ಶ್ರೀನಗರ: ಜಮ್ಮು ಕಾಶ್ಮೀರ ಪುಲ್ವಾಮಾ ದಾಳಿ ನಡೆದ 48 ಗಂಟೆಗಳ ಅವಧಿಯಲ್ಲೇ ಸುಧಾರಿತ ಐಇಡಿ ಸ್ಫೋಟ ಸಂಭವಿಸಿ 31 ವರ್ಷದ ಮೇಜರ್ ಚಿತ್ರೇಶ್ ಸಿಂಗ್ ಬಿಶ್ಟ್ ಹುತಾತ್ಮರಾಗಿದ್ದರು.
ರಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್‍ನ ಲಾಮಾ ಪ್ರದೇಶದಲ್ಲಿ ಶನಿವಾರ ಸಂಜೆ 3 ಗಂಟೆಯ ವೇಳೆಗೆ ಸ್ಫೋಟ ಸಂಭವಿಸಿತ್ತು. ಸೇನಾ ಯೋಧರು ಗಸ್ತು ತಿರುಗುತ್ತಿರುವ ವೇಳೆ ಮಣ್ಣಿನಲ್ಲಿ ಹೂತ್ತಿಟ್ಟ ಕೆಲ ವಸ್ತು ಪತ್ತೆಯಾಗಿತ್ತು. ಅದನ್ನು ಪರಿಶೀಲಿಸುತ್ತಿದ್ದ ವೇಳೆ ಐಇಡಿ ಏಕಾಏಕಿ ಬ್ಲಾಸ್ಟ್ ಆಗಿ ಮೇಜರ್ ವೀರಮರಣ ಅಪ್ಪಿದ್ದಾರೆ.
General Bipin Rawat #COAS & all ranks salute supreme sacrifice of Major Chitresh Singh Bisht & offer sincere condolences to the family. #BraveSonsOfIndia pic.twitter.com/UJcR4spd0D
— ADG PI – INDIAN ARMY (@adgpi) February 16, 2019
ಈ ಕುರಿತು ಮಾಹಿತಿ ನೀಡಿರುವ ಸೇನಾ ಅಧಿಕಾರಿ ದೇವೇಂದ್ರ ಆನಂದ್, ನೆಲದಲ್ಲಿ ಪತ್ತೆಯಾಗಿದ್ದ ಸ್ಫೋಟಗಳಲ್ಲಿ ಒಂದು ಐಇಡಿಯನ್ನು ಮೇಜರ್ ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಿದ್ದರು. ಆದರೆ ಎರಡನೇ ಸ್ಫೋಟಕ ನಿಷ್ಕ್ರಿಯಗೊಳಿಸುವ ವೇಳೆ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಮತ್ತೊರ್ವ ಯೋಧ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಉತ್ತರಾಖಂಡದ ಡೆಕರಾಡೂನ್ ಸೇರಿದ್ದ ಮೇಜರ್ ಚಿತ್ರೇಶ್ ಸಿಂಗ್ ಅವರಿಗೆ ಮುಂದಿನ ತಿಂಗಳು ವಿವಾಹ ಕಾರ್ಯಕ್ರಮ ನಿಗಧಿಯಾಗಿತ್ತು. ಡೆಹರಾಡೂನ್‍ನಲ್ಲೇ ವಿವಾಹ ಸಮಾರಂಭ ನಡೆಯಲು ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿತ್ತು ಎಂಬ ಮಾಹಿತಿ ಲಭಿಸಿದೆ.
ಗಡಿ ಗಸ್ತು ತಿರುಗುವ ಸೈನಿಕರನ್ನು ಗುರಿಯಾಗಿಸಿ ದಾಳಿ ನಡೆಸಲು ಉಗ್ರರು ಇಂತಹ ಐಇಡಿ ಸ್ಫೋಟಗಳನ್ನು ಭೂಮಿಯಲ್ಲಿ ಹೂತ್ತಿಟ್ಟರು ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.
Rajouri: Major Chitresh Singh Bisht leading the Bomb Disposal Team in Naushera sector defused one of the mines successfully. While neutralizing another mine, the device got activated and the officer suffered grievous injuries and lost his life. #JammuAndKashmir https://t.co/kJ2D4fuAap
— ANI (@ANI) February 16, 2019
ಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv