ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಬುಧವಾರ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಎನ್ಕೌಂಟರ್ನಲ್ಲಿ ಸೇನಾ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ.
Advertisement
ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆ ಭಯೋತ್ಪಾದಕರಿದ್ದ ಕುಲ್ಗಾಮ್ ಸ್ಥಳಕ್ಕೆ ಪ್ರವೇಶಿಸಿ ಗುಂಡಿನ ದಾಳಿ ಪ್ರಾರಂಭಿಸಿದೆ. ಈ ವೇಳೆ 34 ಆರ್ಆರ್ನ ಸೇನಾ ಯೋಧ ಜೈ ಕುಮಾರ್ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಸ್ತುತ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: 2 ಲಡಾಖ್ ಪರ್ವತವನ್ನು ಹತ್ತಿದ 13 ವರ್ಷದ ಪೋರ
Advertisement
Advertisement
ದಕ್ಷಿಣ ಕಾಶ್ಮೀರದ ಕುಲ್ಗಾಮ್ನ ಯರಿಪೋರಾದ ಬ್ರೈಹಾರ್ಡ್ ಕಥ್ಪೋರಾ ಪ್ರದೇಶದಲ್ಲಿ ಎನ್ಕೌಂಟರ್ ನಡೆಯಿತು. ಈ ವೇಳೆ 2 ರಿಂದ 3 ಉಗ್ರರು ಸಿಕ್ಕಿಬಿದ್ದಿದ್ದಾರೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.