ಶ್ರೀನಗರ: ಕಾಶ್ಮೀರದ ಹಿಮದಲ್ಲಿ ದೃಢವಾಗಿ ನಿಂತಿರುವ ಸೇನಾ ಯೋಧರೊಬ್ಬರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಕಾಶ್ಮೀರದಲ್ಲಿಗ ಭೀಕರ ಹಿಮ ಬಿರುಗಾಳಿ ಬೀಸುತ್ತಿದ್ದು, ಇದೀಗ ಮೊಣಕಾಲು ಆಳವಾದ ಹಿಮದಲ್ಲಿ ಸೇನಾ ಯೋಧರೊಬ್ಬರು ಗನ್ ಹಿಡಿದುಕೊಂಡು ದೃಢವಾಗಿ ನಿಂತಿರುವ ವಿಡಿಯೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Advertisement
No easy hope or lies
Shall bring us to our goal,
But iron sacrifice
Of body, will, and soul.
There is but one task for all
One life for each to give
Who stands if Freedom fall? pic.twitter.com/X3p3nxjxqE
— PRO Udhampur, Ministry of Defence (@proudhampur) January 7, 2022
Advertisement
ರಕ್ಷಣಾ ಸಚಿವಾಲಯದ ಉದಂಪುರದ ಸಾರ್ವಜನಿಕ ಸಂಪರ್ಕ ಅಧಿಕಾರಿ ಟ್ವಿಟ್ಟರ್ ನಲ್ಲಿ”ಯಾವ ಸುಲಭದ ಭರವಸೆ ಅಥವಾ ಸುಳ್ಳುಗಳು ನಮ್ಮನ್ನು ಗುರಿಯೆಡೆಗೆ ಕರೆದೊಯ್ಯುವದಿಲ್ಲ. ಆದರೆ ತನು ಮನ ಹಾಗೂ ಆತ್ಮ ತ್ಯಾಗವೂ ನಿಮ್ಮನ್ನು ಗುರಿಯೆಡೆಗೆ ಕರೆದೊಯ್ಯುತ್ತದೆ. ಅಲ್ಲಿರುವುದು ಒಂದೇ ಒಂದು ಎಲ್ಲರೂ ಸಾಧಿಸಬೇಕಾದ ಕಾರ್ಯ, ಸ್ವಾತಂತ್ರ್ಯ ಪತನಗೊಂಡಾಗ ಎದ್ದು ನಿಲ್ಲುವರ್ಯಾರು?” ಎಂದು ಬರೆದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಕರ್ಫ್ಯೂ ವೇಳೆ ಕ್ರಿಕೆಟ್ ಆಡಬಹುದೇ – ಯುವಕನ ಪ್ರಶ್ನೆಗೆ ಪೊಲೀಸರ ‘ಸಿಲ್ಲಿ ಪಾಯಿಂಟ್’ ಉತ್ತರ
Advertisement
Advertisement
ವೀಡಿಯೋವು 7 ಲಕ್ಷಕ್ಕೂ ಹೆಚ್ಚು ವ್ಯೂ ಪಡೆದುಕೊಂಡಿದೆ. ಜನರು ಸೈನಿಕನ ತಾಳ್ಮೆ ಮತ್ತು ಶಕ್ತಿಗೆ ಕೆಲವರು ಬೆರಗಾದರೆ, ಇತರರು ಅಂತಹ ಕಠಿಣ ಪರಿಸ್ಥಿತಿಗಳ ನಡುವೆ ದೇಶವನ್ನು ರಕ್ಷಿಸಿದ್ದಕ್ಕಾಗಿ ಅವನಿಗೆ ಸೆಲ್ಯೂಟ್ ಹೊಡೆದು. ಇದನ್ನೂ ಓದಿ: ಇಂದು 8,906 ಪಾಸಿಟಿವ್ 4 ಸಾವು – ಬೆಂಗಳೂರಿನಲ್ಲಿ 7,113 ಮಂದಿಗೆ ಸೋಂಕು