ಇಟಾನಗರ: ಭಾರತೀಯ ಸೇನಾ ಹೆಲಿಕಾಪ್ಟರ್ (Army Helicopter) ಒಂದು ಶುಕ್ರವಾರ ಅರುಣಾಚಲ ಪ್ರದೇಶದ (Arunachal Pradesh) ಅಪ್ಪರ್ ಸಿಯಾಂಗ್ ಜಿಲ್ಲೆಯ ಮಿಗ್ಗಿಂಗ್ ಗ್ರಾಮದಲ್ಲಿ ಪತನಗೊಂಡಿದೆ (Helicopter Crash). ಅಪಘಾತ ನಡೆದಿರುವ ಸ್ಥಳಕ್ಕೆ ರಕ್ಷಣಾ ತಂಡವನ್ನು ಕಳುಹಿಸಲಾಗಿದೆ ಎಂದು ಸೇನೆ ತಿಳಿಸಿದೆ.
ಇಂದು ಪತನವಾಗಿರುವ ಹೆಲಿಕಾಪ್ಟರ್ ಭಾರತೀಯ ಸೇನೆಗಾಗಿ ಹಿಂದೂಸ್ತಾನ್ ಏರೋನಾಟಿಕಲ್ಸ್ ಲಿಮಿಟೆಡ್ ತಯಾರಿಸಿದೆ. ರುದ್ರ ಎಂದು ಕರೆಯಲಾಗುವ ಅಡ್ವಾನ್ಸ್‌ಡ್ ಲೈಟ್ ಹೆಲಿಕಾಪ್ಟರ್ ಮಿಗ್ಗಿಂಗ್ ಗ್ರಾಮದಲ್ಲಿ ಪತನವಾಗಿದೆ. ಇದನ್ನೂ ಓದಿ: ವ್ಯರ್ಥವಾಯ್ತು 10 ಕೋಟಿ ಕೋವಿಶೀಲ್ಡ್ ಡೋಸ್
Advertisement
Advertisement
ವರದಿಗಳ ಪ್ರಕಾರ ಘಟನೆ ನಡೆದಿರುವ ಸ್ಥಳದಲ್ಲಿ ಅನುಕೂಲಕರ ರಸ್ತೆ ಸಂಪರ್ಕ ಇಲ್ಲ ಎನ್ನಲಾಗಿದೆ. ಇದೀಗ ಶೋಧ ನಡೆಸಲು ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದೆ. ಇದನ್ನೂ ಓದಿ: ಚಾಮುಂಡಿ ಬೆಟ್ಟದಲ್ಲಿ ಮತ್ತೆ ಭೂ ಕುಸಿತ