ಜೈಪುರ: ಭಾರತೀಯ ಸೇನಾ ಸಿಬ್ಬಂದಿ ಪಾಕಿಸ್ತಾನದ ಹನಿಟ್ರ್ಯಾಪ್‍ಗೆ ಸಿಲುಕಿ ಮಾಹಿತಿ ಸೋರಿಕೆ ಮಾಡಿದ್ದಾನೆ ಎಂದು ಬಂಧಿಸಲಾಗಿದೆ.
ಪಾಕಿಸ್ತಾನಿ ಮಹಿಳಾ ಏಜೆಂಟರು ಭಾರತೀಯ ಸೇನಾ ಸಿಬ್ಬಂದಿ ಶಾಂತಿಮಯ್ ರಾಣಾ(24)ನನ್ನು ಹನಿಟ್ರ್ಯಾಪ್ ಮಾಡಿದ್ದಾರೆ. ಈ ಹಿನ್ನೆಲೆ ಪಾಕಿಸ್ತಾನಕ್ಕೆ ಸೇನಾ ಮಾಹಿತಿಯನ್ನು ಸೋರಿಕೆ ಮಾಡಿದ್ದಾನೆ ಎಂಬ ಆರೋಪದ ಮೇಲೆ ರಾಣಾನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಸ್ತುತ ರಾಣಾ ವಿರುದ್ಧ 1923ರ ಅಧಿಕೃತ ರಹಸ್ಯ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದನ್ನೂ ಓದಿ: ಕಾಂಗೋದಲ್ಲಿ ಯುಎನ್ ವಿರೋಧಿ ಪ್ರತಿಭಟನೆ: ಇಬ್ಬರು ಭಾರತೀಯ ಶಾಂತಿಪಾಲನ ಸೈನಿಕರು ಹುತಾತ್ಮ
Advertisement
Advertisement
ರಾಣಾ ಪಶ್ಚಿಮ ಬಂಗಾಳದ ಬಾಗುಂದ ಜಿಲ್ಲೆಯ ಕಾಂಚನಪುರ ಗ್ರಾಮದ ನಿವಾಸಿ. ಅವನನ್ನು ಜೈಪುರದ ಘಟಕದಲ್ಲಿ ನಿಯೋಜಿಸಲಾಗಿತ್ತು. ರಾಜಸ್ಥಾನ ಪೊಲೀಸ್ ಗುಪ್ತಚರ ವಿಭಾಗದ ಮಹಾನಿರ್ದೇಶಕ ಉಮೇಶ್ ಮಿಶ್ರಾ ಈ ಕುರಿತು ಮಾತನಾಡಿದ್ದು, ಪಾಕಿಸ್ತಾನದ ಏಜೆಂಟ್‍ಗಳಾದ ಗುರ್ನೌರ್ ಕೌರ್ ಅಲಿಯಾಸ್ ಅಂಕಿತಾ ಮತ್ತು ನಿಶಾ ಸೋಶಿಯಲ್ ಮೀಡಿಯಾ ಮೂಲಕ ರಾಣಾನನ್ನು ಸಂಪರ್ಕಿಸಿದ್ದಾರೆ ಎಂದು ವಿವರಿಸಿದ್ದಾರೆ.
Advertisement
ಇಬ್ಬರು ಮಹಿಳೆಯರು ರಾಣಾ ನಂಬರ್ ತೆಗೆದುಕೊಂಡಿದ್ದು, ವಾಟ್ಸಾಪ್‍ನಲ್ಲಿ ಮಾತನಾಡುತ್ತಿದ್ದರು. ಮಹಿಳೆಯರು ಮೊದಲು ರಾಣಾನ ವಿಶ್ವಾಸವನ್ನು ಪಡೆದುಕೊಂಡಿದ್ದಾರೆ. ನಂತರ ಇಬ್ಬರು ರಾಣಾ ಬಳಿ ಗುಪ್ತಚರ ಮಾಹಿತಿಯನ್ನು ತೆಗೆದುಕೊಳ್ಳಲು ಪ್ರಾರಂಭಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ರಾಣಾ ಖಾತೆಗೂ ಒಂದಷ್ಟು ಹಣವನ್ನು ಹಾಕುತ್ತಿದ್ದರು ಎಂದು ತಿಳಿಸಿದ್ದಾರೆ.
Advertisement
ಸಂಪರ್ಕ ಮಾಡಿದ್ದು ಹೇಗೆ?
ಮಾರ್ಚ್ 2018 ರಿಂದ ರಾಣಾ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ. ಈ ವಿಚಾರವನ್ನು ತಿಳಿದುಕೊಂಡೆ ಪಾಕ್ ಮಹಿಳಾ ಏಜೆಂಟ್‍ರು ರಾಣಾನನ್ನು ಪರಿಚಯ ಮಾಡಿಕೊಂಡಿದ್ದಾರೆ. ನಂತರ ನಂಬರ್ ತೆಗೆದುಕೊಂಡು ವಾಟ್ಸಾಪ್ ಚಾಟ್, ವೀಡಿಯೋ ಮತ್ತು ಆಡಿಯೋ ಸಂದೇಶಗಳ ಮೂಲಕ ಮಹಿಳೆಯರು ಸಂಪರ್ಕದಲ್ಲಿದ್ದರು. ಇದನ್ನೂ ಓದಿ: ಭಯೋತ್ಪಾದಕರ ಎನ್‍ಕೌಂಟರ್ ವೇಳೆ ಸೇನಾ ಸಿಬ್ಬಂದಿಗೆ ಗಂಭೀರ ಗಾಯ
ಒಬ್ಬಳು ತನ್ನನ್ನು ಶಹಜಹಾನ್‍ಪುರ(ಉತ್ತರ ಪ್ರದೇಶ) ನಿವಾಸಿ ಎಂದು ರಾಣಾ ಬಳಿ ಪರಿಚಯ ಮಾಡಿಕೊಂಡಿದ್ದು, ಅಲ್ಲಿ ಮಿಲಿಟರಿ ಇಂಜಿನಿಯರಿಂಗ್ ಕೆಲಸ ಮಾಡುತ್ತಿದ್ದೆ ಎಂದು ಹೇಳಿಕೊಂಡಿದ್ದಳು. ಇನ್ನೊಬ್ಬ ಮಹಿಳೆ ತನ್ನ ಹೆಸರನ್ನು ನಿಶಾ, ತಾನು ಮಿಲಿಟರಿ ನರ್ಸಿಂಗ್‍ನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದಳು.
ಈ ಪರಿಣಾಮ ರಾಣಾ ಸಹ ಇಬ್ಬರನ್ನು ನಂಬಿದ್ದು, ಅವರು ಕೇಳಿದ ಗೌಪ್ಯ ದಾಖಲೆಗಳು, ಫೋಟೋ, ವೀಡಿಯೊಗಳನ್ನು ಕಳುಹಿಸಿದ್ದಾನೆ. ಅಲ್ಲದೇ ರಾಣಾ ತನ್ನ ರೆಜಿಮೆಂಟ್‍ನ ರಹಸ್ಯ ದಾಖಲೆಗಳು ಮತ್ತು ವ್ಯಾಯಾಮದ ವೀಡಿಯೋಗಳನ್ನು ಸಹ ಕಳುಹಿಸಿದ್ದ ಎಂದು ಗುಪ್ತಚಾರ ಇಲಾಖೆ ಮಾಹಿತಿ ಕೊಟ್ಟಿದೆ.