ನವದೆಹಲಿ: ನಾಳೆಯಿಂದ ಮೂರು ದಿನಗಳ ಕಾಲ ಲಡಾಖ್‍ನ ದ್ರಾಸ್‍ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆಗೆ ಭಾರತೀಯ ಸೇನೆ ಸಿದ್ಧತೆ ನಡೆಸಿದೆ.
ಪ್ರಮುಖ ಪರ್ವತಾರೋಹಿ, ಪದ್ಮಭೂಷಣ ಪುರಸ್ಕೃತರಾದ ಬಚ್ಚೇಂದ್ರಿಪಾಲ್ ನೇತೃತ್ವದಲ್ಲಿ ಕಳೆದ ಐದು ತಿಂಗಳಿಂದ ಸುದೀರ್ಘ ಹಿಮಾಲಯ ಯಾತ್ರೆ ನಡೆಸಿರುವ 50 ವರ್ಷ ದಾಟಿದ 12 ಮಹಿಳೆಯರ ತಂಡ ಪ್ರಮುಖ ಆಕರ್ಷಣೆ ಆಗಲಿದೆ. ವಿಜಯ್ ದಿವಸ್ ಭಾಗವಾಗಿ ಫಿಟ್@50ಪ್ಲಸ್ ಹೆಸರಿನಲ್ಲಿ ಅರುಣಾಚಲದ ಪಾಂಗ್-ಸೌ ಕಣಿವೆಯಲ್ಲಿ ಈ ಯಾತ್ರೆ ಶುರುವಾಗಿತ್ತು. ಒಟ್ಟು 37 ಪರ್ವತಗಳನ್ನು ದಾಟಿ, 4,977 ಕಿ.ಮೀ ಪ್ರಯಾಣಿಸಿರುವ ಅವರು ನಾಳೆ ಬೆಳಗ್ಗೆ ದ್ರಾಸ್ ತಲುಪಲಿದ್ದಾರೆ. ನಾಳಿದ್ದು ಈ ತಂಡವನ್ನು ಗೌರವಿಸಲಾಗುತ್ತದೆ. ಇದನ್ನೂ ಓದಿ: ಗಿಲ್, ಧವನ್ ಧಮಾಕ – ವಿಂಡೀಸ್ ವಿರುದ್ಧ ಭಾರತಕ್ಕೆ ರೋಚಕ ಜಯ
1999ರಲ್ಲಿ ಕಾರ್ಗಿಲ್‍ಗೆ ಪಾಕಿಸ್ತಾನ ಸೇನೆ ಎಂಟ್ರಿ ಕೊಟ್ಟಿತ್ತು. ಭಾರತೀಯ ಸೇನೆ ಆಪರೇಷನ್ ವಿಜಯ್ ಕೈಗೊಂಡಿತ್ತು. ಮೇ ಯಿಂದ ಜುಲೈವರೆಗೂ ಈ ಯುದ್ಧ ನಡೆದಿತ್ತು. ಭಾರತೀಯ ಸೇನಾ ಪಡೆ ವಿರೋಚಿತ ಗೆಲುವು ಸಾಧಿಸಿತ್ತು. ಭಾರತದ 527 ಯೋಧರು ಹುತಾತ್ಮರಾಗಿದ್ದರು. ಇದನ್ನೂ ಓದಿ: ತೃಣಮೂಲ ಶಾಸಕ ಪಾರ್ಥ ಚಟರ್ಜಿ ಆಪ್ತೆ ಮನೆ ಮೇಲೆ ಇಡಿ ರೇಡ್ – 20 ಕೋಟಿ ವಶ