ನವದೆಹಲಿ: 17 ಸಾವಿರ ಅಡಿ ಎತ್ತರದಲ್ಲಿ ಕೆಟ್ಟು ನಿಂತ ಹೆಲಿಕಾಪ್ಟರ್ ರಿಪೇರಿ ಮಾಡಿ ನಮ್ಮ ಯೋಧರು ವಿಶ್ವದಾಖಲೆ ನಿರ್ಮಿಸಿದ್ದಾರೆ.
ಸಿಯಾಚಿನ್ ಖಾಂದ ಗ್ಲೇಸಿಯರ್ ಪ್ರದೇಶದಲ್ಲಿ ಕೆಟ್ಟು ನಿಂತಿದ್ದ ಯುದ್ಧ ಹೆಲಿಕಾಪ್ಟರನ್ನು ರಿಪೇರಿ ಮಾಡಿ ಬೇಸ್ ಕ್ಯಾಂಪ್ ಗೆ ವಾಪಸ್ ತಂದು ಇತಿಹಾಸ ಸೃಷ್ಟಿಸಿದ್ದಾರೆ. ಕಳೆದ ಜನವರಿಯಲ್ಲಿ ಎಎಲ್‍ಎಚ್ ಧ್ರುವ ಹೆಲಿಕಾಪ್ಟರ್ ಸೈನಿಕರಿಗೆ ನಿತ್ಯ ಬಳಕೆಯ ವಸ್ತುಗಳನ್ನು ಪೂರೈಸಲು ಗ್ಲೇಸಿಯರ್ ಗೆ ತೆರಳಿತ್ತು.
Advertisement
Advertisement
ತಾಂತ್ರಿಕ ದೋಷದಿಂದಾಗಿ ಹೆಲಿಕಾಪ್ಟರ್ ಅನ್ನು ಮಂಜಿನ ಮೇಲೆ ಇಳಿಸಲಾಗಿತ್ತು. ಮೈನಸ್ 25 ರಿಂದ 30 ಡಿಗ್ರಿ ಸೆಲ್ಸಿಯಸ್ ತಾಪಮಾನವಿರುವ ಈ ಪ್ರದೇಶದಲ್ಲಿ ರಿಪೇರಿ ಮಾಡೋದು ಕಷ್ಟವಾಗಿತ್ತು. ಛಲ ಬಿಡದ ಎಎಲ್‍ಎಚ್ ಸ್ಕ್ವಾಡ್ರನ್ 203ನ ಪೈಲಟ್‍ಗಳು ಮತ್ತು ತಂತ್ರಜ್ಞರು ಜುಲೈನಲ್ಲಿ ಎಂಜಿನ್ ಮತ್ತು ಬ್ಲೇಡ್‍ಗಳ ರಿಪೇರಿ ಮಾಡಿ ಯಶಸ್ವಿಯಾಗಿದ್ದರು.
Advertisement
ಕಳೆದ ಹಲವು ವರ್ಷಗಳಿಂದ 40ಕ್ಕೂ ಹೆಚ್ಚು ಕಾಪ್ಟರ್ ಗಳು ಹೀಗೆ ಮಂಜಿನಲ್ಲಿ ಕಣ್ಮರೆಯಾಗಿದ್ದು, ಸಿಯಾಚಿನ್ ಗ್ಲೇಸಿಯರ್ ಪ್ರದೇಶದಲ್ಲಿ ಆಪರೇಷನ್ ಮೇಘದೂತ್ ಪ್ರಾರಂಭವಾದ ನಂತರ ಇದೇ ಮೊದಲ ಬಾರಿಗೆ ಗ್ಲೇಸಿಯರ್ ನಲ್ಲಿ ಕೆಟ್ಟು ನಿಂತಿದ್ದ ಹೆಲಿಕಾಪ್ಟರನ್ನು ರಿಪೇರಿ ಮಾಡಿ ತರಲಾಗಿದೆ. ಇದುವರೆಗೆ ಸುಮಾರು 40 ಹೆಲಿಕಾಪ್ಟರ್ ಗಳು ಗ್ಲೇಸಿಯರ್ ನಲ್ಲಿ ಕೆಟ್ಟು ನಿಂತಿವೆ ಅಥವಾ ಅಪಘಾತಕ್ಕೀಡಾಗಿವೆ. ಈ ಹೆಲಿಕಾಪ್ಟರ್ ಗಳನ್ನು ವಾಪಸ್ ತರಲು ಸಾಧ್ಯವಾಗಿಲ್ಲ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv