– 6 ತಿಂಗಳ ಹಿಂದಷ್ಟೇ ಸೇನೆ ಸೇರಿದ್ದ ಲೆಫ್ಟಿನೆಂಟ್
ಗ್ಯಾಂಗ್ಟಾಕ್: ತನ್ನ ಸಹ ಸೈನಿಕನನ್ನು ರಕ್ಷಿಸಲು ಹೊಳೆಗೆ ಹಾರಿದ ಭಾರತೀಯ ಸೇನಾ ಯೋಧ (Army Officer) ಪ್ರವಾಹಕ್ಕೆ ಸಿಲುಕಿ ದಾರುಣ ಸಾವಿಗೀಡಾಗಿರುವ ಘಟನೆ ಸಿಕ್ಕಿಂನಲ್ಲಿ ನಡೆದಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಸೇನೆಗೆ ನಿಯೋಜನೆಗೊಂಡಿದ್ದ ಸಿಕ್ಕಿಂ ಸ್ಕೌಟ್ಸ್‌ನ 23 ವರ್ಷದ ಲೆಫ್ಟಿನೆಂಟ್ ಶಶಾಂಕ್ ತಿವಾರಿ (Lieutenant Shashank Tiwar) ಮೃತಪಟ್ಟವರು. ಸಿಕ್ಕಿಂನಲ್ಲಿರುವ (Sikkim) ಯುದ್ಧತಂತ್ರದ ಕಾರ್ಯಾಚರಣಾ ನೆಲೆಯ ಕಡೆಗೆ ಮಾರ್ಗ ತೆರೆಯುವ ಗಸ್ತು ನಡೆಸುತ್ತಿದ್ದರು. ಭವಿಷ್ಯದ ನಿಯೋಜನೆಗಾಗಿ ಸಿದ್ಧವಾಗುತ್ತಿರುವ ಪ್ರಮುಖ ಪೋಸ್ಟ್ ಕಡೆಗೆ ಹೋಗುತ್ತಿದ್ದಾಗ, ಗಸ್ತು ತಂಡದ ಸದಸ್ಯರಲ್ಲಿ ಒಬ್ಬರು ಬೆಳಗ್ಗೆ 11 ಗಂಟೆ ಸುಮಾರಿಗೆ ಮರದ ಸೇತುವೆಯನ್ನು ದಾಟುವಾಗ ಕಾಲು ಜಾರಿ ಬಿದ್ದರು. ಇದನ್ನೂ ಓದಿ: ಬ್ರಿಜೇಶ್ ಚೌಟ ಸೇರಿ ಭಾರತ ಸಂಸದರ ನಿಯೋಗ ಆಗಮಿಸುವ ಹೊತ್ತಲ್ಲೇ ಮಾಸ್ಕೋ ಏರ್‌ಪೋರ್ಟ್‌ನಲ್ಲಿ ಡ್ರೋನ್ ದಾಳಿ!
ಸೇತುವೆಯಿಂದ ಬಿದ್ದು ಪರ್ವತದ ಹೊಳೆಯಲ್ಲಿ ಸಿಲುಕಿ ಅಗ್ನಿವೀರ್ ಸ್ಟೀಫನ್ ಸುಬ್ಬಾ ಕೊಚ್ಚಿ ಹೋದರು. ಮುಳುಗುತ್ತಿದ್ದ ಸುಬ್ಬಾ ಅವರನ್ನು ರಕ್ಷಿಸಲು ಲೆಫ್ಟಿನೆಂಟ್ ತಿವಾರಿ ನೀರಿಗೆ ಹಾರಿದರು. ಮತ್ತೊಬ್ಬ ಸೈನಿಕ ನಾಯಕ್ ಪುಕಾರ್ ಕಟೀಲ್ ತಕ್ಷಣವೇ ಬೆಂಬಲವಾಗಿ ಹಿಂಬಾಲಿಸಿದರು. ಅವರು ಮುಳುಗುತ್ತಿದ್ದ ಅಗ್ನಿವೀರ್ ಅವರನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.
ಸುಬ್ಬಾ ಅವರನ್ನು ಸುರಕ್ಷಿತವಾಗಿ ಕರೆತರುವಷ್ಟರಲ್ಲಿ, ಲೆಫ್ಟಿನೆಂಟ್ ತಿವಾರಿ ಅವರು ಬಲವಾದ ಪ್ರವಾಹದಲ್ಲಿ ಕೊಚ್ಚಿಹೋದರು. ಅವರ ದೇಹವು ಸುಮಾರು 30 ನಿಮಿಷಗಳ ನಂತರ 800 ಮೀಟರ್ ಕೆಳಗೆ ಪತ್ತೆಯಾಗಿತ್ತು. ಅವರ ಪೋಷಕರು ಮತ್ತು ಸಹೋದರಿಯನ್ನು ಅಗಲಿದ್ದಾರೆ. ಇದನ್ನೂ ಓದಿ: Delhi Election| ಆಪ್‌ಗಿಂತ ಮೂರು ಪಟ್ಟು ಹೆಚ್ಚು ಖರ್ಚು ಮಾಡಿತ್ತು ಕಾಂಗ್ರೆಸ್ – 68 ಮಂದಿಗೆ ಬಿಜೆಪಿಯಿಂದ ತಲಾ 25 ಲಕ್ಷ
ಚಿಕ್ಕ ವಯಸ್ಸು ಮತ್ತು ಅಲ್ಪಾವಧಿಯ ಸೇವೆಯ ಹೊರತಾಗಿಯೂ ಲೆಫ್ಟಿನೆಂಟ್ ತಿವಾರಿ ಮುಂದಿನ ಪೀಳಿಗೆಯ ಸೈನಿಕರಿಗೆ ಸ್ಫೂರ್ತಿ ನೀಡುವ ಧೈರ್ಯ ಮತ್ತು ಸೌಹಾರ್ದತೆಯ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ ಎಂದು ಭಾರತೀಯ ಸೇನೆ ಹೇಳಿದೆ.