ಶ್ರೀನಗರ: ಕಾಶ್ಮೀರದ ಪೂಂಚ್ ಸೆಕ್ಟರ್‍ನಲ್ಲಿ ಗಡಿ ನಿಯಂತ್ರಣಾ ರೇಖೆಯ ಬಳಿ ಪಾಕಿಸ್ತಾನ ಸೈನಿಕರು ಗಡಿ ನಿಯಮ ಉಲ್ಲಂಘಿಸಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಓರ್ವ ಸೈನಿಕ ಹಾಗೂ ಅವರ ಪತ್ನಿ ಮೃತಪಟ್ಟಿದ್ದಾರೆ.
Advertisement
ಇಲ್ಲಿನ ಚಕ್ಕಾ ದಾ ಭಾಗ್ ಹಾಗೂ ಖರ್ರಿ ಕರ್ಮಾರಾ ಪ್ರದೇಶದ ಗ್ರಾಮಗಳಲ್ಲಿರುವ ಭಾರತೀಯ ನೆಲೆಗಳನ್ನ ಗುರಿಯಾಗಿಸಿಕೊಂಡು ಇಂದು ಬೆಳಿಗ್ಗೆ 6.30ರ ವೇಳೆಗೆ ಪಾಕ್ ಸೇನೆ ಮಾರ್ಟರ್ ಶೆಲ್ ದಾಳಿ ನಡೆಸಿದೆ.
Advertisement
ಘಟನೆಯಲ್ಲಿ ಯೋಧ ಮೊಹಮ್ಮದ್ ಶೌಕತ್ ಹಾಗೂ ಅವರ ಪತ್ನಿ ಸಾಫಿಯಾ ಬೀ ಮೃತಪಟ್ಟಿದ್ದು, ಅವರ ಇಬ್ಬರು ಮಕ್ಕಳಿಗೆ ಗಂಭಿರವಾಗಿ ಗಾಯವಾಗಿದೆ.
Advertisement
Advertisement
ಅಪ್ರಚೋದಿತ ದಾಳಿಗೆ ಭಾರತೀಯ ಸೈನಿಕರು ಕೂಡ ಪ್ರತ್ಯುತ್ತರ ನೀಡುತ್ತಿದ್ದಾರೆ ಎಂದು ವರದಿಯಾಗಿದೆ. ಸೇನಾ ಮೂಲಗಳ ಮಾಹಿತಿಯ ಪ್ರಕಾರ ಪಾಕಿಸ್ತಾನಿ ಸೈನಿಕರು 82 ಎಮ್‍ಎಮ್ ಹಾಗೂ 120 ಎಮ್‍ಎಮ್ ನ ಮಾರ್ಟರ್ ಶೆಲ್‍ಗಳನ್ನ ಬಳಸುತ್ತಿದ್ದಾರೆ. ಗುಪ್ತಚರ ಮಾಹಿತಿಯ ಪ್ರಕಾರ ಪಾಕಿಸ್ತಾನ ಈ ದಾಳಿಯನ್ನ ಬಳಸಿಕೊಂಡು ಉಗ್ರರನ್ನು ಗಡಿಯಿಂದ ಮತ್ತೊಂದು ಭಾಗಕ್ಕೆ ಕಳಿಸಬೇಕೆಂದಿದೆ ಎನ್ನಲಾಗಿದೆ.
J&K: Ceasefire violation by Pakistan in Poonch sector,Indian Army retaliating
— ANI (@ANI) July 8, 2017
#WATCH: Ceasefire violation by Pakistan in J&K's Poonch, two civilians killed. pic.twitter.com/r6kC3uTbp2
— ANI (@ANI) July 8, 2017
#UPDATE: Two of a family killed in ceasefire violation by Pakistan in J&K's Poonch. pic.twitter.com/7lXB6lx5G1
— ANI (@ANI) July 8, 2017