಲಿಗೆ ಒಟ್ಟು 34,492 ಸೇನಾ ಉದ್ಯೋಗಾರ್ಥಿಗಳು ಬಂದಿದ್ದಾರೆ. ಆದರೆ ಜಿಲ್ಲಾಡಳಿತವಾಗಲಿ, ಸೇನಾ ನೇಮಕಾತಿ ಅಧಿಕಾರಿಗಳಾಗಲಿ ಊಟ, ವಸತಿ ವ್ಯವಸ್ಥೆ ಮಾಡಿಲ್ಲ. ಡಿಸೆಂಬರ್ 11 ರಿಂದ 20ರ ವರೆಗೆ ನೇಮಕಾತಿ ರ‍್ಯಾಲಿ ನಡೆಯುತ್ತಿದ್ದು, ದೂರದ ಊರುಗಳಿಂದ ಬಂದ ಯುವಕರು ಮಲಗಲು ಜಾಗವಿಲ್ಲದೆ ರಸ್ತೆ ಬದಿಯಲ್ಲೇ ಚಳಿಯಲ್ಲಿ ನಡುಗುತ್ತಾ ಮಲಗುತ್ತಿದ್ದಾರೆ.
Advertisement
Advertisement
ನಗರದ ಈಶ್ವರ ದೇವಾಲಯ ಸೇವಾ ಸಮಿತಿ ಊಟ, ತಿಂಡಿಯ ವ್ಯವಸ್ಥೆ ಹಾಗೂ ರೋಟರಿ ಕ್ಲಬ್ ಕುಡಿಯುವ ನೀರಿನ ವ್ಯವಸ್ಥೆ ಮಾಡಿದೆ. ಆದರೆ ವಸತಿ ವ್ಯವಸ್ಥೆಯಿಲ್ಲದೆ ಭಾವಿ ಸೈನಿಕರು ಈಗಾಗಲೇ ಚಳಿಯಲ್ಲಿ ನಡುಗುವಂತಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv